ತಂಪೆರೆದ ಮಳೆ ನಡುವೆ ಟ್ರಾಫಿಕ್‌ ಬಿಸಿ


Team Udayavani, Apr 21, 2018, 11:56 AM IST

tamperada.jpg

ಬೆಂಗಳೂರು: ನಗರದಲ್ಲಿ ಶುಕ್ರವಾರ ಮತ್ತೆ ಮಳೆ ಆರ್ಭಟಿಸಿತು. ಪರಿಣಾಮ ಮಳೆ ನೀರು ಪ್ರಮುಖ ರಸ್ತೆಗಳಿಗೆ ನುಗ್ಗಿ ಹಲವೆಡೆ ಸಂಚಾರದಟ್ಟಣೆ ಉಂಟಾಯಿತು. ನಾಲ್ಕೈದು ಕಡೆ ಮರಗಳು ನೆಲಕ್ಕುರುಳಿದವು. 

ದಿಢೀರ್‌ ಮಳೆಯಿಂದ ಕಾರು ಮತ್ತು ಬೈಕ್‌ ಸವಾರರು ಮತ್ತು ಬಸ್‌ ಪ್ರಯಾಣಿಕರಿಗೆ ಸಂಚಾರದಟ್ಟಣೆ ಬಿಸಿ ತಟ್ಟಿತು. ಆದರೆ, ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ಸಂಜೆ ಮಳೆ ತಂಪೆರೆಯಿತು. ನಗರದ ಕನಿಷ್ಠ ಉಷ್ಣಾಂಶ ಒಂದೇ ದಿನದಲ್ಲಿ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದ್ದು ಕಂಡುಬಂತು.  

ಸಂಜೆ 4ರ ಸುಮಾರಿಗೆ ಶುರುವಾದ ಮಳೆ, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಅಬ್ಬರಿಸಿತು. ಗಾಳಿಸಹಿತ ಮಳೆಗೆ ತಗ್ಗುಪ್ರದೇಶಗಳು, ರಸ್ತೆ ಬದಿಯ ಚರಂಡಿಗಳು, ಅಂಡರ್‌ಪಾಸ್‌ ರಸ್ತೆಗಳು ಕೆಲ ಹೊತ್ತಿನಲ್ಲೇ ಜಲಾವೃತವಾದವು.

ಪ್ರಮುಖ ರಸ್ತೆಗಳಲ್ಲಿ ಎಂದಿಗಿಂತ ವಾಹನಗಳದಟ್ಟಣೆ ಉಂಟಾಗಿ, ಹೆಜ್ಜೆ-ಹೆಜ್ಜೆಗೂ ಮೂರ್‍ನಾಲ್ಕು ನಿಮಿಷ ಕಾಯುವಂತಾಯಿತು. ರಸ್ತೆಯಲ್ಲಿ ನಿಂತ ನೀರಿನಲ್ಲಿ ಮುಂದೆ ಸಾಗಲಾಗದೆ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಇತ್ತ ರಸ್ತೆಗಳಲ್ಲಿ ವಾಹನ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಮಾಡಿದರು. 

ಮೇಕ್ರಿವೃತ್ತದ ಬಪೇರಾ ಚಿತ್ರಮಂದಿರ, ಕಾವೇರಿ ಚಿತ್ರಮಂದಿರ ಬಳಿಯ ಮ್ಯಾಜಿಕ್‌ ಬಾಕ್ಸ್‌, ಕಾವೇರಿ ಜಂಕ್ಷನ್‌ ಹಾಗೂ ಶಿವಾನಂದ ವೃತ್ತ, ಓಕಳೀಪುರ, ಶೇಷಾದ್ರಿಪುರ, ಜಯದೇವ ಆಸ್ಪತ್ರೆ ಜಂಕ್ಷನ್‌, ಮಡಿವಾಳ, ಸಿ.ಟಿ.ಮಾರುಕಟ್ಟೆ, ರಾಜಾಜಿನಗರ, ಬಸನವಗುಡಿ, ವಿಂಡ್ಸರ್‌ ಮ್ಯಾನರ್‌, ಮಾಗಡಿ ರಸ್ತೆಯ ಟೋಲ್‌ ಗೇಟ್‌ ಬಳಿಯ ಅಂಡರ್‌ಪಾಸ್‌ಗಳು ಹಾಗೂ ಜಂಕ್ಷನ್‌ಗಳಲ್ಲಿ ನೀರು ನಿಂತು ಕಾರು, ಬೈಕ್‌ಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಗಾಳಿಸಹಿತ ಮಳೆಗೆ ಇಂದಿರಾನಗರ 100 ಅಡಿ ರಸ್ತೆ, ಮಲ್ಲೇಶ್ವರ, ರಾಜರಾಜೇಶ್ವರಿ ನಗರ, ವಿಜಯನಗರ, ಹಲಸೂರಿನಲ್ಲಿ ಮರಗಳು ಧರೆಗುರುಳಿದವು. ಇದರಿಂದ ಆ ಭಾಗದಲ್ಲಿ ಸಂಚಾರ ಮಂದಗತಿಯಲ್ಲಿತ್ತು. ನಗರದ ಬಸವನಗುಡಿಯಲ್ಲಿ 20 ಮಿ.ಮೀ., ಕುಮಾರಸ್ವಾಮಿ ಲೇಔಟ್‌ 16.5, ಹೆಮ್ಮಿಗೆಪುರ 18, ನಾಗರಬಾವಿ 14, ಲಾಲ್‌ಬಾಗ್‌ 16, ಸಾರಕ್ಕಿ 12, ಕೆಂಗೇರಿ 12, ಎಚ್‌ಎಸ್‌ಆರ್‌ ಲೇಔಟ್‌ 10, ಕೊಡಿಗೇಹಳ್ಳಿ 13.5 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. 

ಇನ್ನೂ ಎರಡು ದಿನ ಮಳೆ?: ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಪ್ರದೇಶ-ತೆಲಂಗಾಣ ಮತ್ತು ರಾಜ್ಯದ ಒಳನಾಡಿನ ನಡುವೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಉಂಟಾಗಿದೆ. ಇದರಿಂದ ಮಳೆಯಾಗುತ್ತಿದ್ದು, ನಗರ ಸೇರಿದಂತೆ ಒಳನಾಡಿನಲ್ಲಿ ಇನ್ನೂ ಎರಡು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

1-asdsads

T20 World Cup; ಸೂಪರ್‌-8 ಕನಸಿನಲ್ಲಿರುವ ಅಮೆರಿಕಕ್ಕೆ ಐರ್ಲೆಂಡ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

6-bng-crime

Bengaluru: ಆಸ್ತಿ ವಿಚಾರವಾಗಿ ಸೋದರ ಅತ್ತೆ ಹತ್ಯೆ: ಇಬ್ಬರ ಸೆರೆ

5-bhuvan

Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

3-darshan

Renukaswamy case: ರೆಡ್ಡಿ 2205 ಖಾತೆಯ ಮೂಲಕ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.