ಬಿ ಫಾರಂ ಸಿಕ್ಕರೆ ಮಾತ್ರ ಟಿಕೆಟ್‌ಗೆ ಬೆಲೆ!

Team Udayavani, Apr 18, 2018, 6:55 AM IST

election-commission—88885.jpg

ಬೆಂಗಳೂರು:ಚುನಾವಣೆಗೆ ಪಕ್ಷದ ಆಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆಯಾದ ಮೇಲೆ ತಕ್ಷಣಕ್ಕೆ ಕೇಳಿ ಬರುವುದು ಬಿ ಫಾರಂ ಹಂಚಿಕೆ ವಿಚಾರ. ಟಿಕೆಟ್‌ ಗಿಟ್ಟಿಸಿಕೊಂಡು ತಕ್ಷಣಕ್ಕೆ ನಿರಾಳರಾಗುವ ಆಕಾಂಕ್ಷಿಗಳಿಗೆ ಬಿ ಫಾರಂ ದುಗುಡ ಆರಂಭವಾಗುತ್ತದೆ. ಒಮ್ಮೊಮ್ಮೆ ಈ ಬಿ ಫಾರಂ ಪಡೆದುಕೊಳ್ಳುವುದು ಆಕಾಂಕ್ಷಿಗಳ ಪಾಲಿಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವುದಕ್ಕಿಂತ ಕಷ್ಟ ಕೆಲಸ ಆಗಿರುತ್ತದೆ.

ಏಕೆಂದರೆ, ಟಿಕೆಟ್‌ ಅಂತಿಮವಲ್ಲ. ಬಿ ಫಾರಂ ಸಿಕ್ಕರೆ ಮಾತ್ರ ಟಿಕೆಟ್‌ಗೆ ಬೆಲೆ ಬರುತ್ತದೆ. ಟಿಕೆಟ್‌ ಯಾರಿಗೇ ಸಿಗಲಿ, ಚುನಾವಣಾಧಿಕಾರಿಗಳಿಗೆ ಯಾರು ಬಿ ಫಾರಂ ಸಲ್ಲಿಸುತ್ತಾರೋ ಅವರೇ ಪಕ್ಷದ ಅಧೀಕೃತ ಅಭ್ಯರ್ಥಿಯಾಗುತ್ತಾರೆ. ಅನೇಕ ಸಂದರ್ಭಗಳಲ್ಲಿ ಟಿಕೆಟ್‌ ಯಾರಿಗೂ ಸಿಕ್ಕಿರುತ್ತೆ, ಅಂತಿಮ ಕ್ಷಣದಲ್ಲಿ ಇನ್ನಾರೂ ಬಿ ಫಾರಂ ಸಲ್ಲಿಸುತ್ತಾರೆ. ಈ ಬಿ ಫಾರಂ ಸಲ್ಲಿಸಲು ರಾಜಕೀಯ ಪಕ್ಷಗಳು ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಹಾಗದರೆ, ಈ ಬಿ ಫಾರಂ ಯಾಕಿಷ್ಟು ಮಹತ್ವ ಈ ಬಗ್ಗೆ ಒಂದಿಷ್ಟು ಮಾಹಿತಿ.

ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಥವಾ ಗುರುತಿಸಲ್ಪಟ್ಟ ಅಭ್ಯರ್ಥಿಯು ತನ್ನ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಹಲವು ಅರ್ಜಿ ನಮೂನೆಗಳಲ್ಲಿ ಬಿ ಫಾರಂ ಸಹ ಒಂದು. ಇದರಲ್ಲಿ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ವಿಶೇಷ ಅಧಿಕಾರ ನೀಡಲ್ಪಟ್ಟ ಪದಾಧಿಕಾರಿಯ ಸಹಿ ಇರುತ್ತದೆ. ಆ ಸಹಿ ಇದ್ದಾಗ ಮಾತ್ರ ಅದು ಅಧಿಕೃತವೆನಿಸಿಕೊಳ್ಳುತ್ತದೆ. ಬಿ ಫಾರಂ ಮೂಲಕ ರಾಜಕೀಯ ಪಕ್ಷವೊಂದು ಇವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಚುನಾವಣಾಧಿಕಾರಿಗಳಿಗೆ ದೃಢೀಕರಣ ಕೊಡುತ್ತದೆ.

