ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಲಾವಿದರು


Team Udayavani, Sep 28, 2020, 5:14 PM IST

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಲಾವಿದರು

ಸಾಂದರ್ಭಿಕ ಚಿತ್ರ

ತೆಲಸಂಗ: ಕೋವಿಡ್‌ ಬಂದಾಗಿನಿಂದ ವೃತ್ತಿ ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಇಂಥಹ ಸಂದಿಗ್ಧ ಸ್ಥಿತಿಯಲ್ಲಿ ಕಲಾವಿದರು ರಂಗ ವೃತ್ತಿಯನ್ನು ತೊರೆಯದಂತೆ ನೋಡಿಕೊಳ್ಳದೆ ಇದ್ದಲ್ಲಿ ರಂಗಭೂಮಿ ಬಡವಾಗುವುದರಲ್ಲಿ ಸಂದೇಹವಿಲ್ಲ ಎಂದು ಖ್ಯಾತ ವೃತ್ತಿ ರಂಗಭೂಮಿ ಹಾಸ್ಯ ಕಲಾವಿದ ಸಿದ್ದು ನಲವತ್ತವಾಡ ಹೇಳಿದರು.

ಗ್ರಾಮದಲ್ಲಿ ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಈಗ ಕೋವಿಡ್‌ನಿಂದಾಗಿ ನಾಟಕ ಕಂಪನಿಗಳು ಬಂದ್‌ ಆಗಿದ್ದರಿಂದ ಬದುಕಿಗಾಗಿ ವೃತ್ತಿ ರಂಗಭೂಮಿ ಕಲಾವಿದರು ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಅನ್ಯ ಉದ್ಯೋಗ ಅರಸಿ ಹೋದವರು ಮತ್ತೆ  ರಂಗಭೂಮಿಗೆ ಮರಳದೇ ಹೋದರೆ ನಾಡಿನ ಸಂಸ್ಕೃತಿಯ ಸಂಸ್ಕಾರದ ಶಕ್ತಿಯಾದ ರಂಗಭೂಮಿ ಮತ್ತಷ್ಟು ಬಡವಾಗಲಿದೆ. ಟಿವಿ ಮತ್ತು ಸಿನಿಮಾ ಹಾವಳಿಗೆ ಈ ಮೊದಲೇ ರಾಜ್ಯದಲ್ಲಿ ಬೆರಳೆಣಿಕೆಯಷ್ಟೆ ನಾಟಕ ಕಂಪನಿಗಳು ಉಳಿದುಕೊಂಡಿದ್ದು, ವೃತ್ತಿ ರಂಗಭೂಮಿಗೆ ಕಲಾವಿದರ ಕೊರತೆ ಇತ್ತಿಚೀನ ದಿನಗಳಲ್ಲಿ ಹೆಚ್ಚಿದೆ. ಈಗ ಕೋವಿಡ್‌ನಿಂದಾಗಿ ಕನ್ನಡ ರಂಗಭೂಮಿಗೆ ದೊಡ್ಡ ಹೊಡೆತ ಬಿದ್ದಿದ್ದು, ಸರಕಾರ ವೃತ್ತಿ ರಂಗಭೂಮಿ ಕಲಾವಿದರ ಕೈ ಹಿಡಿಯದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ವೃತ್ತಿ ರಂಗಭೂಮಿ ಇದ್ದವು ಎಂದು ಕಥೆಗಳಲ್ಲಿ ಕೇಳಬೇಕಾದೀತು ಎಂದು ಎಚ್ಚರಿಸಿದರು.

