ಯುವತಿಯ ಹಂತಕನಿಗೆ ಜಾಮೀನು


Team Udayavani, Aug 12, 2017, 11:34 AM IST

BGHIGHCOURT copy.jpg

ಬೆಂಗಳೂರು: ವೇಶ್ಯಾವಾಟಿಕೆ ದಂಧೆಯಲ್ಲಿ ಹಣದ ವಿಚಾರಕ್ಕೆ ಉಂಟಾಗಿದ್ದ ಜಗಳದಲ್ಲಿ ಉಗಾಂಡದ ಯುವತಿ ನಕಯಾಕಿಫ್ಲೋರೆನ್ಸ್‌ ಎಂಬುವಳನ್ನು ಕೊಂದಿದ್ದ ಆರೋಪಿ ಹಿಮಾಚಲ ಪರದೇಶ ಮೂಲದ ಇಶಾನ್‌ಗೆ ಹೈಕೋರ್ಟ್‌ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಎಂಟೆಕ್‌ ಪದವೀಧರ ಇಶಾನ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ
ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಆರೋಪಿಯ ತಂದೆ ಹಾಗೂ ಇನ್ನಿಬ್ಬರ ಭದ್ರತೆ ಖಾತರಿ, 50 ಸಾವಿರ ರೂ.ವೈಯಕ್ತಿ ಬಾಂಡ್‌,
ಸಾಕ್ಷಿ ನಾಶ ಪಡಿಸಬಾರದು ಹಾಗೂ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. ಅರ್ಜಿದಾರ ಪರ ವಕೀಲ ಹಸ್ಮತ್‌ಪಾಷ ವಾದ ಮಂಡಿಸಿ, ಅರ್ಜಿದಾರರ ತಂದೆತಾಯಿ ಇಬ್ಬರು ವೈದ್ಯರಾಗಿದ್ದು, ಸಮಾಜದಲ್ಲಿ ಉತ್ತಮಸ್ಥಾನ ಹೊಂದಿದ್ದಾರೆ. ಆರೋಪಿಯು ಕಳೆದ ಆರುತಿಂಗಳಿನಿಂದ ಜೈಲಿನಲ್ಲಿದ್ದು, ಆರೋಗ್ಯ ಏರುಪೇರಾಗಿದೆ. ಜೈಲಿ ನಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ.
ಜತೆಗೆ ಕೊಲೆ ಮಾಡಲಾಗಿದೆ ಎನ್ನಲಾದ ಕೋಣೆಯಲ್ಲಿ ಇಬ್ಬರು ಹೊರತಾಗಿ ಬೇರೆಯಾರು ಇರದ ಕಾರಣ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ನಡೆದಿದ್ದೇನು?: ವೇಶ್ಯಾವೃತ್ತಿ ನಡೆಸುತ್ತಿದ್ದ ಉಗಾಂಡ ಮೂಲದ ಯುವತಿ ನಕಯಾಕಿಫ್ಲೋರೆನ್ಸ್‌ ಕಳೆದ ಫೆ. 2 ರ ಮಧ್ಯರಾತ್ರಿ ಎಂ.ಜಿ.ರಸ್ತೆ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಈಶಾನ್ಯ ಭಾರತದ ಯುವಕ ಇಶಾನ್‌ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಇಡೀ ರಾತ್ರಿ ಜತೆಯಲ್ಲಿ ಇರಲು 5 ಸಾವಿರ ರೂ.ಗೆ ಒಪ್ಪಂದ
ಮಾಡಿಕೊಳ್ಳಲಾಗಿತ್ತು. ಇಬ್ಬರ ನಡುವೆ ವ್ಯವಹಾರ ಕುದುರಿದ ನಂತರ ಇಶಾನ್‌ ನನ್ನು ಫ್ಲೋರೆನ್ಸ್‌ ಕೊತ್ತನೂರಿನ ತನ್ನ ಮನೆಗೆ
ಕರೆದುಕೊಂಡು ಹೋಗಿದ್ದಳು. ಮೊದಲು ಇಬ್ಬರ ನಡುವೆ ಒಪ್ಪಂದವಾದಂತೆ 5 ಸಾವಿರ ರೂ. ಫ್ಲೋರೆನ್ಸ್‌ಗೆ ಇಶಾನ್‌ ಕೊಟ್ಟಿದ್ದಾನೆ. ಆಗ 10 ಸಾವಿರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಶಾನ್‌ ಮತ್ತು ನಕಯಾಕಿಫ್ಲೋರೆನ್ಸ್‌ ನಡುವೆ
ಜಗಳವಾಗಿದೆ. ಈ ಸಂದರ್ಭದಲ್ಲಿ ಫ್ಲೋರೆನ್ಸ್‌ ಚಾಕುವಿನಿಂದ ಇಶಾನ್‌ ಮೇಲೆ ಹಲ್ಲೆ ನಡೆಸಿದ್ದಳು. ಆಗ ಆತನ ಕೈಗೆ ಗಾಯವಾಗಿದ್ದವು. ಕೂಡಲೇ ತನ್ನ ಆತ್ಮ ರಕ್ಷಣೆಗಾಗಿ ಚಾಕುವನ್ನು ಕಸಿದುಕೊಂಡಿದ್ದ ಇಶಾನ್‌ ಆಕೆಗೆ ಇರಿದಿದ್ದಾನೆ. ಘಟನೆ ಕುರಿತು ಮನೆಮಾಲೀಕರು ಕೊತ್ತ ನೂರು ಪೊಲೀಸ್‌ ಠಾಣೆಯಲ್ಲಿ ದೂರುನೀಡಿದ್ದರು. ಪೊಲೀಸರು ಎಫ್ ಐ ಆರ್‌ ದಾಖಲಿಸಿ ಕೊಂಡು ಆರೋಪಿಯನ್ನು
ಆಕೆಯ ಮನೆಯಲ್ಲಿ ಬಂಧಿಸಿದ್ದರು. ಪ್ರಕರಣದ ಆರೋಪಿ ಇಶಾನ್‌ ಈ ಹಿಂದೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿ ಸಿದ್ದರು.ಆದರೆ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್‌ಗಳು ಸಕ್ಸಸ್‌

8-

KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ

7-bng-crime

Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.