ಬಿ ಫಾರಂನಲ್ಲಿ ಐದು ಭಾಗಗಳಿದ್ದು, ಅದೆಲ್ಲವನ್ನೂ ಭರ್ತಿ ಮಾಡಬೇಕು. ಜೊತೆಗೆ ಯಾವ ಕ್ಷೇತ್ರದ ಚುನಾವಣೆಯ ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸಲಾಗಿರುತ್ತದೂ, ಆ ಕ್ಷೇತ್ರದ 10 ಮಂದಿ ಮತದಾರರು ಸೂಚಕರಾಗಿರಬೇಕು. ಒಂದು ಪಕ್ಷದಿಂದ ಕೆಲವು ಸಂದರ್ಭಗಳಲ್ಲಿ ಒಂದೇ ಬಿ ಫಾರಂನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ನಮೂದು ಮಾಡಲಾಗಿರುತ್ತದೆ. ಒಂದನೇ ಅಭ್ಯರ್ಥಿ ಅಧಿಕೃತ, ಎರಡನೇ ಅಭ್ಯರ್ಥಿಯನ್ನು “ಡಮ್ಮಿ ಕ್ಯಾಂಡಿಡೆಟ್‌’ ಎಂದು ಕರೆಯಲಾಗುತ್ತದೆ. ಒಂದು ವೇಳೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಯಾವುದೂ ಕಾರಣಕ್ಕೆ ತಿರಸ್ಕೃತವಾದರೆ, ಡಮ್ಮಿ ಅಭ್ಯರ್ಥಿ ಅಧಿಕೃತ ಅಭ್ಯರ್ಥಿ ಆಗುತ್ತಾನೆ. ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಬಹುದು. ಆದರೆ, ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ದಿನಾಂಕದ 3 ಗಂಟೆಯೊಳಗೆ ಬಿ ಫಾರಂ ಸಲ್ಲಿಸಬೇಕು. ಬಿ ಫಾರಂ ಸಲ್ಲಿಸದೇ ಇದ್ದಾಗ, ಹತ್ತು ಮಂದಿ ಸೂಚಕರು ಇಲ್ಲದಿದ್ದಾಗ, ನಾಮಪತ್ರ ಅಪೂರ್ಣ ಆದಾಗ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.

ಟಾಪ್ ನ್ಯೂಸ್

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

6

Movies: ʼಪುಷ್ಪ-2ʼ ಮುಂದೂಡಿಕೆಯಾದರೆ ಸ್ವಾತಂತ್ರ್ಯ ದಿನದ ರಿಲೀಸ್‌ ಮೇಲೆ ಈ ಚಿತ್ರಗಳ ಕಣ್ಣು

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Indi: ಸಾವಳಸಂಗ ಅರಣ್ಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Indi: ಸಾವಳಸಂಗ ಅರಣ್ಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

mb-patil

ಕಾನೂನು ಎಲ್ಲರಿಗೂ ಒಂದೇ, ಪ್ರಭಾವಿಗಳಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಎಂ.ಬಿ.ಪಾಟೀಲ್

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

ಪುತ್ತೂರು: ಗ್ರಾಮೀಣ ಶಾಲೆ ಮಕ್ಕಳಿಗಾಗಿ ಹಳೆ ವಿದ್ಯಾರ್ಥಿಯ ಸೈಕಲ್‌ ಸವಾರಿ

3-application

Udupi: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ದುರ್ಮರಣ

university

Mangalore University: ಪ್ರಕಾಶ್ ಶೆಟ್ಟಿ, ರೊನಾಲ್ಡ್ ಕೊಲಾಸೋರಿಗೆ ಗೌರವ ಡಾಕ್ಟರೆಟ್ ಪ್ರದಾನ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.