ಬಿಪಿಎಲ್‌ ಪಡಿತರದಾರರಿಗೆ ಹೆಚ್ಚುವರಿ ಅಕ್ಕಿ ಹೊಂದಿಸುವ ಸವಾಲು

Team Udayavani, Apr 16, 2017, 10:49 AM IST

Annabhaagaya.jpg

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕುಟಂಬದ ಫ‌ಲಾನುಭವಿಗಳಿಗೆ ಏಪ್ರಿಲ್‌ 1ರಿಂದ 2 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ರಾಜ್ಯ ಸರ್ಕಾರ ಘೋಷಣೆಯೇನೊ ಮಾಡಿದೆ. ಆದರೆ, ಹೆಚ್ಚುವರಿ ಅಕ್ಕಿಯನ್ನು ಹೊಂದಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ರಾಜ್ಯದಲ್ಲಿ ಒಟ್ಟು 1.08 ಕೋಟಿ ಬಿಪಿಎಲ್‌ ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೆ 2 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಕೊಡಬೇಕಾದರೆ, ತಿಂಗಳಿಗೆ 60 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕು. ಇದಕ್ಕಾಗಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳಿಗೆ ಆಗುವ ಹೊರೆ ಬರೋಬ್ಬರಿ 180 ಕೋಟಿ ರೂ. ಪ್ರತಿ ತಿಂಗಳು 60 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ರಾಜ್ಯದಲ್ಲಿಯೇ ಸಿಗುವುದು ಕಷ್ಟ. ಹಾಗಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಪಂಜಾಬ್‌ಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು. ಆಗ ಮಾರುಕಟ್ಟೆ ದರ, ಸಾಗಣೆ ವೆಚ್ಚ ಇತ್ಯಾದಿ ಸೇರಿ ಮತ್ತಷ್ಟು ದುಬಾರಿ ಆಗಬಹುದು.

ಆಹಾರ ಇಲಾಖೆ ಮಾಹಿತಿ ಪ್ರಕಾರ ಅಕ್ರಮ ದಾಸ್ತಾನು ಜಪ್ತಿ ಹಾಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡದ ಕುಟುಂಬಗಳಿಗೆ ಪಡಿತರ ಸ್ಥಗಿತಗೊಳಿಸಿದ್ದು ಸೇರಿ ವಿವಿಧ ಕಾರಣಗಳಿಂದ 1.70 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ದಾಸ್ತಾನಿದೆ. ಇದನ್ನು ಜೂನ್‌ವರೆಗೆ ನಿಭಾಯಿಸಬಹುದು.

ಪ್ರತಿ ತಿಂಗಳಿಗೆ ಅಕ್ಕಿ ಹೊಂದಿಸುವ ಸವಾಲು ಜುಲೈನಿಂದ ಪ್ರಾರಂಭವಾಗುತ್ತದೆ. ಆಗ ಟೆಂಡರ್‌ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಬೇಕಾಗುತ್ತದೆ. ಟೆಂಡರ್‌ ಕರೆದರೆ, ಕರ್ನಾಟಕ ಅಲ್ಲದೇ ಬೇರೆ ರಾಜ್ಯದ ಅಕ್ಕಿ ಮಾರಾಟಗಾರರು ಪಾಲ್ಗೊಳ್ಳುವುದರಿಂದ 60 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಹೊಂದಿಸುವುದು ಕಷ್ಟ ಆಗಲಿಕ್ಕಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಪಡಿತರ ವಿತರಣೆ ವ್ಯವಸ್ಥೆಯಡಿ ರಾಜ್ಯದ ಬಿಪಿಎಲ್‌ (ಆದ್ಯತಾ) ಕುಟುಂಬಗಳಿಗೆ ವಿತರಿಸಲು ಆಹಾರ ಭದ್ರತಾ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ರಾಜ್ಯದ 1.08 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ತಲಾ 5 ಕೆಜಿಯಂತೆ 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಕೆಜಿಗೆ 3ರೂ.ಗಳಂತೆ ಕೇಂದ್ರ ಸರ್ಕಾರ ನೀಡುತ್ತದೆ. ಅದನ್ನು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸುತ್ತಿದೆ.

ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ತಿಂಗಳಿಗೆ ಸುಮಾರು 65 ಕೋಟಿ ರೂ. ಪಾವತಿಸುತ್ತದೆ. ಅಲ್ಲದೇ ಈಗ 2 ಕೆಜಿ ಅಕ್ಕಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವೇ ಕೊಡುತ್ತಿರುವುದರಿಂದ ಇದಕ್ಕೆ ತಗಲುವ 180 ಕೋಟಿ ರೂ. ರಾಜ್ಯದ ಬೊಕ್ಕಸದಿಂದಲೇ ಕೊಡಬೇಕು.

2 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆಗೆ ತಗಲುವ ವೆಚ್ಚ ಸರಿದೂಗಿಸಲು “ಒಂದು ಕೊಟ್ಟು ಇನ್ನೊಂದು ವಾಪಸ್‌ ಪಡೆದುಕೊಳ್ಳುವ’ ಸೂತ್ರ ಪಾಲಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ರಾಜ್ಯ ಸರ್ಕಾರ ಸಕ್ಕರೆ, ಉಪ್ಪು ಮತ್ತು ತಾಳೆ ಎಣ್ಣೆಗೆ ಕತ್ತರಿ ಹಾಕಿದೆ.

