ಮೆಡಿಕಲ್‌ ಸೀಟು ನೆಪದಲ್ಲಿ 21.50 ಲಕ್ಷ ರೂ. ವಂಚನೆ

Team Udayavani, Aug 20, 2018, 12:41 PM IST

medical-sea.jpg

ಬೆಂಗಳೂರು: ನಗರದ ಕೆಂಪೇಗೌಡ ಮೆಡಿಕಲ್‌ ಕಾಲೇಜಿನಲ್ಲಿ (ಕಿಮ್ಸ್‌) ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ, ಹರ್ಯಾಣ ಮೂಲದ ವ್ಯಕ್ತಿ ಒಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಗನಿಗೆ ಮೆಡಿಕಲ್‌ ಸೀಟು ಸಿಗುತ್ತದೆ ಎಂಬ ಆಸೆಯಿಂದ ಹಣ ಕೊಟ್ಟು ವಂಚನೆಗೊಳಗಾದ ಕ್ರಿಶನ್‌ ಪಾಲ್‌ ಎಂಬುವರು ವಿಷನ್‌ ಎಂಟರ್‌ಪ್ರೈಸಸ್‌ ಹೆಸರಿನ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ದೆಹಲಿ ಮೂಲದ ವಿಷನ್‌ ಎಂಟರ್‌ಪ್ರೈಸಸ್‌ನ ಸಿಬ್ಬಂದಿ ಭೂಪೇಂದ್ರ ಸಿಂಗ್‌, ರಾಹುಲ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಹರ್ಯಾಣದ ಕರ್ನಾಲ್‌ ನಿವಾಸಿಯಾಗಿರುವ ಉದ್ಯಮಿ ಕ್ರಿಶನ್‌ ಪಾಲ್‌ಗೆ ಕೆಲ ದಿನಗಳ ಹಿಂದೆ ದೂರವಾಣಿ ಕರೆ ಮಾಡಿದ್ದ ಭೂಪೇಂದ್ರ ಸಿಂಗ್‌, ನಿಮ್ಮ ಮಗ ಆದಿತ್ಯ ಚೌಹಾಣ್‌ಗೆ ಬೆಂಗಳೂರಿನ ಕಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇವೆ. ಹೀಗಾಗಿ ದಾಖಲೆಗಳನ್ನು ಮೇಲ್‌ ಮಾಡಿ ಎಂದು ಹೇಳಿ ದಾಖಲೆಗಳನ್ನು ತರಿಸಿಕೊಂಡಿದ್ದ. ಬಳಿಕ ಆದಿತ್ಯ ಚೌಹಾಣ್‌ ಪಿಯುಸಿ ಹಾಗೂ ನೀಟ್‌ನಲ್ಲಿ ಉತ್ತಮ ಅಂಕ ಪಡೆದಿದ್ದು, ಸೀಟು ಸಿಗಲಿದೆ ಎಂದು ನಂಬಿಸಿದ್ದ.

ಕೆಲ ದಿನಗಳ ಬಳಿಕ ಮತ್ತೆ ಕ್ರಿಶನ್‌ ಪಾಲ್‌ರನ್ನು ಸಂಪರ್ಕಿಸಿದ ಭೂಪೇಂದ್ರ ಸಿಂಗ್‌, ಸೀಟು ಕೊಡಿಸುವ ಪ್ರಕ್ರಿಯೆ ಮುಂದುವರಿಸಲು ಆರಂಭಿಕವಾಗಿ 1.50 ಲಕ್ಷ ರೂ. ಚೆಕ್‌ಅನ್ನು ಕಂಪನಿ ಹೆಸರಿಗೆ ಕಳಿಸುವಂತೆ ತಿಳಿಸಿದ್ದ. ಅದರಂತೆ ಕ್ರಿಶನ್‌ ಪಾಲ್‌ ಚೆಕ್‌ ಕಳುಹಿಸಿದ್ದರು.

ನಂತರ ಮಗನಿಗೆ ಸೀಟು ಖಾತರಿಯಾಗಿದೆ ಎಂದು ಹೇಳಿ ಆಗಸ್ಟ್‌ 13ರಂದು ಕ್ರಿಶನ್‌ಪಾಲ್‌ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಭೂಪೇಂದ್ರ ಸಿಂಗ್‌ ಮತ್ತು ರಾಹುಲ್‌ ಎಂಬುವರು ಎಂ.ಜಿ.ರಸ್ತೆಯಲ್ಲಿರುವ ಬಾರ್ಟನ್‌ ಕಾಫಿ ಡೇಯಲ್ಲಿ 20 ಲಕ್ಷ ರೂ. ಪಡೆದುಕೊಂಡು, ಕೆಲ ಸಮಯದ ಬಳಿಕ ಕರೆ ಮಾಡುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು.

ಇಡೀ ದಿನ ಕಾದರೂ ಅವರಿಬ್ಬರು ಮತ್ತೆ ಬಾರದೇ ಇರುವುದು ಮತ್ತು ದೂರವಾಣಿ ಕರೆಯನ್ನು ಮಾಡದ ಕಾರಣ ಅನುಮಾನಗೊಂಡ ಕ್ರಿಶನ್‌ ಪಾಲ್‌, ವಂಚಕರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್ ಆಗಿತ್ತು. ಹೀಗಾಗಿ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕ್ರಿಶನ್‌ ಪಾಲ್‌ ನೀಡಿದ ದೂರು ಮತ್ತು ಆರೋಪಿಗಳ ಮೇಲ್‌ ಐಡಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಟಾಪ್ ನ್ಯೂಸ್

Committee formation for NTA reform?

ಎನ್‌ಟಿಎ ಸುಧಾರಣೆಗೆ ಸಮಿತಿ ರಚನೆ?

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

Nellyadi ಶಿರಾಡಿ: ಕಾಡಾನೆ ದಾಳಿ, ಕೃಷಿ ಹಾನಿ

ರಾಹುಲ್‌

NDA; ಸಣ್ಣ ಕಂಪನವೂ ಕೇಂದ್ರ ಸರ್ಕಾರವನ್ನೇ ಉರುಳಿಸಬಲ್ಲದು: ರಾಹುಲ್‌

Jaganmohan reddy

ಸದ್ದಾಂ, ಜನಾರ್ದನ ರೆಡ್ಡಿ ರೀತಿ ಜಗನ್‌ ಮನೆ ನಿರ್ಮಾ ಣ: ಟಿಡಿಪಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

6

Bengaluru: ಬಕ್ರೀದ್‌ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ

5

Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Committee formation for NTA reform?

ಎನ್‌ಟಿಎ ಸುಧಾರಣೆಗೆ ಸಮಿತಿ ರಚನೆ?

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Kasaragod ಪ್ರಿಯಕರನ ಜತೆಗೆ ಹೋಗಿದ್ದ ಮಹಿಳೆ ಪೊಲೀಸರ ಉಪದೇಶದಿಂದ ಮತ್ತೆ ಪತಿಮನೆಗೆ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ

Mangaluru- Bangalore ಸುಗಮ ರಸ್ತೆ,ರೈಲು ಸಂಪರ್ಕಕ್ಕೆ ಆದ್ಯತೆ: ಸಂಸದ ಬ್ರಿಜೇಶ್‌ ಚೌಟ

Modi Krishi Sakhi Certificate for 30 thousand women

Krishi Sakhi; 30 ಸಾವಿರ ಸ್ತ್ರೀಯರಿಗೆ ಮೋದಿ ಕೃಷಿ ಸಖಿ ಪತ್ರ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.