ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಕೃಷ್ಣ ಸಾವಿರ ಕೋಟಿ ಒಡೆಯ!


Team Udayavani, Apr 21, 2018, 11:56 AM IST

priyakrishna.jpg

ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಗಮನಸೆಳೆದದ್ದು ಗೋವಿಂದರಾಜನಗರ ಕ್ಷೇತ್ರದ ಯುವ ಅಭ್ಯರ್ಥಿ ಪ್ರಿಯಕೃಷ್ಣ ಅವರು ಸಲ್ಲಿಸಿದ ಆಸ್ತಿ ವಿವರ. ಶುಕ್ರವಾರ ಬೆಂಬಲಿಗರ ಮೂಲಕ ಒಂದು ಸೆಟ್‌ ದಾಖಲೆ ಸಲ್ಲಿಸಿರುವ ಪ್ರಿಯಕೃಷ್ಣ, ಶನಿವಾರ ಖುದ್ದಾಗಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಮತ್ತೂಂದು ಸೆಟ್‌ ದಾಖಲೆಗಳನ್ನು ಸಲ್ಲಿಸಲಿದ್ದಾರೆ.  ಮೊದಲ ಸೆಟ್‌ನಲ್ಲಿ ಪ್ರಿಯಕೃಷ್ಣ  ಘೋಷಿಸಿರುವ ಆಸ್ತಿ ಮೌಲ್ಯ ಬರೋಬ್ಬರಿ 1020.53 ಕೋಟಿ ರೂ!

ಬೆಂಗಳೂರು: ಗೃಹ ಸಚಿವ ರಾಮಲಿಂಗಾ ರೆಡ್ಡಿ, ವಸತಿ ಸಚಿವ ಎಂ.ಕೃಷ್ಣಪ್ಪ,  ಮಾಜಿ ಸಚಿವರಾದ ಸುರೇಶ್‌ಕುಮಾರ್‌, ಜಮೀರ್‌ ಅಹಮದ್‌, ವಿ.ಸೋಮಣ್ಣ, ದಿನೇಶ್‌ ಗುಂಡೂರಾವ್‌, ಮೇಯರ್‌ ಸಂಪತ್‌ರಾಜ್‌, ಮಾಜಿ ಮೇಯರ್‌ ಪದ್ಮಾವತಿ, ಹಾಲಿ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಅಖಂಡ ಶ್ರೀನಿವಾಸಮೂರ್ತಿ, ಗೋಪಾಲಯ್ಯ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದರು. ಶುಕ್ರವಾರ ಶುಭ ದಿನ ಎಂದು ನಾಮಪತ್ರಗಳ ಮಹಾ ಪೂರವೇ ಹರಿದುಬಂದಿತು. 

ರಾಮಲಿಂಗಾರೆಡ್ಡಿ ಅವರು ಬಿಟಿಎಂ ಲೇಔಟ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಲಕ್ಕಸಂದ್ರ ನಿವಾಸದ ಬಳಿಯಿರುವ ಮಹಾ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ನೆರವೇರಿಸಿದ ಅವರು, ಬಳಿಕ ಸ್ವಲ್ಪ ದೂರ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ನಂತರ ಪತ್ನಿ ರಾಜೇಶ್ವರಿ, ಮಾಜಿ ಮೇಯರ್‌ ಬಿ.ಎನ್‌.ಮಂಜುನಾಥರೆಡ್ಡಿ ಅವರೊಂದಿಗೆ ಕೋರಮಂಗಲ 5ನೇ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಗೃಹ ಸಚಿವರ ಪುತ್ರ ರಾಜ್‌ಕುಮಾರ್‌ ಆರ್‌. ರೆಡ್ಡಿ, ತಂದೆ ಪರ ಪ್ರಚಾರ ನಡೆಸಿದರು.

ನಂತರ ಮಾತನಾಡಿದ ರಾಮಲಿಂಗಾರೆಡ್ಡಿ, ಪ್ರತಿ ಬಾರಿಯಂತೆ ಈ ಬಾರಿಯೂ ಗಣೇಶನಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿ, ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದ್ದೇವೆ. ಅದಕ್ಕಾಗಿ ಜನ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದರು.

