ಪಿಐಎಲ್‌ ಸಲ್ಲಿಸಿದ ಶಿಕ್ಷಕಗೆ 20 ಸಾವಿರ ರೂ. ದಂಡ!


Team Udayavani, Jul 7, 2018, 2:15 PM IST

highcourt3.jpg

ಬೆಂಗಳೂರು: ಸಾಮಾಜಿಕ ಸಮಸ್ಯೆಗಳ ನೈಜ ಕಾಳಜಿ ಇಲ್ಲದ ಸಾರ್ವಜಿಕ ಹಿತಾಸಕ್ತಿ ಅರ್ಜಿಗಳ ಸಲ್ಲಿಕೆಯಿಂದ ಹೈಕೋರ್ಟ್‌ನ ಅಮೂಲ್ಯ ಸಮಯ ಹಾಳಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನವ್ಯಕ್ತಪಡಿಸಿದೆ.

ಇತ್ತೀಚೆಗೆ ಅರ್ಜಿಗಳ ವಿಚಾರಣೆ ವೇಳೆಯೇ ಹಲವು ಬಾರಿ ಅನಗತ್ಯ ಪಿಐಎಲ್‌ಗ‌ಳನ್ನು ಸಲ್ಲಿಸಿದ ಅರ್ಜಿದಾರರಿಗೆ ಹಲವು ಬಾರಿ ತರಾಟೆ ತೆಗೆದುಕೊಂಡಿದ್ದ ನ್ಯಾಯ ಪೀಠ, ಪಿಐಎಲ್‌ಗ‌ಳು ಸಮಾಜದ ದುರ್ಬಲ ವರ್ಗಕ್ಕೆ ನೆರವು, ಸಮಾಜವನ್ನು ಕಾಡುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಿರಬೇಕು ಎಂದೂ ಸಲಹೆ ನೀಡಿದೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವರ ಹುದ್ದೆ ಅಸಂವಿಧಾನಿಕ ಎಂದು ಘೋಷಿಸುವಂತೆ ಪಿಐಎಲ್‌ ಪ್ರೊ.ಶೇಖರ್‌ ಅಯ್ಯರ್‌ ಎಂಬುವವರಿಗೆ 10 ಸಾವಿರ ರೂ. ದಂಡ ವಿಧಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ಪೀಠ, ಇದೀಗ ಮತ್ತೂಂದು ಪ್ರಕರಣದಲ್ಲಿ ಕೋರ್ಟ್‌ ಸಮಯ ವ್ಯರ್ಥ ಮಾಡಿದ ಶಿಕ್ಷಕನಿಗೆ 20 ಸಾವಿರ ರೂ. ದಂಡವಿಧಿಸುವ ಮೂಲಕ ಬಿಸಿಮುಟ್ಟಿಸಿದೆ.

ಸಿಖ್‌ ಧರ್ಮಕ್ಕೆ ಸಂಬಧಿಸಿದ ವಿಚಾರಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸುವಂತೆ ರಾಜ್ಯ ಶಿಕ್ಷಣ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ವಿಜಯಪುರ ಜಿಲ್ಲೆ ಇಂಡಿ ಮೂಲದ ಪುಂಡಿತ್‌ರಾವ್‌ ಧರೇಣ್ಣವರ್‌ ಎಂಬುವವರು ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ ವಿಭಾಗೀಯ ಪೀಠ, ಅವರಿಗೆ 20 ಸಾವಿರ ರೂ. ದಂಡ ವಿಧಿಸಿ  ತೀರ್ಪು ನೀಡಿದೆ.

ಅರ್ಜಿದಾರರು ಮುಂದಿನ 1 ತಿಂಗಳಲ್ಲಿ ದಂಡದ ಮೊತ್ತವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಳಿ ಪಾವತಿಸಬೇಕು. ಒಂದು ವೇಳೆ ಅರ್ಜಿದಾರ ದಂಡ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳು ಆತನ ಬಳಿ ದಂಡ ವಸೂಲಿ ಮಾಡಬೇಕು. ಬಳಿಕ ಆ ಮೊತ್ತವನ್ನು ರಾಜ್ಯ ಕಾನೂನು ಸೇವಾಪ್ರಾಧಿಕಾರಕ್ಕೆ ನೀಡಬೇಕು ಎಂದು ಆದೇಶಿಸಿದೆ.

ಚಂಡೀಗಡ ಕಾಲೇಜೊಂದರಲ್ಲಿ ಪ್ರೊಫೆಸರ್‌ ಎಂದು ಅರ್ಜಿಯಲ್ಲಿ ಹೇಳಿಕೊಂಡಿರುವ ಪುಂಡಿತ್‌ರಾವ್‌ ಧರೇಣ್ಣವರ್‌, ಸಿಖ್‌ ಧರ್ಮದ ಇತಿಹಾಸ, ಸಂಸ್ಕೃತಿ ಸಾರುವಂತಹ ವಿಚಾರಗಳನ್ನು ರಾಜ್ಯ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಅಳವಡಿಸಬೇಕು.

ಬಹುಮುಖ್ಯವಾಗಿ ರಾಜ್ಯದವರೇ ಆದ ಬಾಹಿಸಾಹೇಬ್‌ ಸಿಂಗ್‌, ಮೈ ಭಾಗೋ ವೋಸೆ ಅವರ ಜೀವನ ವಿಚಾರಳನ್ನು ಒಳಗೊಂಡಿರಬೇಕು.ಬೀದರ್‌ನಲ್ಲಿ ಸಿಖ್‌ ವಿಶ್ವವಿದ್ಯಾಲಯ ಸ್ಥಾಪಿಸಿ ಬಾಹೀ ಸಾಹೀಬ್‌ ಸಿಂಗ್‌ ಹೆಸರಿನಲ್ಲಿರಬೇಕು. ಪಂಜಾಬಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಟಾಪ್ ನ್ಯೂಸ್

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

1-asdsads

T20 World Cup; ಸೂಪರ್‌-8 ಕನಸಿನಲ್ಲಿರುವ ಅಮೆರಿಕಕ್ಕೆ ಐರ್ಲೆಂಡ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

6-bng-crime

Bengaluru: ಆಸ್ತಿ ವಿಚಾರವಾಗಿ ಸೋದರ ಅತ್ತೆ ಹತ್ಯೆ: ಇಬ್ಬರ ಸೆರೆ

5-bhuvan

Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

3-darshan

Renukaswamy case: ರೆಡ್ಡಿ 2205 ಖಾತೆಯ ಮೂಲಕ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.