ವಿಮಾನಗಳ ಕಸರತ್ತಿಗೆ ಜನ ಫ‌ುಲ್‌ ಖುಷ್‌


Team Udayavani, Feb 18, 2017, 12:21 PM IST

air-forcee.jpg

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಲೋಹದ ಹಕ್ಕಿಗಳ ಹಾರಾಟ ವೀಕ್ಷಿಸಲು ಜನಪ್ರವಾಹ ಹರಿದು ಬಂದಿದ್ದರಿಂದ ನಾಲ್ಕನೇ ದಿನ ವೈಮಾನಿಕ ಪ್ರದರ್ಶನಕ್ಕೆ ವಿಶೇಷ ಕಳೆ ಕಟ್ಟಿತ್ತು. ಸಾಮಾನ್ಯವಾಗಿ ವೈಮಾನಿಕ ಪ್ರದರ್ಶನ ಮೊದಲ ಮೂರು ದಿನ ಹೂಡಿಕೆದಾರರ ವ್ಯಾಪಾರ-ವಹಿವಾಟು ಆಕರ್ಷಿಸಲು ಸೀಮಿತವಾಗಿದ್ದರೆ, ಕೊನೆಯ ಎರಡು ದಿನಗಳು ಪ್ರೇಕ್ಷಕರನ್ನು ರಂಜಿಸಲು ಮೀಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಜನ ಸಾಗರೋಪಾದಿಯಲ್ಲಿ ವಾಯುನೆಲೆಗೆ ಹರಿದುಬಂದರು. ಬಾನಂಗಳದಲ್ಲಿ ವಿಮಾನಗಳ ಚಿತ್ತಾಕರ್ಷಕ ಪ್ರದರ್ಶನಗಳಿಗೆ ಸಿಳ್ಳೆ-ಕೇಕೆ, ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ “ಟೈಗರ್‌ ಮಾತ್‌’ ಸೇರಿ ಅತ್ಯಾಧುನಿಕ ಯುದ್ಧವಿಮಾನಗಳೆಲ್ಲವೂ ಪ್ರೇಕ್ಷಕರ ಮುಂದೆ ವಿವಿಧ ರೀತಿಯಲ್ಲಿ ಕಸರತ್ತು ನಡೆಸಿದವು. ಸುಮಾರು 16 ತಂಡಗಳು ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರದರ್ಶನ ನೀಡಿದವು. 

ಸುಮಾರು ಐದು ಲಕ್ಷ ಜನ ನೋಂದಣಿ ಮಾಡಿಸಿಕೊಂಡಿದ್ದು, ಈ ಪೈಕಿ ಬಹುತೇಕರು ಆಗಮಿಸಿದ್ದರು. ಇದರಿಂದ ವಾಯುನೆಲೆ ಆವರಣ ತುಂಬಿತುಳುಕುತ್ತಿತ್ತು. ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದವರಿಗೆ ವಾಯುನೆಲೆಯ ಕಾಂಪೌಂಡ್‌ ಪ್ರೇಕ್ಷಕರ ಗ್ಯಾಲರಿಯಾಗಿತ್ತು. ಪ್ರತಿ ಏರೋಬ್ಯಾಟಿಕ್‌ ತಂಡ ಹಾದುಹೋಗುತ್ತಿದ್ದಂತೆ ಜನ ಆಗಸದತ್ತ ಮುಖಮಾಡಿ, “ಹೋ…’ ಎಂದು ಕೂಗುವುದು ಸಾಮಾನ್ಯವಾಗಿತ್ತು. 