ನಾಟಕಕಾರ ಅಮೋಘ ಖೊಬ್ರಿ ಮಾತನಾಡಿ, ಜೀವನದುದ್ದಕ್ಕೂ ತನ್ನನ್ನು ರಂಗಭೂಮಿ ಸೇವೆಗೆ ತೊಡಗಿಸಿಕೊಂಡ ಸಿದ್ದು ನಲವತ್ತವಾಡ, ಇವತ್ತಿಗೂ ನಾಟಕಗಳ ಜೀವಂತಿಕೆಗೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ರಂಗ ಜೀವಂತಿಕೆಗೆ ಶ್ರಮಿಸಿದವರಲ್ಲದೆ ಕ್ಯಾಸೆಟ್‌ ನಾಟಕಗಳಿಗೆ ಧ್ವನಿ ನೀಡುವ ಮೂಲಕ ಕ್ಯಾಸೆಟ್‌ ಕಿಂಗ್‌ ಎಂದು ಬಿರುದು ಪಡೆದವರು. ಹಾಸ್ಯ ಪಾತ್ರಗಳ ಮೂಲಕ ಜನರಲ್ಲಿ ನಾಟಕ ರುಚಿ ಹೆಚ್ಚುವಂತೆ ಮಾಡಿ ಎಲೆಮರೆ ಕಾಯಿಯಂತೆ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ವೃತ್ತಿ ರಂಗಭೂಮಿಯ ಹಿರಿಯ ಶಕ್ತಿ ಸಿದ್ದು ಇವರನ್ನು ಸರಕಾರ ಗುರುತಿಸಿ ಗೌರವಿಸಬೇಕಿದೆ ಎಂದರು.

ಹಿರಿಯರಾದ ಐ.ಎಲ್‌.ಕುಮಠಳ್ಳಿ, ತಾಪಂ ಮಾಜಿ ಸದಸ್ಯ ಅರವಿಂದ ಉಂಡೋಡಿ, ಧರೆಪ್ಪ ಮಾಳಿ, ಆನಂದ ಥೈಕಾರ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

Belthangady-,Crime-news

ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು

dr-sdk

ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ

ಕಣ್ಣು ಆಪರೇಷನ್ ಮಾಡಿದರೆ 10000 ನೀಡುತ್ತೇವೆಂದು ಹೇಳಿ, ಮಹಿಳೆಯ 5ಲಕ್ಷದ ಚಿನ್ನ ದೋಚಿದ ಆಸಾಮಿ

ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ

1-sddddas

ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್

1-adadasd

ಉತ್ತರಾಖಂಡ ಸಿಎಂ ಅಭ್ಯರ್ಥಿಯಾಗಿದ್ದ ಕೊಥಿಯಾಲ್ ಆಪ್ ಗೆ ಗುಡ್ ಬೈ

psiಪಿಎಸ್‌ಐ ನೇಮಕಾತಿ ಅಕ್ರಮ: ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕಾರ

ಪಿಎಸ್‌ಐ ನೇಮಕಾತಿ ಅಕ್ರಮ : ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ

ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡು ಇಲ್ಲವೇ ಮಡಿ ಹೋರಾಟ; ಮೃತ್ಯುಂಜಯ ಸ್ವಾಮೀಜಿ

ಮಾಡು ಇಲ್ಲವೇ ಮಡಿ ಹೋರಾಟ; ಮೃತ್ಯುಂಜಯ ಸ್ವಾಮೀಜಿ

ಕಟ್ಟುನಿಟ್ಟಾಗಿ ಚುನಾವಣೆ ಕರ್ತವ್ಯ ಮಾಡಿ

ಕಟ್ಟುನಿಟ್ಟಾಗಿ ಚುನಾವಣೆ ಕರ್ತವ್ಯ ಮಾಡಿ

12

ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು

11

ಶಿಕ್ಷಕರ ಸಹಕಾರಿ ರಾಜ್ಯಕ್ಕೆ ಮಾದರಿ: ಷಡಕ್ಷರಿ

10

ಲಿಂಗಾಯತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ

MUST WATCH

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಹೊಸ ಸೇರ್ಪಡೆ

Belthangady-,Crime-news

ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು

dr-sdk

ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ

ಕಣ್ಣು ಆಪರೇಷನ್ ಮಾಡಿದರೆ 10000 ನೀಡುತ್ತೇವೆಂದು ಹೇಳಿ, ಮಹಿಳೆಯ 5ಲಕ್ಷದ ಚಿನ್ನ ದೋಚಿದ ಆಸಾಮಿ

ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ

1-sddddas

ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್

ನಿಗದಿತ ವಿದ್ಯುತ್ ಶುಲ್ಕ ರದ್ದತಿಗೆ ಆಗ್ರಹಿಸಿ  ಏ.20 ರಿಂದ ನೇಕಾರರ ಧರಣಿ ಸತ್ಯಾಗ್ರಹ

ನಿಗದಿತ ವಿದ್ಯುತ್ ಶುಲ್ಕ ರದ್ದತಿಗೆ ಆಗ್ರಹಿಸಿ ಏ.20 ರಿಂದ ನೇಕಾರರ ಧರಣಿ ಸತ್ಯಾಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.