ತಾಯಿ ಜತೆ ಬಂದ ಜಮೀರ್‌: ಚಾಮ ರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಬಿ.ಜಡ್‌.ಜಮೀರ್‌ ಅಹಮ್ಮದ್‌ ಖಾನ್‌ ನಾಮಪತ್ರ ಸಲ್ಲಿಸಿದರು. ಕಲಾಸಿ ಪಾಳ್ಯ ದ ಲ್ಲಿರುವ ಜಲಕಂಠೇಶ್ವರ ದೇವಸ್ಥಾನ ದಲ್ಲಿ ಪೂಜೆ ಹಾಗೂ ಕಾಟನ್‌ಪೇಟೆಯ ಹಜರತ್‌ ತವಕ್ಕಲ್‌ ಮಸ್ತಾನ್‌ ಶಾ ಶೊಹರ್‌ವರ್ಡಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಜಮೀರ್‌, ಬಳಿಕ ತಾಯಿ ಸೊಗ್ರಾ ಖಾನುಂ ಅವರೊಂದಿಗೆ ಗೂಡ್ಸ್‌ಶೆಡ್‌ ರಸ್ತೆಯಲ್ಲಿರುವ ಚಾಮರಾಜಪೇಟೆ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಜಮೀರ್‌ ಅಹಮ್ಮದ್‌ ಖಾನ್‌, ಈ ಹಿಂದೆ ಇದೇ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ಆತಂಕ, ಭಯ ಇರುತ್ತಿತ್ತು. ಏಕೆಂದರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಹಾಗಾಗಿ ಶೂನ್ಯ ಮತಗಳಿಂದ ಪ್ರಚಾರ ಆರಂಭಿಸಬೇಕಿತ್ತು. ಇದೀಗ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದು, 30,000 ಮತಗಳು ಈಗಾಗಲೇ ನನ್ನ ತೆಕ್ಕೆಯಲ್ಲಿವೆ.

ಇದನ್ನು ಹೊರತುಪಡಿಸಿ ಮತಗಳನ್ನು ಸೆಳೆಯಬೇಕಿದೆ. ಕ್ಷೇತ್ರದ ಜನ ನನ್ನನ್ನು ರಾಜಕಾರಣಿ ಎಂದು ಭಾವಿಸದೆ ಮನೆ ಮಗನಂತೆ ಕಾಣುತ್ತಾರೆ. ನನ್ನ ಗೆಲುವು ಶೇ.200ರಷ್ಟು ಪಕ್ಕಾ. ಈ ಬಾರಿ 50,000 ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಇದೇ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸಮೂರ್ತಿ ನಾಮಪತ್ರ ಸಲ್ಲಿದರು. ಜಮೀರ್‌ ಅಹಮ್ಮದ್‌ ಖಾನ್‌ ಕೂಡ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ಇತರರು: ರಾಜ ರಾಜೇಶ್ವರಿ ನಗರದಿಂದ ಜೆಡಿಎಸ್‌ನ ರಾಮ ಚಂದ್ರ, ಕಾಂಗ್ರೆಸ್‌ನ ಮುನಿರತ್ನ, ಶಿವಾಜಿ ನಗರ ದಿಂದ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು,  ಶಾಂತಿನಗರದಿಂದ ಬಿಜೆಪಿಯ ವಾಸುದೇವಮೂರ್ತಿ, ಕೆ.ಆರ್‌.ಪುರದಿಂದ ನಂದೀಶ್‌ರೆಡ್ಡಿ, ಮಹಾಲಕ್ಷ್ಮಿ ಲೇಔಟ್‌ನಿಂದ ಬಿಜೆಪಿಯ ನೆ.ಲ.ನರೇಂದ್ರಬಾಬು, ಹೆಬ್ಟಾಳದಿಂದ ಜೆಡಿಎಸ್‌ನ ಹನುಮಂತೇ ಗೌಡ,

ಸವನಗುಡಿಯಿಂದ ಬಿಜೆಪಿಯ ರವಿ ಸುಬ್ರಹ್ಮಣ್ಯ, ಕಾಂಗ್ರೆಸ್‌ನ ಬೋರೇಗೌಡ, ವಿಜಯನಗರದಿಂದ ಬಿಜೆಪಿಯ ಎಚ್‌.ರವೀಂದ್ರ, ಮಹದೇವ ಪುರದಿಂದ ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌, ಗೋವಿಂದರಾಜ ನಗರದಿಂದ ಕಾಂಗ್ರೆಸ್‌ನ ಪ್ರಿಯಕೃಷ್ಣ, ಬೆಂ.ದಕ್ಷಿಣದಿಂದ ಬಿಜೆಪಿಯ ಎಂ.ಕೃಷ್ಣಪ್ಪ, ಆನೇಕಲ್‌ನಿಂದ ಬಿಜೆಪಿಯ ನಾರಾಯಣ ಸ್ವಾಮಿ ನಾಮಪತ್ರ ಸಲ್ಲಿಸಿದರು.