ಇದಕ್ಕೆ ಪೂರಕವಾಗಿ ಏರೋಬ್ಯಾಟಿಕ್‌ ತಂಡಗಳುಎ ಕೂಡ ಜನರ ಈ ಹುರುಪನ್ನು ಇಮ್ಮಡಿಗೊಳಿಸಿದವು. ಈ ತಂಡಗಳು ತಮ್ಮ ಪ್ರದರ್ಶನವನ್ನು ವಾಯುನೆಲೆಯ ಪ್ರಮುಖ ಪ್ರದೇಶದಿಂದ ಕಿಕ್ಕಿರಿದು ತುಂಬಿದ್ದ ವೈಮಾನಿಕ ಪ್ರದರ್ಶನದ ವೀಕ್ಷಣಾ ಪ್ರದೇಶ (ಎಡಿವಿಎ)ಕ್ಕೆ ಸ್ಥಳಾಂತರಿಸಿದ್ದು ಕಂಡುಬಂತು. ಅಲ್ಲದೆ, ಸಾಮಾನ್ಯ ಪ್ರೇಕ್ಷಕರಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಪ್ರದರ್ಶನ ನೀಡಿದವು. 

ಹಕ್ಕಿಯ “ಹೃದಯ’ಕ್ಕೆ ಮನಸೋತ ಜನ!
ನಿರೀಕ್ಷೆಯಂತೆ ಪ್ರದರ್ಶನದ ಪ್ರಮುಖ ಆಕರ್ಷಣೆ ಸೂರ್ಯಕಿರಣ್‌, ಇಂಗ್ಲೆಂಡ್‌ನ‌ ಯಾಕೊವ್‌ಲೇವ್ಸ್‌, ಸ್ವಿಡನ್‌ನ ಸ್ಕ್ಯಾಂಡಿನೇವಿಯನ್‌ ಏರೋಬ್ಯಾಟಿಕ್‌ ತಂಡಗಳು. ಮೊದಲ ಮೂರು ದಿನ ಈ ತಂಡಗಳ ಪ್ರದರ್ಶನ 5ರಿಂದ 8 ನಿಮಿಷಗಳಿಗೆ ಸೀಮಿತವಾಗಿತ್ತು. ಆದರೆ, ಶುಕ್ರವಾರ 15ರಿಂದ 20 ನಿಮಿಷಗಳವರೆಗೆ ಕಸರತ್ತು ನಡೆಸಿ ಗಮನ ಸೆಳೆದವು. ಅದರಲ್ಲೂ ಯಾಕೊವ್‌ಲೇವ್ಸ್‌ ಎಡಿವಿಎ ಭಾಗದಲ್ಲಿ ಆಗಸದಲ್ಲಿ ಬಿಡಿಸಿದ “ಹೃದಯ’ಕ್ಕೆ ಪ್ರೇಕ್ಷಕರ ಮನಸೋತರು.

