ಪಾಲಿಕೆ ಖರ್ಚು ವೆಚ್ಚದ ಬಗ್ಗೆ ಹಣಕಾಸು ಆಯೋಗ ಚರ್ಚೆ


Team Udayavani, Feb 16, 2017, 12:19 PM IST

bbmp.jpg

ಬೆಂಗಳೂರು: ಕಾರ್ಯನಿರ್ವಹಣೆ, ಅನುದಾನ ಹಂಚಿಕೆಗೆ ಸಂಬಂಧಿಸಿ ದಂತೆ ರಾಜ್ಯ ನಾಲ್ಕನೇ ಹಣಕಾಸು ಆಯೋಗವು ಬುಧವಾರ ಮೇಯರ್‌ ಸೇರಿದಂತೆ ಬಿಬಿಎಂಪಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿತು. 

ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಪಾಲಿಕೆ ಮೂಲಸೌಕರ್ಯ, ಆಸ್ತಿ ತೆರಿಗೆ ಸಂಗ್ರಹಣೆ, ಜಾಹೀರಾತು ತೆರಿಗೆ, ಮಾರುಕಟ್ಟೆಗಳ ಬಾಡಿಗೆ ಹೆಚ್ಚಳ, ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಬೀದಿ ದೀಪ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. 

ಸಭೆಯ ನಂತರ ಮಾತನಾಡಿದ ಚಿನ್ನಸ್ವಾಮಿ, ಪ್ರತಿವರ್ಷ ಪಾಲಿಕೆ ಯಿಂದ ಆಗುವ ಖರ್ಚು-ವೆಚ್ಚ ಮತ್ತು ಆದಾಯದ ಮೂಲಗಳ ಕುರಿತು ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಕೂಡಲೇ ಉತ್ತರಿಸಬೇಕು. ಅನುದಾ ನದ ಹಂಚಿಕೆ ಬಗ್ಗೆ ಶಿಫಾರಸುಗಳನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು. 

ವಿಶೇಷ ಸಭೆ ಕರೆದು ನಿರ್ಣಯ: ಮೇಯರ್‌ ಜಿ. ಪದ್ಮಾವತಿ ಮಾತ ನಾಡಿ, ನಾಲ್ಕನೇ ರಾಜ್ಯ ಹಣಕಾಸು ಅಧ್ಯಕ್ಷರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ನಗರದ ನಾಗರಿಕರಿಗೆ ನೀಡಲಾಗುವ ಮೂಲಸೌಕರ್ಯ ಮತ್ತು ಸಂಪನ್ಮೂಲ ಕ್ರೋಡೀಕರಣ ಕುರಿತು ಪಾಲಿಕೆಯಿಂದ ಟಿಪ್ಪಿಣಿ ಸಿದ್ಧ ಪಡಿಸಿ, ಪಾಲಿಕೆಯ ವಿಶೇಷ ಸಭೆ ಯಲ್ಲಿ ಚರ್ಚಿಸಿ, ನಿರ್ಣಯದೊಂದಿಗೆ ಆಯೋಗಕ್ಕೆ ಶಿಫಾರಸಿಗಾಗಿ ಕಳುಹಿ ಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಆಯೋಗದ ಅಧ್ಯ ಕ್ಷರು, “ಈಗಾಗಲೇ 30 ಜಿಲ್ಲೆಗಳ ಪ್ರವಾಸ ಮಾಡಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ Basic & performance grants ನಿಯೋಜನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬಿಬಿಎಂಪಿ ವ್ಯಾಪ್ತಿ, ಪ್ರದೇಶ, ಜನಸಂಖ್ಯೆ, ವಾಹನ ದಟ್ಟಣೆ, ಕುಡಿಯುವ ನೀರು, ಪರಿಸರ ಹಲವಾರು ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಯೋ ಗದಿಂದ ಶಿಫಾರಸು ಮಾಡಲು ಸಮಾಲೋಚನಾ ಸಭೆ ಕರೆಯಲಾಗಿದೆ.

ಯಾವ ಸಂಸ್ಥೆ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಅಂತಹ ಸಂಸ್ಥೆಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ,” ಎಂದು ಅಭಿಪ್ರಾಯಪಟ್ಟರು. ಉಪ ಮೇಯರ್‌ ಎಂ. ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಆಡಳಿತ ಪಕ್ಷದ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್‌ ನಾಯಕಿ ಆರ್‌. ರಮಿಳಾ ಉಮಾಶಂಕರ್‌, ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಇದ್ದರು.

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

6-bng-crime

Bengaluru: ಆಸ್ತಿ ವಿಚಾರವಾಗಿ ಸೋದರ ಅತ್ತೆ ಹತ್ಯೆ: ಇಬ್ಬರ ಸೆರೆ

5-bhuvan

Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

3-darshan

Renukaswamy case: ರೆಡ್ಡಿ 2205 ಖಾತೆಯ ಮೂಲಕ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌

Theft: ಸ್ವಂತ ಮನೆಯಿಂದಲೇ ಚಿನ್ನ ಕದ್ದ ಬಾಲಕಿ!

Theft: ಸ್ವಂತ ಮನೆಯಿಂದಲೇ ಚಿನ್ನ ಕದ್ದ ಬಾಲಕಿ!

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.