ಪ್ರಿಯಕೃಷ್ಣ  (ಕಾಂಗ್ರೆಸ್‌) 1,020.53 ಕೋಟಿ
ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯ ಕೃಷ್ಣ ಅವರ ಒಟ್ಟು ಆಸ್ತಿ ಮೌಲ್ಯ 1,020.53 ಕೋಟಿ ರೂ!  160.10 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, ಜತೆಗೆ ಐಶಾರಾಮಿ ಆಡಿ ಎ8, ಬಿಇಎಂಎಲ್‌ ಡೋಜರ್‌, ವೋಲ್ವೋ ಎಕ್ಸಾವಾಟೋರ್‌ ಕಾರ್‌, ಬೆಂಜ್‌ ಜಿಎಲ್‌ 350, ಸೇರಿದಂತೆ ಹಲವು ಕಾರುಗಳು ಅವರ ಬಳಿಯಿವೆ.
ನಗದು    1,76,186 ರೂ.
ಚಿನ್ನಾಭರಣ    1,406 ಗ್ರಾಂ
ಸ್ಥಿರಾಸ್ತಿ    160.10 ಕೋಟಿ ರೂ.
ಚರಾಸ್ತಿ    860.43 ಕೋಟಿ ರೂ.
ಸಾಲ    802.74 ಕೋಟಿ ರೂ.

ಎಸ್‌.ಸುರೇಶ್‌ ಕುಮಾರ್‌ (ಬಿಜೆಪಿ) 3.58 ಕೋಟಿ ರೂ.
3.58 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ರಾಜಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಸುರೇಶ್‌ ಕುಮಾರ್‌ ಘೋಷಿಸಿ ದ್ದಾರೆ. ಶುಕ್ರವಾರ ನಾಮಪತ್ರದೊಂದಿಗೆ  ಆಸ್ತಿ ವಿವರ ನೀಡಿರುವ ಅವರು, ಪತ್ನಿ ಕೆ.ಎಚ್‌.ಸಾವಿತ್ರಿ ಅವರ ಹೆಸರಿನಲ್ಲಿ 22.08 ಲಕ್ಷ ಹಾಗೂ ತಾಯಿ ಸುಶೀಲಮ್ಮ ಹೆಸರಿನಲ್ಲಿ 3.08 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದಾರೆ.
ನಗದು    6 ಲಕ್ಷ ರೂ.
ಚಿನ್ನಾಭರಣ    233 ಗ್ರಾಂ.
ಬೆಳ್ಳಿ    1000 ಗ್ರಾಂ.
ಸ್ಥಿರಾಸ್ತಿ    58,41,660 ರೂ.
ಚರಾಸ್ತಿ    3 ಕೋಟಿ ರೂ. 

ರಾಮಲಿಂಗಾರೆಡ್ಡಿ (ಕಾಂಗ್ರೆಸ್‌) 66.61 ಕೋಟಿ ರೂ.
ಬಿಟಿಎಂ ಲೇಔಟ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ 66.61 ಕೋಟಿ ರೂ. ಶುಕ್ರವಾರ ಚುನಾವಣಾಧಿ ಕಾರಿಗೆ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ನೀಡಿದ್ದಾರೆ. ಅದರಂತೆ ಪತ್ನಿ ಚಾಮುಂಡೇ ಶ್ವರಿ ಅವರು ಒಂದೂವರೆ ಕೆ.ಜಿ. ಚಿನ್ನ, 9.5 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. 6.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯೂ ಇದೆ.
ನಗದು-     1.56 ಲಕ್ಷ ರೂ.
ಚಿನ್ನಾಭರಣ    ಇಲ್ಲ,  ಬೆಳ್ಳಿ -ಇಲ್ಲ
ಚರಾಸ್ತಿ    17.41 ಕೋಟಿ ರೂ.
ಸ್ಥಿರಾಸ್ತಿ    37.21 ಕೋಟಿ ರೂ.
ಸಾಲ    18.33 ಕೋಟಿ ರೂ.