ಸ್ಕ್ಯಾಂಡಿನೇವಿಯನ್‌ ತಂಡ ಸಾವಿರಾರು ಅಡಿ ಎತ್ತರದಲ್ಲಿರುವ ವಿಮಾನಗಳ ಮೇಲೆ ನಡೆಸಿದ ನೃತ್ಯ, ಸೂರ್ಯಕಿರಣ್‌ ಬಿಡಿಸಿದ ಚಿತ್ತಾರಗಳು ಮೋಡಿಮಾಡಿದವು. ಈ ಮಧ್ಯೆ ಏಕಾಏಕಿ ಕಿವಿಗಡಚಿಕ್ಕುವ ಸದ್ದಿನೊಂದಿಗೆ ನುಗ್ಗುವ ತೇಜಸ್‌, ಎಫ್-16, ಸುಖೋಯ್‌ ಸು-30 ಮತ್ತಿತರ ಯುದ್ಧವಿಮಾನಗಳು ಎದೆಯಲ್ಲಿ ನಡುಕ àಹುಟ್ಟಿಸುತ್ತಿದ್ದವು. ಲೋಹದ ಹಕ್ಕಿಗಳ ಈ ಆಟಾಟೋಪ ವೀಕ್ಷಿಸಲು ಗಣ್ಯರು, ವೈಮಾನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಇದರಿಂದ ಬೆಳಗ್ಗೆ 8ರ ಹೊತ್ತಿಗಾಗಲೇ ವಾಯುನೆಲೆಯ ಎಲ್ಲ ದ್ವಾರಗಳಲ್ಲಿ ಸರದಿ ಸಾಲುಗಳು ಸೃಷ್ಟಿಯಾಗಿದ್ದವು. ಇದರಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ಸೆಲ್ಫಿಯೊಂದಿಗೆ ಸಂಭ್ರಮ
ಯುದ್ಧವಿಮಾನಗಳು, ವಿಮಾನಗಳ ಮಾದರಿಗಳು, ಮಳಿಗೆಗಳ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿರುವುದು ಸಾಮಾನ್ಯವಾಗಿತ್ತು.  ವೈಮಾನಿಕ ಪ್ರದರ್ಶನದಲ್ಲಿ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದ ಹಾಕ್‌, ಸ್ಯಾಬ್‌ ಗ್ರಿಪನ್‌, ಸುಖೋಯ್‌ ಸೇರಿದಂತೆ ಹಲವು ಯುದ್ಧ ವಿಮಾನಗಳ ಕಾಕ್‌ಪಿಟ್‌ನಲ್ಲಿ ಕುಳಿತು ವಿಮಾನ ಹಾರಿಸುವ ಕನಸು ಕಾಣಲು ಅಕ್ಷರಶಃ ಜನ ಮುಗಿಬಿದ್ದಿದ್ದರು. ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಪಕ್ಕದಲ್ಲಿರುವವರಿಗೆ ತಮ್ಮ ಮೊಬೈಲ್‌ ಅನ್ನು ಕೈಯಲ್ಲಿಟ್ಟು, ಫೋಟೋಗೆ ಪೋಸು ನೀಡುತ್ತಿದ್ದರು. 

ಇಂದು ತೆರೆ
ಐದು ದಿನಗಳ 11ನೇ ವೈಮಾನಿಕ ಪ್ರದರ್ಶನಕ್ಕೆ ಶನಿವಾರ ತೆರೆಬೀಳಲಿದ್ದು, ಕೊನೆಯ ದಿನ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಈ ಮಧ್ಯೆ ಕಳೆದ ನಾಲ್ಕು ದಿನಗಳಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆ, ಹಲವು ಉದ್ದಿಮೆಗಳ ಸ್ಥಾಪನೆಗೆ ಸಂಬಂಧಿಸಿದ ಹತ್ತಾರು ಒಡಂಬಡಿಕೆಗಳು ತೆರೆಮರೆಯಲ್ಲಿ ನಡೆದಿವೆ. ಭವಿಷ್ಯದಲ್ಲಿ ಅವು ವಿವಿದ ಹಂತಗಳಲ್ಲಿ ಸಾಕಾರಗೊಳ್ಳಲಿವೆ. 

ಹಾಕ್‌ ವಿಮಾನ ಮೇಲ್ದರ್ಜೆಗೇರಿಸಲು ತೀರ್ಮಾನ
ಬೆಂಗಳೂರು:
ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶೀಯ ನಿರ್ಮಿತ ಹಾಕ್‌ ವಿಮಾನವನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಹಿಂದೂಸ್ತಾನ್‌ ಏರೋನೇಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣ ರಾಜು ತಿಳಿಸಿದ್ದಾರೆ.  ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಸಂಸ್ಥೆಯು ಸ್ವಾವಲಂಬನೆ ಸಾಧಿಸಲು ಹಾಕ್‌ ವಿಮಾನವನ್ನು ದೇಶೀಯವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

 ಹಾಕ್‌ ವಿಮಾನದಲ್ಲಿದ್ದ ಮಿಷನ್‌ ಕಂಪ್ಯೂಟರ್‌ ಮತ್ತು ಡಾಟಾ ಟ್ರಾನ್ಸಫ‌ರ್‌ ಯೂನಿಟ್‌ಗಳ ಜಾಗದಲ್ಲಿ ಎಚ್‌ಎಎಲ್‌ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದ ಸಾಧನಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ರುಸ್ತುಂ -2 ವಿಮಾನವನ್ನು ಎಡಿಎ ಜತೆ ಜಂಟಿಯಾಗಿ ಕಾರ್ಯನಿರ್ವಹಿಸಿ ಮೇಲ್ದರ್ಜೆಗೇರಿಸಲಾಗುವುದು. ಈ ಬಗ್ಗೆ ಎರಡು ಸಂಸ್ಥೆಗಳು ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಎಚ್‌ಎಎಲ್‌ 17 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದು, 3200 ಕೋಟಿ ರೂ. ಲಾಭಗಳಿಸಿದೆ ಎಂದು ಹೇಳಿದರು. 

