ಸಾಲಮನ್ನಾ ಕಮಿಷನ್‌ ದಂಧೆಗೆ ಹೆಲ್ಪ್ ಲೈನ್‌ ಕಡಿವಾಣ


Team Udayavani, Aug 21, 2018, 6:00 AM IST

help-line.jpg

ಬೆಂಗಳೂರು: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಲಾಭ ಪಡೆದ ರೈತರಿಗೆ ಪುನಃ ಸಾಲ ವಿತರಿಸಲು ಕೆಲವು ಸಹಕಾರ ಸಂಘಗಳ ಕಾರ್ಯದರ್ಶಿಗಳು ಕಮಿಷನ್‌ ಕೇಳುತ್ತಿದ್ದಾರೆ!

ಹೌದು, ಸರ್ಕಾರವೇ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಈ ರೀತಿ ಕಮಿಷನ್‌ ದಂಧೆಗೆ ಕಡಿವಾಣ ಹಾಕಲು ಹೆಲ್ಪ್ಲೈನ್‌ ಆರಂಭಿಸಲು ನಿರ್ಧರಿಸಿದೆ.

ಸಹಕಾರ ಇಲಾಖೆ ಶೀಘ್ರದಲ್ಲೇ ಹೆಲ್ಪ್ಲೈನ್‌ ಸಂಖ್ಯೆಯನ್ನು ಪ್ರಕಟಿಸಲಿದ್ದು, ಸಾಲ ಮನ್ನಾ ವಿಚಾರದಲ್ಲಿ ಸಂಘದ ಕಾರ್ಯದರ್ಶಿ ಸೇರಿದಂತೆ ಯಾರಾದರೂ ಕಮಿಷನ್‌ ಕೇಳಿದಲ್ಲಿ ರೈತರು ಈ ಸಂಖ್ಯೆಗೆ ನೇರವಾಗಿ ದೂರು ಸಲ್ಲಿಬಹುದು. ಈ ದೂರುಗಳ ಬಗ್ಗೆ ತನಿಖೆ ನಡೆಸಿ ಅದು ಸಾಬೀತಾದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೂಡ ತೀರ್ಮಾನಿಸಲಾಗಿದೆ.