ದಿನೇಶ್ ಗುಂಡೂರಾವ್ (ಕಾಂಗ್ರೆಸ್‌) 23 ಕೋಟಿ ರೂ.
ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗುಂಡೂರಾವ್‌ ಆಸ್ತಿ ಮೌಲ್ಯ 23 ಕೋಟಿ ರೂ. ಅವರ ಪತ್ನಿ 3 ಕೋಟಿ ಆಸ್ತಿ ಹೊಂದಿದ್ದು, ಪತ್ನಿ ಹೆಸರಲ್ಲಿ 50.56 ಲಕ್ಷ ಮೌಲ್ಯದ ಚರಾಸ್ತಿ ಇದೆ. ತಾವು 20 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವುದಾಗಿ ಹೇಳಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಪತ್ನಿ ವಾರ್ಷಿಕ ಆದಾಯ 35 ಲಕ್ಷ ರೂ. ಎಂದು ಘೋಷಿಸಿದ್ದಾರೆ.
ನಗದು    54 ಸಾವಿರ
ಚಿನ್ನಾಭರಣ    4.04 ಲಕ್ಷ ರೂ.
ಬೆಳ್ಳಿ    2.5 ಕೆ.ಜಿ
ಸ್ಥಿರಾಸ್ತಿ    18.33 ಎಕರೆ
ಚರಾಸ್ತಿ    65.50 ಲಕ್ಷ ರೂ

ಎಸ್‌.ಟಿ. ಸೋಮಶೇಖರ್‌ (ಕಾಂಗ್ರೆಸ್‌) 8.14 ಕೋಟಿ ರೂ.
ಯಶವಂತಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್‌ 8.14 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ರಾಧಾ ಅವರ ವಾರ್ಷಿಕ ಆದಾಯ 2.8 ಲಕ್ಷ ರೂ. ಇದ್ದು, 400 ಗ್ರಾಂ ಚಿನ್ನದ ಆಭರಣ ಹಾಗೂ 5.5 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಪುತ್ರ ನಿಶಾಂತ್‌ ತಂದೆಯಿಂದಲೇ 5.27 ಲಕ್ಷ ರೂ. ಸಾಲ ಪಡೆದಿದ್ದಾರೆ!
ನಗದು    40 ಸಾವಿರ ರೂ.
ಚಿನ್ನಾಭರಣ    250 ಗ್ರಾಂ ಚಿನ್ನ
ಬೆಳ್ಳಿ    ಇಲ್ಲ
ಸ್ಥಿರಾಸ್ತಿ    3.53 ಕೋಟಿ ರೂ.
ಚರಾಸ್ತಿ    67.83 ಲಕ್ಷ ರೂ

ನೆ.ಲ. ನರೇಂದ್ರಬಾಬು (ಬಿಜೆಪಿ) 2.25 ಕೋಟಿ ರೂ.
ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೆ.ಲ. ನರೇಂದ್ರಬಾಬು ಒಟ್ಟು ಆಸ್ತಿ 2.25 ಕೋಟಿ ರೂ. ಶುಕ್ರವಾರ ರಾಜಾಜಿನಗರದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಅವರು, ಆಸ್ತಿ ವಿವರ ನೀಡಿದ್ದಾರೆ. ಅದರಂತೆ ನರೇಂದ್ರಬಾಬು ಪತ್ನಿ ಹೆಸರಿನಲ್ಲಿ 4 ಲಕ್ಷ ರೂ. ಚರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 
ನಗದು    21,700 ರೂ. 
ಚಿನ್ನಾಭರಣ    130 ಗ್ರಾಂ.
ಬೆಳ್ಳಿ    ಇಲ್ಲ
ಸ್ಥಿರಾಸ್ತಿ    20.83 ಲಕ್ಷ ರೂ.
ಚರಾಸ್ತಿ    2.08 ಕೋಟಿ ರೂ. 