 ತುಮಕೂರಿನಲ್ಲಿ ಸ್ಥಾಪನೆ ಮಾಡಲುದ್ದೇಶಿಸಿರುವ ಎಚ್‌ಎಲ್‌ನ ಘಟಕಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಕೇಂದ್ರ ಲೋಕೋಪಯೋಗಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ರಾಜ್ಯ ಸರ್ಕಾರ ನೀಡಿರುವ 615 ಎಕರೆ ಜಾಗದಲ್ಲಿ ಹೆಲಿಕಾಪ್ಟರ್‌ ಘಟಕ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ಅಲ್ಲದೇ, ಬೋಯಿಂಗ್‌ 737 ಮೇನ್‌ ಡೆಕ್‌ ಕಾರ್ಗೋ ಡೋರ್‌ ಪೂರೈಸಲು ಇಸ್ರೇಲ್‌ ಏರೋಸ್ಪೆಸ್‌ ಇಂಡಸ್ಟ್ರಿಸ್‌ ಸಂಸ್ಥೆಯು ಎಚ್‌ಎಎಲ್‌ ಅನ್ನು ಆಯ್ಕೆ ಮಾಡಿಕೊಂಡಿದ್ದು, ಈ ಸಂಬಂಧ ಏರೋಶೋ ನಲ್ಲಿ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಯಿತು. ಈಗಾಗಲೇ ಎಚ್‌ಎಎಲ್‌ 30ಕ್ಕೂ ಅಧಿಕ 737 ಮೇನ್‌ ಡೆಕ್‌ ಕಾರ್ಗೋ ಡೋರ್‌ ಅನ್ನು ಉತ್ಪಾದನೆಗೊಳಿಸಿ ಪೂರೈಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಡಾರ್‌ ಸಹಿತ ಯುದ್ಧವಿಮಾನ ಅಭಿವೃದ್ಧಿ
ಬೆಂಗಳೂರು:
ಯುದ್ಧ ವಿಮಾನ ಅಪಘಾತ ಅಥವಾ ನಾಪತ್ತೆಯಾದ ಸಂದರ್ಭದಲ್ಲಿ ಪತ್ತೆ ಹಚ್ಚಲು ಸಹಕಾರಿಯಾಗುವ ಅತ್ಯಾಧುನಿಕ ರಾಡರ್‌ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿಪಡಿಸಿದೆ. ಈ ರಾಡಾರ್‌ನ ವಿಶೇಷ ಎಂದರೆ 200 ಕಿ.ಮೀ ವ್ಯಾಪ್ತಿಯಲ್ಲಿ ಶೋಧನೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಜತೆಗೆ  ಕ್ಷಣಾರ್ಧದಲ್ಲಿ ಶತ್ರು ದಾಳಿ ಬಗ್ಗೆ ಮುನ್ಸೂಚನೆ ಸಹ ನೀಡಲಿದೆ. ಈ ರಾಡಾರ್‌ ಅನ್ನು ವಿಮಾನದ ಮೇಲ್ಭಾಗದಲ್ಲಿ ಅಳವಡಿಸಿರುವುದು.”ಎಇಡಬ್ಲೂ ಅಂಡ್‌ ಸಿ’ ಹೆಸರಿನ ರಾಡಾರ್‌ ಸಹಿತ ಯುದ್ಧ ವಿಮಾನವನ್ನು ಯಲಹಂಕದ ವೈಮಾನಿಕ ಪ್ರದರ್ಶನದಲ್ಲಿ ವಾಯುಸೇನೆಗೆ ಡಿಆರ್‌ಡಿಓ ಹಸ್ತಾಂತರ ಮಾಡಿದೆ. ಪ್ರಸ್ತುತ ಒಂದು ವಿಮಾನ ನೀಡಲಾಗಿದ್ದು, ಜೂನ್‌ ವೇಳೆಗೆ ಮತ್ತೆರಡು ಯುದ್ಧ ವಿಮಾನ ವಾಯುಸೇನೆಗೆ ನೀಡಲಿದೆ. 

