ರೈತರನ್ನು ಬಂಡವಾಳ ಮಾಡಿಕೊಳ್ಳುವ ಹುನ್ನಾರ


Team Udayavani, Dec 30, 2018, 6:46 AM IST

raitarannu.jpg

ಬೆಂಗಳೂರು: “ಸಾಲಮನ್ನಾ ನೆಪದಲ್ಲಿ ರಾಜಕಾರಣಿಗಳು ರೈತರನ್ನು “ಕ್ಯಾಪಿಟಲ್‌’ (ಬಂಡವಾಳ) ಮಾಡಿಕೊಳ್ಳಲು ಹೊರಟಿದ್ದು, ಈ ಆಮಿಷಕ್ಕೆ ಯಾರೂ ಮಾರುಹೋಗಬಾರದು’ ಎಂದು ಲೇಖಕಿ ಡಾ.ವೀಣಾ ಬನ್ನಂಜೆ ತಿಳಿಸಿದರು. ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ “ಹವ್ಯಕ ಕೃಷಿರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

“ಜಾತಿ, ಉದ್ಯಮಗಳಿಗೆ ಆಮಿಷವೊಡ್ಡಿ ನಮ್ಮನ್ನು ಈಗಾಗಲೇ ಬಳಸಿಕೊಂಡಾಗಿದೆ. ಆದರೆ, ಕೃಷಿಕರು ಮಾತ್ರ ರಾಜಕಾರಣಿಗಳ ಕೈಗೆ ಸಿಕ್ಕಿಲ್ಲ. ಈಗ ಸಾಲಮನ್ನಾ ಮೂಲಕ ರೈತರನ್ನೂ ಬಂಡವಾಳವನ್ನಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ಇದಕ್ಕೆ ರೈತರು ಮಾರುಹೋಗಬಾರದು. ಅಷ್ಟಕ್ಕೂ ನಮ್ಮ ಸಾಲ ತೀರಿಸಲು ಅವರ್ಯಾರು? ನಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿ ಸ್ವಾಮಿ ಸಾಕು’ ಎಂದು ಒತ್ತಾಯಿಸಿದರು.

ಸಾಫ್ಟ್ವೇರ್‌ ಉದ್ಯೋಗಿಗಳು ಬಕೆಟ್‌ ಹಿಡಿದುಕೊಂಡು ಕಂಪನಿಯ ಬಾಸ್‌ಗಳ ಹಿಂದೆ ಓಡಾಡುತ್ತಿದ್ದಾರೆ. ತಲೆಬಾಗಿಸಿದರೆ, ಅವರೆಲ್ಲಾ ತಮ್ಮ ಬಾಸ್‌ನ ಶೂ ಹಾಕಿದ ಕಾಲುಗಳನ್ನು ನೋಡಬೇಕು. ತಲೆ ಎತ್ತಿದರೆ, ಬಾಸ್‌ನ ಗಿಂಜುವ ಮುಖ ಕಾಣುತ್ತದೆ. ಇವೆರಡೂ ಬಿಟ್ಟರೆ, ಸಾಫ್ಟ್ವೇರ್‌ ಉದ್ಯೋಗಿಗಳಿಗೆ ಬೇರೆ ಗತಿ ಇಲ್ಲ. ಆದರೆ, ಕೃಷಿಕರು ತಲೆ ಕೆಳಗೆ ಮಾಡಿದರೆ, ಭೂತಾಯಿ ಮತ್ತು ತಲೆಯೆತ್ತಿದರೆ ಸೂರ್ಯ-ಚಂದ್ರರನ್ನು ಕಾಣುತ್ತಾರೆ.

ಹೀಗಿರುವಾಗ, ನಮ್ಮ ಮುಂದೆ ಯಾರು ದೊರೆ? ನಮಗೆ ನಾವೇ ದೊರೆ ಎಂದ ವೀಣಾ ಅವರು, ಕೃಷಿ ಎನ್ನುವುದು ಖುಷಿ ಮತ್ತು ಋಷಿಯ ಸಂಗಮ ಎಂದು ಅಭಿಪ್ರಾಯಪಟ್ಟರು. ವಕೀಲ ಕೆ. ದಿವಾಕರ್‌ ಮಾತನಾಡಿ, ಬಹುತೇಕ ಹವ್ಯಕರು ಅಡಕೆ ಬೆಳೆ ಅವಲಂಬಿಸಿದ್ದಾರೆ. ಆದರೆ, ನಿಷೇಧದ ಗುಮ್ಮದಿಂದ ನಿತ್ಯ ಆತಂಕದಲ್ಲಿ ಬದುಕುವಂತಾಗಿದೆ. ಇದಕ್ಕೆ ಸರ್ಕಾರ ಶಾಶ್ವರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಸರ್ಕಾರ ಮತ್ತು ವಿಜ್ಞಾನಿಗಳು ವಿಫ‌ಲರಾಗಿದ್ದಾರೆ. ಇದರಿಂದ ಅಡಕೆ ನಿಷೇಧದ ಗುಮ್ಮ ಕಾಡುತ್ತಲೇ ಇದೆ. ಇದನ್ನು ಪರಿಹರಿಸಬೇಕು. ಅಲ್ಲದೆ, ಗ್ರಾಮೀಣ ಭಾಗದಲ್ಲಿರುವ ಹವ್ಯಕ ಯುವಕರಿಗೆ ಹೆಣ್ಣು ಕೊಡಲು ಸಮಾಜದಲ್ಲಿ ಹಿಂದೇಟು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ನಗರದ ಆಕರ್ಷಣೆ ಇದಕ್ಕೆ ಕಾರಣವಾಗಿದ್ದು, ಗ್ರಾಮೀಣ ಪ್ರದೇಶದ ಯುವಕರ ಬದುಕು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಸಮಾಜ ಚಿಂತನೆ ನಡೆಸಬೇಕು. ಅದೇ ರೀತಿ, ಮಠ-ಮಾನ್ಯಗಳ ಮೇಲೆ ಆಪಾದನೆಗಳು ಕೇಳಿಬಂದಾಗ, ಅದರ ಬಗ್ಗೆ ಕೋರ್ಟ್‌ನಲ್ಲಿ ತೀರ್ಪು ಕೊಟ್ಟಾಗಿದೆ. ಆದಾಗ್ಯೂ ಅಲ್ಲಲ್ಲಿ ಒಡಕು ದನಿಗಳು ಕೇಳಿಬರುತ್ತವೆ. ಅದಕ್ಕೆ ಸಮಾಜ ಉತ್ತರ ಕೊಡಬೇಕಾಗುತ್ತದೆ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, 2019ರ ಲೋಕಸಭಾ ಚುನಾವಣೆಯು ಒಂದು ಧರ್ಮಯುದ್ಧ. ಅದರಲ್ಲಿ ನಾವು ರಾಮನ ಕಡೆ ನಿಲ್ಲಬೇಕು. ಕೃಷಿಕರು, ಉದ್ಯಮಿಗಳೆಲ್ಲರೂ ಸೇರಿ ಭಾರತವನ್ನು ಮತ್ತೆ ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು. ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ ದಿಕ್ಸೂಚಿ ಭಾಷಣ ಮಾಡಿದರು. ಇದೇ ವೇಳೆ ಮಹಾಸಭಾದ ಅಮೃತ ಮಹೋತ್ಸವದ ಪ್ರಯುಕ್ತ 75 ಕೃಷಿ ಸಾಧಕರಿಗೆ “ಹವ್ಯಕ ಕೃಷಿರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟಾಪ್ ನ್ಯೂಸ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್‌ಗಳು ಸಕ್ಸಸ್‌

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.