ವಿ.ಸೋಮಣ್ಣ (ಬಿಜೆಪಿ) 52.92 ಕೋಟಿ ರೂ.
ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಒಟ್ಟು ಆಸ್ತಿ ಮೌಲ್ಯ 52.92 ಕೋಟಿ ರೂ. ಪತ್ನಿ ಜಿ.ಶೈಲಜಾ ಅವರು 81.79 ಲಕ್ಷ ರೂ. ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರು, 44.28 ಲಕ್ಷ ರೂ. ಮೌಲ್ಯದ ವಜ್ರದ ಆಭರಣ, 18 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, 17.82 ಕೋಟಿ ರೂ. ಮೊತ್ತದ ಕಟ್ಟಡ ಹೊಂದಿದ್ದಾರೆ.
ನಗದು    12.09 ಲಕ್ಷ ರೂ.
ಚಿನ್ನ    5.23 ಲಕ್ಷ ರೂ.
ಬೆಳ್ಳಿ    5.12 ಲಕ್ಷ ರೂ.
ಚರಾಸ್ತಿ    4.28,58,358
ಸ್ಥಿರಾಸ್ತಿ    2.40 ಕೋಟಿ ರೂ.

ಎ.ಸಿ.ಶ್ರೀನಿವಾಸ್‌  (ಕಾಂಗ್ರೆಸ್‌) 104.89 ಕೋಟಿ ರೂ.
ಮಹದೇವಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ. ಶ್ರೀನಿವಾಸ್‌ 104.89 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಪತ್ನಿ ಕೆ.ಶಶಿಕಲಾ ಹೆಸರಿನಲ್ಲಿ 2.15 ಕೋಟಿ ಚರಾಸ್ತಿ ಹಾಗೂ 11.85 ಕೋಟಿ ಸ್ಥಿರಾಸ್ತಿ ಸೇರಿ 12.95 ಕೋಟಿ ರೂ. ಆಸ್ತಿ ಇರುವುದಾಗಿ ಹೇಳಿದ್ದಾರೆ. 33.37 ಕೋಟಿ ಸಾಲ ಇರುವುದಾಗಿ ಶ್ರೀನಿವಾಸ ತಿಳಿಸಿದ್ದಾರೆ.
ನಗದು    5.55 ಲಕ್ಷ ರೂ.
ವರ್ಷದ ಆದಾಯ    4.45 ಕೋಟಿ ರೂ.
ಚಿನ್ನಾಭರಣ    1,700 ಗ್ರಾಂ.
ಸ್ಥಿರಾಸ್ತಿ    95.18 ಕೋಟಿ ರೂ.
ಚರಾಸ್ತಿ    9.70 ಕೋಟಿ ರೂ.

ಎನ್‌.ಎಸ್‌. ನಂದೀಶ್‌ ರೆಡ್ಡಿ  (ಬಿಜೆಪಿ) 303.17 ಕೋಟಿ ರೂ.
ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್‌.ಎಸ್‌. ನಂದೀಶ್‌ ರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ 303.17 ಕೋಟಿ ರೂ. ಪತ್ನಿ ರೂಪಾ ನಂದೀಶ್‌ ಅವರ ಹೆಸರಿನಲ್ಲಿ 5,87,380 ಚರಾಸ್ತಿ ಹಾಗೂ 2.52 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಲ್ಯಾಂಡ್‌ ಕ್ರೂಸೇರ್‌, ಬೆಂಜ್‌, ಹೊಂಡಾ ಸಿಆರ್‌ವಿ, ಇನ್ನೊವಾ ಹೊಂದಿದ್ದಾರೆ.
ನಗದು    10,02,458 ರೂ.
ಚಿನ್ನಾಭರಣ    2133 ಗ್ರಾಂ
ಬೆಳ್ಳಿ    8.83 ಕೆ.ಜಿ
ಚರಾಸ್ತಿ    47.92 ಕೋಟಿ ರೂ.
ಸ್ಥಿರಾಸ್ತಿ    252.57 ಕೋಟಿ ರೂ.

ಬಿ.ಜಡ್‌.ಜಮೀರ್‌ ಅಹಮ್ಮದ್‌ (ಕಾಂಗ್ರೆಸ್‌) 40.34 ಕೋಟಿ ರೂ.
ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಜಡ್‌.ಜಮೀರ್‌ ಅಹಮ್ಮದ್‌ ಖಾನ್‌ ಅವರ ಒಟ್ಟು ಆಸ್ತಿ ಮೌಲ್ಯ 40.34 ಕೋಟಿ ರೂ. ಪತ್ನಿ ಬೀಬಿ ಜಾಹರಾ ಅವರು 249 ಗ್ರಾಂ ಚಿನ್ನ ಹಾಗೂ 250 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಜಮೀರ್‌ ಅಹಮ್ಮದ್‌ ಖಾನ್‌ ಅವರು ನಗರದ ವಿವಿಧೆಡೆ 37 ಕೋಟಿ ರೂ. ಬೆಲೆಬಾಳುವ ಆಸ್ತಿ ಹೊಂದಿದ್ದಾರೆ. 
ನಗದು    2.40 ಲಕ್ಷ ರೂ.
ಚಿನ್ನ    49 ಗ್ರಾಂ
ಬೆಳ್ಳಿ    ಇಲ್ಲ
ಚರಾಸ್ತಿ    58.81 ಲಕ್ಷ ರೂ.
ಸ್ಥಿರಾಸ್ತಿ    39.34 ಕೋಟಿ ರೂ.

