ತ್ರಿಭಾಷಾ ಸೂತ್ರಕ್ಕೆ ತಾಕೀತು


Team Udayavani, Feb 16, 2017, 12:32 PM IST

sg-siddaramaiah.jpg

ಬೆಂಗಳೂರು: ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯರ ಕಡೆಗಣನೆ ಮಾಡುವುದು ಅಸಂವಿಧಾನಿಕ ನಡೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 

ಮಹಾಲೇಖಪಾಲರ ಕಚೇರಿ, ಕೆನರಾ ಬ್ಯಾಂಕ್‌ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೇಂದ್ರ ಸ್ವಾಮ್ಯದ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು, ಮತ್ತು ಖಾಸಗಿ ಕಾರ್ಖಾನೆಗಳ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಅನುಷ್ಠಾನ, ನೇಮಕಾತಿಯಲ್ಲಿ ಸ್ಥಳೀಯರಿಗೆ ಉದ್ಯೋಗ, ತ್ರಿಭಾಷಾ ಸೂತ್ರ ಅಳವಡಿಸಿರುವ ಕುರಿತು ಪರಿಶೀಲನೆ ನಡೆಸಿದರು. 

“ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸ್ಪಷ್ಟ ಆದೇಶ ಇದ್ದರೂ ಸಂಸ್ಥೆಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, 15 ದಿನಗಳಲ್ಲಿ ಕನ್ನಡ ಅನುಷ್ಠಾನ ಮಾಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ,” ಸೂಚಿಸಿದರು. 

“ದೈನಂದಿನ ವ್ಯವಹಾರದಲ್ಲಿ ಕನ್ನಡ ಪತ್ರವ್ಯವಹಾರ ಕಷ್ಟ ಎಂದು ಹೇಳಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕನ್ನಡ ಅನುಷ್ಠಾನ ಕಷ್ಟ ಅನ್ನುವ ಮನಸ್ಸು ಬದಲಾಗಬೇಕು,” ಎಂದು ಹೇಳಿದರು. “ಡಾ. ಸರೋಜಿನಿ ಮಹಿಷಿ ವರದಿಯನ್ವಯ ನಿಯಮ ಪಾಲಿಸದೇ ಇರುವುದು ಆದೇಶದ ಸ್ಪಷ್ಟ ಉಲ್ಲಂಘನೆ. ಕೂಡಲೇ ತ್ರಿ ಭಾಷಾ ಸೂತ್ರ ಅಳವಡಿಸಿಕೊಂಡು ನೇಮಕ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು,” ಎಂದು ಸೂಚಿಸಿದರು. 

“”ಡಾ.ಸರೋಜಿನಿ ಮಹಿಷಿ ವರದಿಯ ಪುನರ್‌ ಪರಿಶೀಲನಾ ವರದಿಯ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ನೇಮಕಾತಿ ಪ್ರಕ್ರಿಯೆಯಲ್ಲಿ ವೃಂದ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.100ರಷ್ಟು, ಬಿ ವೃಂದದವರಿಗೆ ಶೇ.80ರಷ್ಟು ಮತ್ತು ‘ಎ’ ವಂದದವರಿಗೆ ಶೇ.65ರಷ್ಟು ಮೀಸಲಾತಿ ಒದಗಿಸುವ ರೀತಿಯಲ್ಲಿ ಕಾಯ್ದೆ ರೂಪಿಸುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸ್ಪಷ್ಟ ಆದೇಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿ ಮಾಡಲಾಗುವುದು,” ಎಂದು ತಿಳಿಸಿದರು.

ಪ್ರಗತಿಪರಿಶೀಲನಾ ಸಭೆಯಲ್ಲಿ ಡಾ.ಕೆ.ಮುರಳಿಧರ, ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸದಸ್ಯರುಗಳಾದ , ಪ್ರಕಾಶ್‌ ಜೈನ್‌, ಗಿರೀಶ್‌ ಪಟೇಲ್‌,  ಪ್ರಶಾಂತ್‌, ತಹಶೀಲ್ದಾರ್‌,  ರಕುಮಾರ್‌, ಉಪಕಾುìಕ ಆಯುಕ್ತರು, ನರಸಿಂಹಮೂರ್ತಿ, ಕಾರ್ಯದರ್ಶಿಗಳು, ಕನ್ನಡ ಗಣಕಪರಿಷತ್ತು, ಬಿ.ಎಂ.ಕೃಷ್ಣೇಗೌಡ, ನಿವೃತ್ತ ಎಸ್‌ಜಿಸಿ, ಮಹಾಲೇಖಪಾಲರ ಕಚೇರಿ,  ರಿಚರ್ಡ್‌ ಲೂುàಸ್‌, ನಿವೃತ್ತ ರಿಯ ಲೆಕ್ಕಿಗರು, ಮಹಾಲೇಖಪಾಲರ ಕಚೇರಿ, ನಾ.ಶ್ರೀಧರ್‌, ಕಾರ್ಯದರ್ಶಿ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ರಾ.ನಂ.ಚಂದ್ರಶೇಖರ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ

Marathi Teacher Issue; ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drainage

Bengaluru ಒಳಚರಂಡಿ: 3000 ಅನಧಿಕೃತ ಸಂಪರ್ಕ ಪತ್ತೆ

5

Dengue fever: ಪಾಲಿಕೆ ಆಯುಕ್ತರಿಗೂ ಡೆಂಘಿ ಜ್ವರ; ಹೆಚ್ಚುತ್ತಿವೆ ಪ್ರಕರಣ

54

ತಾಯಿ ನಿಂದಿಸಿದ್ದಕ್ಕೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೂಲಿ ಕಾರ್ಮಿಕನ ಕೊಲೆ

Bengaluru: ರಾಡ್‌ನಿಂದ ಹೊಡೆದು ಯುವಕನ ಬರ್ಬರ ಹತ್ಯೆ

Bengaluru: ರಾಡ್‌ನಿಂದ ಹೊಡೆದು ಯುವಕನ ಬರ್ಬರ ಹತ್ಯೆ

3

ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ

Marathi Teacher Issue; ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

16-madamakki

Madamakki : ವಿಷ ಸೇವಿಸಿ ಆತ್ಮಹತ್ಯೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.