23ರಿಂದ ಮೊಪ್-ಅಪ್ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆ
Team Udayavani, Aug 19, 2018, 6:00 AM IST
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಸಂಬಂಧ ಮೊಪ್-ಅಪ್ ಸುತ್ತಿನ ಪರಿಷ್ಕೃತ ವೇಳಾಪಟ್ಟಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಮೊಪ್-ಅಪ್ ಸುತ್ತಿನ ಪ್ರವೇಶ ಕೌನ್ಸೆಲಿಂಗ್ ಆ.23 ಮತ್ತು 24ರಂದು ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ. ಈ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಆ.28ರ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಕಾಲೇಜಿಗೆ ದಾಖಲಾಗಬೇಕೆಂದು ಪ್ರಕಟಣೆ ತಿಳಿಸಿದೆ. ಮೊದಲು ಅಥವಾ ಎರಡನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅನರ್ಹರು. ಪ್ರಾಧಿಕಾರದ ಮೂಲಕ ದಂತವೈದ್ಯಕೀಯ ಸೀಟು ಪಡೆದ ಅಭ್ಯರ್ಥಿಗಳು ವೈದ್ಯಕೀಯ ಸೀಟಿಗೆ ಈ ಸುತ್ತಿನಲ್ಲಿ ಭಾಗವಹಿಸಬಹುದು. ಆದರೆ, ಹೊಸದಾಗಿ ದಂತವೈದ್ಯಕೀಯ ಸೀಟು ಪಡೆಯಲು ಸಾಧ್ಯವಿಲ್ಲ. ಮೊಪ್-ಅಪ್ ಸುತ್ತಿನಲ್ಲಿ ಸೀಟು ಖಾಲಿಯಾದ ತಕ್ಷಣವೇ ಕೌನ್ಸೆಲಿಂಗ್ ನಿಲ್ಲಿಸಲಾಗುತ್ತದೆ. ಅಭ್ಯರ್ಥಿಗಳು ಜಾಲತಾಣದಲ್ಲಿ ಸೀಟು ನೋಡಿಕೊಂಡು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮಾಹಿತಿಗೆ http://kea.kar.nic.in ಅಥವಾ https://cetonline.karnataka.gov.in ಸಂಪರ್ಕಿಸಿ.