ಕಟ್ಟಾಸುಬ್ರಹ್ಮಣ್ಯ ನಾಯ್ಡು (ಬಿಜೆಪಿ) 26.10 ಕೋಟಿ ರೂ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ಒಟ್ಟು ಆಸ್ತಿ ಮೌಲ್ಯ 26.10ಕೋಟಿ ರೂ. ಶುಕ್ರವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ನೀಡಿದ್ದಾರೆ. ಅದರಂತೆ ಪತ್ನಿ  ಹೆಸರಿನಲ್ಲಿ 7,04,80,946 ರೂ. ಚರಾಸ್ತಿ, 7.20 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ನಗದು    18,00,400ರೂ.
ಚಿನ್ನ    2990 ಗ್ರಾಂ.
ಬೆಳ್ಳಿ    15 ಕೆ.ಜಿ
ಚರಾಸ್ತಿ    9.99 ಕೋಟಿ ರೂ.
ಸ್ಥಿರಾಸ್ತಿ    15.93 ಕೋಟಿ ರೂ.

ಸಂಪತ್‌ ರಾಜ್‌ (ಕಾಂಗ್ರೆಸ್‌) 30.46 ಕೋಟಿ ರೂ.
ಸಿ.ವಿ.ರಾಮನ್‌ ನಗರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಹಾಲಿ ಮೇಯರ್‌ ಸಂಪತ್‌ ರಾಜ್‌ ತಾವು ಒಟ್ಟು 30.46 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.  ತಮ್ಮ ನೂರಾರು ಬೆಂಬಲಿಗರ ಜತೆ ಶುಕ್ರವಾರ ಸಿ.ವಿ.ರಾಮನ್‌ ನಗರದ ಬಿಬಿಎಂಪಿ ಕಚೇರಿಗೆ ತೆರಳಿದ ಸಂಪತ್‌ ರಾಜ್‌, ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರವನ್ನೂ ಚುನಾವಣೆ ಅಧಿಕಾರಿಗೆ ಸಲ್ಲಿಸಿದ್ದಾರೆ. ಅದರಂತೆ, ಸಂಪತ್‌ ಅವರ ಪತ್ನಿ ಹೆಸರಲ್ಲಿ 1.30 ಕೋಟಿ ರೂ. ಆಸ್ತಿ ಇದ್ದು, 150 ಗ್ರಾಂ ಬಂಗಾರ ಕೂಡ ಇದೆ. ಪುತ್ರ ಸನತ್‌ ರಾಜ್‌ ಹೆಸರಿನಲ್ಲಿ ಬ್ಯಾಂಕ್‌ ಒಂದರ ಖಾತೆಯಲ್ಲಿ 63,819 ರೂ. ಹಣ ಇಟ್ಟಿರುವುದಾಗಿ ಚುನಾವಣಾ ಆಯೋಗಕ್ಕೆ ಸಂಪತ್‌ ರಾಜ್‌ ಮಾಹಿತಿ ನೀಡಿದ್ದಾರೆ.
ಸ್ಥಿರಾಸ್ತಿ    19.94 ಕೋಟಿ ರೂ.
ಚರಾಸ್ತಿ    1.16 ಕೋಟಿ ರೂ.
ಬಂಗಾರ    50 ಗ್ರಾಂ
ಬೆಳ್ಳಿ    ಇಲ್ಲ
ಸಾಲ    4 ಕೋಟಿ  ರೂ.