ಪ್ರಸ್ತುತ ವಾಯುಸೇನೆಯಲ್ಲಿರುವ ವಿಮಾನಗಳಿಗೆ ರಾಡರ್‌ಗಳನ್ನು ಕೆಳಭಾಗದಲ್ಲಿ ಅಳವಡಿಸಲಾಗಿದೆ. ಇವುಗಳ ಸಾಮರ್ಥ್ಯ  40 ರಿಂದ 50 ಕಿ.ಮೀ.ವ್ಯಾಪ್ತಿಯೊಳಗೆ ಶೋಧನೆ ಮಾಡುವುದಾಗಿದೆ. ಆದರೆ, ಈ ನೂತನ ಯುದ್ಧ ವಿಮಾನ 200 ಕಿ.ಮೀ. ವ್ಯಾಪ್ತಿಯಲ್ಲೂ ಪತ್ತೆ ಹಚ್ಚುವ ಸಾಮರ್ಥ್ಯ  ಹೊಂದಿದ್ದು ಕಿರಿದಾದ ಪ್ರದೇಶದಲ್ಲಿದ್ದರೂ ರಾಡಾರ್‌ ಮೂಲಕ ಶೋಧನೆ ಮಾಡಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ವಿಮಾನ ಅಭಿವೃದ್ಧಿಪಡಿಸಲಾಗಿದೆ.

ನೂತನ “ಎಇಡಬ್ಲೂ ಅಂಡ್‌ಸಿ’ ವಿಮಾನವು 200 ಕಿ.ಮೀ. ವ್ಯಾಪ್ತಿಯ ವರೆಗೆ ಸಿಗ್ನಲ್‌ ನೀಡುವುದರಿಂದ ಹೆಚ್ಚು ಸುರಕ್ಷಿತವಾಗಿರಲಿದೆ. 2012ರಿಂದಲೇ ಈ ವಿಮಾನ ರಚನೆಗೆ ಕಾರ್ಯತಂತ್ರ ರೂಪಿಸಿ, 2016ಕ್ಕೆ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋರಸ್‌ ಮೇಲ್ದರ್ಜೆಗೆ
ಬೆಂಗಳೂರು:
ದೇಶದ ಗಡಿಯೊಳಗೆ ಕಣ್ತಪ್ಪಿಸಿ ಒಳನುಗ್ಗುವ ಶತ್ರುಗಳನ್ನು ಪತ್ತೆಹಚ್ಚಲು ಈಗಿರುವ “ಲಾಂಗ್‌ ರೇಂಜ್‌ ಆಪ್ಟಿಕಲ್‌ ಸೈಟ್‌’ (ಲೋರಸ್‌) ಯಂತ್ರವನ್ನು ಆಲ್ಫಾ ಡಿಸೈನ್‌ ಟೆಕ್ನಾಲಜಿ ಕಂಪನಿ  ಮೇಲ್ದರ್ಜೆಗೇರಿಸಿದೆ. 20 ಕಿ.ಮೀ ಸುತ್ತಮುತ್ತ ಎಚ್ಚರಿಕೆ ನೀಡುತ್ತಿದ್ದ ಲೋರಸ್‌ ಯಂತ್ರವನ್ನು 50 ಕಿ.ಮೀ. ದೂರ ಸೂಕ್ಷವಾಗಿ ವೀಕ್ಷಿಸುವಂತೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಆಲ್ಫಾದ ವ್ಯವಸ್ಥಾಪಕ ಲೋಹಿತ್‌ ತಿಳಿಸಿದ್ದಾರೆ. 