ಬೇಳೆಗೆ ಸಮಸ್ಯೆ ಇಲ್ಲ: ಈಗಿರುವ ಬಿಪಿಎಲ್‌ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 1 ಕೆಜಿಯಂತೆ ವಿತರಿಸಲು 10,500 ಮೆಟ್ರಿಕ್‌ ಟನ್‌ ತೊಗರಿ ಬೇಳೆ ಬೇಕು. ಅಗತ್ಯ ಪ್ರಮಾಣದಲ್ಲಿ ತೊಗರಿ ಬೇಳೆ ಸಿಗದಿದ್ದರಿಂದ ಒಂದೆರಡು ತಿಂಗಳು ವ್ಯತ್ಯಯ ಆಗಿತ್ತು. ಈಗ ತೊಗರಿ ಬೇಳೆ ಖರೀದಿಗೆ ಮತ್ತೆ ಕರೆದಿದ್ದ ಟೆಂಡರ್‌ಗೆ ರಾಜ್ಯ ಮತ್ತು ಬೇರೆ ರಾಜ್ಯದ ಸುಮಾರು 80 ಜನ ಮಾರಾಟಗಾರರು ನೋಂದಣಿ ಮಾಡಿಕೊಂಡಿರುವುದರಿಂದ ಮುಂದೆ ಅಗತ್ಯ ಪ್ರಮಾಣದ ತೊಗರಿ ಬೇಳೆ ಸಿಗುವ ನೀರಿಕ್ಷೆಯಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ಆಹಾರ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಸಕ್ಕರೆ, ಎಣ್ಣೆ, ಉಪ್ಪಿಗೆ 70 ಕೋಟಿ ರೂ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಬಿಪಿಎಲ್‌ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಸಕ್ಕರೆ, ತಾಳೆ ಎಣ್ಣೆ ಹಾಗೂ ಉಪ್ಪು ವಿತರಿಸಲಾಗುತ್ತಿತ್ತು. ಪ್ರತಿ ವ್ಯಕ್ತಿಗೆ 13.50 ರೂ. ಗೆ 1 ಕೆಜಿ ಸಕ್ಕರೆ, 25 ರೂ.ಗೆ ಲೀಟರ್‌ ತಾಳೆ ಎಣ್ಣೆ ಹಾಗೂ 2 ರೂ.ಗೆ ಉಪ್ಪು ಕೊಡಲಾಗುತ್ತಿತ್ತು. ಕೇಂದ್ರ ಸರ್ಕಾರವು ಕೆಜಿ ಸಕ್ಕರೆಗೆ ನೀಡುತ್ತಿದ್ದ 32 ರೂ. ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ 25 ರೂ.ಗೆ ನೀಡುವ ಎಣ್ಣೆಯನ್ನು ಕೆಜಿಗೆ 75 ರೂ.ಗೆ ಖರೀದಿಸಬೇಕಿತ್ತು. 2 ರೂ.ಗೆ ನೀಡುವ ಉಪ್ಪನ್ನು 12 ರಿಂದ 13 ರೂ. ಕೊಟ್ಟು ಖರೀದಿಸಬೇಕಿತ್ತು. ಇದಕ್ಕೆ ಫ‌ಲಾನುಭವಿಗಳು ನೀಡುವ ರಿಯಾಯಿತಿ ದರದ ಹಣ ಬಿಟ್ಟು ರಾಜ್ಯ ಸರ್ಕಾರ ತಿಂಗಳಿಗೆ 65 ರಿಂದ 70 ಕೋಟಿ ರೂ. ಖರ್ಚು ಮಾಡುತ್ತಿತ್ತು. ಅದರ ಜತೆಗೆ ಈಗ ತಿಂಗಳಿಗೆ 180 ಕೋಟಿ ರೂ. ಹೊರೆ ಬೀಳಲಿದೆ.

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ

ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ

ಜಾರಕಿಹೊಳಿ ಸೋದರರಿಗೆ ನಾಯಕರಿಂದ ಸಡ್ಡು?

ಜಾರಕಿಹೊಳಿ ಸೋದರರಿಗೆ ನಾಯಕರಿಂದ ಸಡ್ಡು?

ತಮ್ಮ ಮದುವೆಯನ್ನೇ ರದ್ದು ಮಾಡಿದ ನ್ಯೂಜಿಲೆಂಡ್‌ ಪ್ರಧಾನಿ!

ತಮ್ಮ ಮದುವೆಯನ್ನೇ ರದ್ದು ಮಾಡಿದ ನ್ಯೂಜಿಲೆಂಡ್‌ ಪ್ರಧಾನಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ

ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ

ಶಾಲೆ-ಕಾಲೇಜುಗಳಲ್ಲಿ 75 ಎನ್‌ಸಿಸಿ ಘಟಕ: ಸಿಎಂ

ಶಾಲೆ-ಕಾಲೇಜುಗಳಲ್ಲಿ 75 ಎನ್‌ಸಿಸಿ ಘಟಕ: ಸಿಎಂ

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು !

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು !

ಶುರುವಾಗದ ಲೋಕ ಪ್ರಕ್ರಿಯೆ; ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅಧಿಕಾರ 27ಕ್ಕೆ ಮುಕ್ತಾಯ

ಶುರುವಾಗದ ಲೋಕ ಪ್ರಕ್ರಿಯೆ; ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅಧಿಕಾರ 27ಕ್ಕೆ ಮುಕ್ತಾಯ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ಮಾಸ್ಕ್ ನಿರ್ಲಕ್ಷ್ಯ  ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ

ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ

ವೇಗ ಹೆಚ್ಚಳ; 50 ನಿಮಿಷ ಮೊದಲೇ ಗಮ್ಯಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.