ವಿ.ನಾಗರಾಜು (ಪಕ್ಷೇತರ) 4.27 ಕೋಟಿ ರೂ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜು 4,27,40,000 ರೂ. ಮೌಲ್ಯದ  ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಪತ್ನಿ, ಮಕ್ಕಳು ಸೇರಿದಂತೆ ಒಟ್ಟು ಕುಟುಂಬದ ಆಸ್ತಿ ಆಸ್ತಿ ಮೌಲ್ಯ 5,93,98,000 ಕೋಟಿ ರೂ. ಎಂದಿರುವ ನಾಗರಾಜ್‌ ಹೆಸರಿನಲ್ಲಿ 3 ಎಕರೆ 18 ಗುಂಟೆ ಜಮೀನು, ಪತ್ನಿ ಎನ್‌.ಲಕ್ಷ್ಮೀ ಹೆಸರಿನಲ್ಲಿ 45 ಲಕ್ಷ ರೂ. ಮೌಲ್ಯದ 6 ಎಕರೆ 2 ಗುಂಟೆ  ಭೂಮಿಯಿದೆ. ಪುತ್ರನ ಹೆಸರಲ್ಲಿ 84,60,000 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ ಎಂದು ವಿವರ ಸಲ್ಲಿಸಿರುವ ಅಭ್ಯರ್ಥಿ, ತಮ್ಮ ಹೆಸರಲ್ಲಿ ಒಂದು ಹೊಂಡಾ ಸಿಟಿ ಕಾರು,  ಪತ್ನಿಯ ಬಳಿ 1.25 ಲಕ್ಷ ರೂ ಮೌಲ್ಯದ 50 ಗ್ರಾಂ ಚಿನ್ನಾಭರಣ, ಯಮಹಾ ದ್ವಿಚಕ್ರ ವಾಹನ, ಪುತ್ರನ ಹೆಸರಲ್ಲಿ ಯಮಹಾ ಆರ್‌ಎಕ್ಸ್‌ ಬೈಕ್‌ ಇದೆ ಎಂದು ಘೋಷಿಸಿದ್ದಾರೆ.
ನಗದು    1 ಲಕ್ಷ ರೂ. 
ಸಾಲ    46,48,611 ರೂ.
ಚಿನ್ನ, ಬೆಳ್ಳಿ     ಇಲ್ಲ 
ಸ್ಥಿರಾಸ್ತಿ    2,63,00,000 
ಚರಾಸ್ತಿ    1,64,40,000

ಮುನಿರತ್ನ  (ಕಾಂಗ್ರೆಸ್‌) 43.71 ಕೋಟಿ ರೂ.
ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ  ಮುನಿರತ್ನ ಅವರ ಒಟ್ಟು ಆಸ್ತಿ ಮೌಲ್ಯದ 43.71 ಕೋಟಿ ರೂ. ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರವನ್ನೂ ನೀಡಿದ್ದಾರೆ. ಅವರ ಪತ್ನಿ ಮಂಜುಳಾ ಅವರ ಬಳಿ 360 ಗ್ರಾಂ ಚಿನ್ನವಿದ್ದು, ವೃಷಭಾವತಿ ಪ್ರೊಡಕ್ಷನ್‌ನಲ್ಲಿ 22.50 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ದೇವನಹಳ್ಳಿ ತಾಲೂಕಿನ ಅಮಾನಿಕೆರೆ ಗ್ರಾಮದ ಕಾರಹಳ್ಳಿಯಲ್ಲಿ ಕೃಷಿ ಭೂಮಿ, ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮ, ದೊಡ್ಡಬಿದರಕಲ್ಲು, ಪೀಣ್ಯ ಗ್ರಾಮ, ಬೆಂಗಳೂರು ಉತ್ತರ ತಾಲೂಕಿನ ನೆಲ್ಲುಕುಂಟೆ ಗ್ರಾಮ, ದೊಡ್ಡತುಮಕೂರು, ಹೆಸರಘಟ್ಟ, ಯಶವಂತಪುರ, ಗೆದ್ದಲಹಳ್ಳಿ, ಮತ್ತಿಕೆರೆ ಬಳಿಯ ಬೃಂದಾವನನಗರ, ಆರ್‌ಎಂವಿ ಎಕ್ಸ್‌ಟೆನನ್‌, ಆಂಧ್ರದ ರಂಗರಾಜಪುರದಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ.