ಪ್ರಸ್ತುತ ಇರುವ ಯಂತ್ರವು 20 ಕಿ.ಮೀ.ಸುತ್ತಮುತ್ತ ಯಾರೇ ಪ್ರವೇಶಿದರೂ ತಕ್ಷಣ ಅಲರ್ಟ್‌ ನೀಡುತ್ತಿತ್ತು. ಇದರಿಂದ ಪ್ರತಿ 20 ಕಿ.ಮೀ.ಗೆ ಒಂದರಂತೆ ಯಂತ್ರವನ್ನು ಅಳವಡಿಸಬೇಕಿತ್ತು. ಆದರೆ ಈಗ 50 ಕಿ.ಮೀ.ದೂರದವರೆಗೂ ಸೂಕ್ಷ್ಮವಾಗಿ ನೋಡುವ ರೀತಿಯಲ್ಲಿ ಈ ಮಷಿನ್‌ನನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಯಂತ್ರ ಅಳವಡಿಸಿರುವ ವ್ಯಾಪ್ತಿಯಲ್ಲಿ ಯಾರೇ ಸಂಚರಿಸಿದರು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಎಂದು ಹೇಳಿದರು. 

ಈ ಯಂತ್ರದ ಮತ್ತೂಂದು ವಿಶೇಷವೆ ಂದರೆ, ರಾತ್ರಿ ವೇಳೆಯಲ್ಲೂ ಸಹ ಈ ಭಾಗದಲ್ಲಿ ಸಂಚರಿಸುವವರ ಚಿತ್ರಣ ಸ್ಪಷ್ಟವಾಗಿ ಗೋಚರಿಸಲಿದೆ. ಅಷ್ಟೇಅಲ್ಲದೆ, ಈ ಮಷಿನ್‌ ಕೇವಲ 20 ಕೆ.ಜಿ. ತೂಕವಿರುವುದರಿಂದ ಯೋಧರು ತಮ್ಮ ಹೆಗಲ ಮೇಲೆ ಕೊಂಡೊಯ್ಯುವಷ್ಟೂ ಹಗುರವಾಗಿದೆ ಎಂದು ತಿಳಿಸಿದರು.

ಆಗಸದಲ್ಲಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳನ್ನು ನೋಡಿದರೆ ಖುಷಿಯಾಗುತ್ತದೆ. ತೇಜಸ್‌, ಸೂರ್ಯಕಿರಣದ ವಿಮಾನಗಳ ಕಸರತ್ತು ಅದ್ಭುತ ಎನ್ನಿಸಿತು. ಎರಡನೇ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಪ್ರದರ್ಶನ ತುಂಬಾ ಸಂತೋಷ ತಂದಿದೆ. ಮಳಿಗೆಗಳಲ್ಲಿನ ಪ್ರದರ್ಶನ ಹಲವು ಮಾಹಿತಿ ನೀಡುವಂತಿವೆ’.
-ಶೈಲಿ, ಯಲಹಂಕ ನಿವಾಸಿ. 

ಮೊದಲ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಂದಿದ್ದೇನೆ. ವಿಮಾನಗಳ ಹಾರಾಟದ ಮೊದಲ ಅನುಭವ ನಿಜಕ್ಕೂ ಅದ್ಬುತವಾಗಿದೆ. ಪ್ರದರ್ಶನದಲ್ಲಿಯೂ ಮೇಕ್‌ ಇನ್‌ ಇಂಡಿಯಾಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ದೇಶ-ವಿದೇಶಗಳ ವಿಮಾನಗಳು, ಸೈನಿಕರು ತಮ್ಮ ಸಾಮರ್ಥ್ಯಗಳನ್ನು ತೋರಿಸಲು ಇದೊಂದು ಉತ್ತಮ ವೇದಿಕೆ. ಅಲ್ಲದೇ, ಜನರಿಗೆ ಯೋಧರ ಬಗ್ಗೆ ಮತ್ತಷ್ಟು ಅಭಿಮಾನ ಮೂಡಲು ಇದು ಸಹಕಾರಿ.
-ಅಮಿತಾ, ಜಾಲಹಳ್ಳಿ ಏರ್‌ಫೋರ್ಸ್‌ ಸ್ಟೇಷನ್‌ ನಿವಾಸಿ. 