ಈ ಕುರಿತು ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸುತ್ತೋಲೆ ಕಳುಹಿಸಿದ್ದು, ಸಹಕಾರಿ ಕ್ಷೇತ್ರದ ಹಣಕಾಸು ಸಂಸ್ಥೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಸಿದ್ದರಾಮಯ್ಯ  ಅವಧಿಯಲ್ಲಿ ರೈತರು ಸಹಕಾರ ಸಂಘಗಳಲ್ಲಿ ಮಾಡಿದ್ದ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿತ್ತು. ಇದರ ಲಾಭ ಪಡೆದ ರೈತರಿಗೆ ಪುನಃ ಸಾಲ ವಿತರಿಸುವ ಸಂದರ್ಭದಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಕಮಿಷನ್‌ ಕೇಳುತ್ತಿದ್ದರು ಎಂಬ ಬಗ್ಗೆ  ದೂರು ಬಂದಿದ್ದವು.ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊ ಳ್ಳ ಲಾ ಗಿದೆ. ಈ ಹೆಲ್ಪ್ಲೈನ್‌ ಮುಂದಿನ ದಿನಗಳಲ್ಲಿ ಹಾಲಿ ಸರ್ಕಾರದ ಸಾಲ ಮನ್ನಾ ಯೋಜನೆಗೂ ಇರುತ್ತದೆ. ಬೇನಾಮಿ ರೈತರ ಹೆಸರಿನಲ್ಲಿ ಸಾಲ ಮನ್ನಾ ಯೋಜನೆಯ ದುರುಪಯೋಗ ಮಾಡಿಕೊಳ್ಳುವುದು, ಲೆಕ್ಕ ಪುಸ್ತಕದಲ್ಲಿ ಹೊಂದಾಣಿಕೆ ಮಾಡಿ ರೈತರಿಗೆ ವಂಚನೆ ಮಾಡುವುದು ಮುಂತಾದ ಸಮಸ್ಯೆಗಳ ಬಗ್ಗೆ ಹಾಗೂ ಸಾಲ ಮನ್ನಾ ಮತ್ತು ಹೊಸ ಸಾಲದ ವಿಚಾರದಲ್ಲಿ ರೈತರಿಗೆ ತೊಂದರೆಯಾದಾಗಲೂ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಾಲ ಮನ್ನಾ ಆಗಿ ಹೊಸ ಸಾಲ ವಿತರಿಸುವಾಗ ಡಿಸಿಸಿ ಬ್ಯಾಂಕ್‌ ಸೇರಿ ಇತರೆ ಯಾವುದೇ ಬ್ಯಾಂಕಿನಲ್ಲಿ ರೈತರು ರುಪೇ ಕಾರ್ಡ್‌ ಪಡೆಯಲು ಹೊಂದಿರುವ ಉಳಿತಾಯ ಖಾತೆ ಮೂಲಕವೇ ಸಾಲ ವಿತರಿಸಬೇಕು. ರೈತರ ಸಾಲ ಮರುಪಾವತಿಗೆ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರದಿಂದ ಸಾಲ ಮನ್ನಾ ಮೊತ್ತ ಬಿಡುಗಡೆ ಆಗದೇ ಇದ್ದರೂ ಮರುಪಾವತಿ ಅವಧಿಯಿಂದ ಸರ್ಕಾರದಿಂದ ಹಣ ಬರುವವರೆಗಿನ ಅವಧಿಗೆ ಯಾವುದೇ ಬಡ್ಡಿ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬೆಳೆ ವಿಮೆ ಕಡ್ಡಾಯ
ಸಾಲ ಮನ್ನಾ ಸೌಲಭ್ಯ ಪಡೆಯುವ ರೈತರು ಮತ್ತೆ ಸಾಲ ಪಡೆಯುವಾಗ ಬೆಳೆ ವಿಮೆ ಮಾಡಿಕೊಳ್ಳುವುದು ಕಡ್ಡಾಯ. ವರ್ಷದ ಯಾವುದೇ ತಿಂಗಳಲ್ಲಿ ಹೊಸ ಸಾಲ ವಿತರಿಸಿದರೂ ಆ ವರ್ಷದ ಆರಂಭದಲ್ಲಿಯೇ ರೈತರು ಬೆಳೆಯುವ ಬೆಳೆಯ ವಿವರ ಪಡೆದು ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೈತರ ಸಾಲದ ಖಾತೆಯಿಂದ ಬೆಳೆ ವಿಮೆಗೆ ಹಣ ಪಡೆದುಕೊಳ್ಳಬಹುದು. ಆದರೆ, ಅದನ್ನು ಹೊರತುಪಡಿಸಿ ಒತ್ತಾಯ ಪೂರ್ವಕವಾಗಿ ಇತರೆ ಯಾವುದೇ ವೆಚ್ಚ ಅಥವಾ ಠೇವಣಿಯನ್ನು ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

– ಪ್ರದೀಪ್‌ಕುಮಾರ್‌ ಎಂ.

ಟಾಪ್ ನ್ಯೂಸ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

Mysore ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ: ಸಂಸದರಾದ ಬಳಿಕ ಯದುವೀರ್ ಮೊದಲ ಸುದ್ದಿಗೋಷ್ಠಿ

4–sagara-dengue

Sagaraದಲ್ಲಿ ಡೆಂಗ್ಯೂಗೆ ಮೊದಲ ಬಲಿ; ಆರೋಗ್ಯ ಇಲಾಖೆ ಸಿಬ್ಬಂದಿ ಮೃತ್ಯು

3-darshan

Renuka Swamy Case: ಪ್ರಕರಣದಲ್ಲಿ ಪವಿತ್ರಾ ಗೌಡ ಏನೂ ತಪ್ಪು ಮಾಡಿಲ್ಲ!.. ಮಾಜಿ ಪತಿ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.