ಪೀಣ್ಯದಲ್ಲಿ ವಾಣಿಜ್ಯ ಕಟ್ಟಡ ಹಾಗೂ ವೈಯಾಲಿಕಾವಲ್‌, ಮತ್ತಿಕೆರೆ, ಬೃಂದಾವನನಗರ, ಗೆದ್ದಲಹಳ್ಳಿ, ಮಲ್ಲೇಶ್ವರದಲ್ಲಿ ವಸತಿ ಕಟ್ಟಡವಿದೆ ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ ಪತ್ನಿಯವರ ಹೆಸರಿನಲ್ಲೂ ಹಲವು ಕಡೆ ವಸತಿ ಕಟ್ಟಡಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಬಳಿ 2 ಮರ್ಸಿಡಿಸ್‌ ಬೆಂಜ್‌, ಆಕ್ಸೆಂಟ್‌, ಆಲ್ಟೋ, ಮಾರುತಿ 800 ಕಾರು, ಫಾರ್ಚೂನರ್‌, 6 ಟಿಪ್ಪರ್‌, ಎರಡು ಜೆಸಿಬಿ, ಎರಡು ಟ್ರ್ಯಾಕ್ಟರ್‌,  ಒಂದು ಟ್ಯಾಂಕರ್‌ ವಾಹನಗಳು ಇರುವುದಾಗಿ ತಿಳಿಸಿದ್ದಾರೆ.
ನಗದು    26.20 ಲಕ್ಷ ರೂ.
ಚಿನ್ನ    3.93 ಕೆ.ಜಿ.
ಬೆಳ್ಳಿ    40.94 ಕೆ.ಜಿ.
ಚರಾಸ್ತಿ    9.76 ಕೋಟಿ ರೂ.
ಸ್ಥಿರಾಸ್ತಿ    33.95 ಕೋಟಿ ರೂ.

ಸಿದ್ದರಾಮಯ್ಯ ಅವರನ್ನು ಟಿವಿಯಲ್ಲಿ ಅಚಾನಕ್‌ ಆಗಿ ನೋಡುವ ಸಂದರ್ಭ ಬಂತು. ನನ್ನ ಕಣ್ಣು ತಕ್ಷಣ  ಹೋಗಿದ್ದು ಅವರ ವಾಚ್‌ ಕಟ್ಟಿಕೊಳ್ಳುವ ಕೈ ಕಡೆಗೆ. ಸಾರ್‌, 40 ಲಕ್ಷ ಬೆಲೆಯ ವಾಚ್‌ ಏನಾಯಿತು? ಕೊನೆಗೆ  ನೀವು ಹೇಳಲೇ ಇಲ್ಲ ಅದನ್ನು ನಿಮಗೆ ಕೊಟ್ಟವರು ಯಾರು ಎಂದು. ಚುನಾವಣಾ ಸಮಯದಲ್ಲಾ ದರೂ ಸತ್ಯ ಹೇಳಿ ಇತಿಹಾಸ ಸೇರಿಕೊಳ್ಳಿ.
-ಡಿ.ವಿ.ಸದಾನಂದಗೌಡ

ಕಾಂಗ್ರೆಸ್‌ 50-60 ಸೀಟು ಗೆಲ್ಲುವುದು ಕಷ್ಟ. ಸಿಎಂ ಸಿದ್ದರಾಮಯ್ಯ ಬಾದಾಮಿ­ಯಲ್ಲೂ ಗೆಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ಗೆಲ್ಲಲ್ಲ. ನಾನು ಶಿಕಾರಿಪುರ­ದಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಶತಸಿದ್ಧ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಟಾಪ್ ನ್ಯೂಸ್

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-sddas-dsad

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

1—ddsadsadasd

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!

LIC

LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?

1-asaasasa

Sikkim ಭಾರೀ ಮಳೆ: ಭೂಕುಸಿತದಲ್ಲಿ ಸಿಲುಕಿದ 1,200 ಪ್ರವಾಸಿಗರು

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bengaluru: ರೌಡಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

9-

Bengaluru:ಕಳ್ಳತನ ಮಾಡಿದ್ದಕ್ಕೆ ಗಾರ್ಡ್‌ಗಳಿಂದ ಕೈಕಾಲು ಕಟ್ಟಿ ಹಲ್ಲೆ: ಓರ್ವ ವ್ಯಕ್ತಿ ಸಾವು

7-

Bengaluru: ತನ್ನ ಮಗುವನ್ನೇ ಕತ್ತು ಹಿಸುಕಿ ಕೊಂದ ಸಾಫ್ಟ್ವೇರ್‌ ಉದ್ಯೋಗಿ ತಾಯಿ ಸೆರೆ

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-sddas-dsad

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

kejriwal 2

19ಕ್ಕೆ ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆ; ದಿಲ್ಲಿ ಪೊಲೀಸರಿಗೆ ನೋಟಿಸ್‌

1—ddsadsadasd

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.