ವಿಶ್ವಮಟ್ಟದಲ್ಲಿ ಗಮನಸೆಳೆದಿರುವ ಈ ಪ್ರದರ್ಶನ ನಮ್ಮ ನಗರದಲ್ಲಿ ಆಯೋಜಿಸಿರುವುದು ನಮ್ಮ ಅದೃಷ್ಟ. ಅದನ್ನು ವಿವರಿಸಲು ಸಾಧ್ಯವಿಲ್ಲ. ರಕ್ಷಣಾ ಇಲಾಖೆಯ ಬದ್ಧತೆಯನ್ನು ಸಹ ಪ್ರದರ್ಶನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಪ್ರತಿ ಬಾರಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ವಿಮಾನದ ಹಾರಾಟದ ಜತೆಗೆ ವಿಮಾನಗಳ ಬಗ್ಗೆ ತಿಳಿದುಕೊಳ್ಳಲು ಪ್ರದರ್ಶನಕ್ಕೆ ಭೇಟಿ ನೀಡಬೇಕು.
-ಮಹಮದ್‌ ಅಜೀಮ್‌ ಶಾಹಿದ್‌, ಉರ್ದು ಸಾಹಿತಿ 

ಇದೇ ಮೊದಲ ಬಾರಿಗೆ ಪ್ರದರ್ಶನ ನೋಡಲು ಕಲಬುರಗಿ ಜಿಲ್ಲೆಯಿಂದ ಆಗಮಿಸಿದ್ದೇನೆ. ಬಹಳ ಹತ್ತಿರದಿಂದ ವಿಮಾನಗಳ ಹಾರಾಟ ನೋಡುತ್ತಿರುವುದು ತುಂಬಾ ಸಂತೋಷವಾಗಿದೆ. ಆಗಸದಲ್ಲಿ ಪೈಲಟ್‌ಗಳು ವಿಮಾನಗಳನ್ನು ಸುತ್ತಲೂ ತಿರುಗಿಸಿ ಹಾರಾಟ ನಡೆಸುವುದು ಸುಲಭದ ಮಾತಲ್ಲ. ಯೋಧರ ಸಾಹಸ ಆಶ್ಚರ್ಯಗೊಳಿಸುತ್ತದೆ. 
-ಮಹದೇವಪ್ಪ ಕರುಟಿ, ಅಫ‌ಜಲಪುರ, ಕಲಬುರಗಿ

ವಿಮಾನಗಳ ಹಾರಾಟದಲ್ಲಿ ಪೈಲಟ್‌ಗಳು ತೋರುವ ಪ್ರದರ್ಶನ ಮೈ ಜುಂ ಎನ್ನಿಸುತ್ತದೆ. ವಿಮಾನಗಳ ಚಿತ್ತಾರ ನೋಡಲು ಅತ್ಯಾಕರ್ಷಕವಾಗಿದೆ. ದೇಶದ ಯುದ್ಧ ವಿಮಾನಗಳ ಸಾಹಸ ನೋಡುತ್ತಿದ್ದರೆ ಬೇರೆ ದೇಶಗಳಿಗಿಂತಲೂ ನಾವು ಕಡಿಮೆ ಇಲ್ಲ ಎನ್ನುವುದು ಗೊತ್ತಾಗುತ್ತದೆ. ನಾವೆಷ್ಟು ಬಲವಾಗಿದ್ದೇವೆ ಎಂಬುದು ತಿಳಿದುಕೊಳ್ಳಲು ಸಾಧ್ಯವಿದೆ.”
-ಹರೀಶ್‌, ಸರ್ಕಾರಿ ನೌಕರ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.