Udayavni Special

ಅರಭಾವಿಯಲ್ಲಿ ಸಮಬಲದ ಹೋರಾಟ

ಬಿಜೆಪಿ ಗೆಲುವಿಗೆ ಬಲ ತುಂಬಿದ ಬಾಲಚಂದ್ರ |ಜೆಡಿಎಸ್‌ ಬೆಂಬಲದೊಂದಿಗೆ ಸ್ಪರ್ಧೆಗೆ ಕಾಂಗ್ರೆಸ್‌ ಸಬಲ

Team Udayavani, May 8, 2019, 11:38 AM IST

belegavi-tdy-1

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬದಲಾವಣೆ ಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬ ವಾತಾವರಣದಲ್ಲಿ ಗೋಕಾಕ ತಾಲೂಕಿನ ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ.

ಕಳೆದ ಏಪ್ರಿಲ್ 23ರಂದು ಮತದಾನ ನಡೆದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಅರಭಾವಿ ಕ್ಷೇತ್ರದಲ್ಲಿ ತಮಗೇ ಮುನ್ನಡೆ ಖಚಿತ ಎಂಬ ವಿಶ್ವಾಸದಲ್ಲಿದ್ದರೆ ಯುವ ಸಮುದಾಯ ಮಾತ್ರ ಮೋದಿ ದೇಶಕ್ಕೆ ಮತ್ತೆ ಪ್ರಧಾನಿ ಆದರೆ ಎಷ್ಟು ಅನುಕೂಲ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅಥವಾ ಕಾಂಗ್ರೆಸ್‌ ನ ಡಾ.ವಿ.ಎಸ್‌. ಸಾಧುನವರ ಅವರನ್ನು ಗೆಲ್ಲಿಸಿದರೆ ನಮಗೇನು ಲಾಭ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಮತದಾನದ ನಂತರ ಕ್ಷೇತ್ರದಲ್ಲಿ ಕಾಣುತ್ತಿರುವ ವಾತಾವರಣ ನೋಡಿದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಬಹುತೇಕ ಸಮ-ಸಮ ಮತಗಳನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಬಿಜೆಪಿ ವಿರುದ್ಧ ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದಾಗಿ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಸಾಧುನವರ ಈ ಕ್ಷೇತ್ರದಲ್ಲಿ ಮುನ್ನಡೆ ಗಳಿಸುವ ವಿಶ್ವಾಸದಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರ ಈ ಬಾರಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪೂರ್ಣ ಪ್ರಮಾಣದಲ್ಲಿ ಪ್ರಚಾರಕ್ಕೆ ನಿಂತಿರುವದು ಪಕ್ಷದ ವಲಯದಲ್ಲಿ ಹೊಸ ಆಸೆ ಹುಟ್ಟಿಸಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಸುರೇಶ ಅಂಗಡಿ ಹಿನ್ನಡೆ ಅನುಭವಿಸಿದ್ದರು. ಆದರೆ ಈ ಬಾರಿ ಶೇ. 60ರಷ್ಟು ಹೆಚ್ಚಿನ ಮತಗಳನ್ನು ಗಳಿಸುತ್ತಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರಿದ್ದರೂ ಸುರೇಶ ಅಂಗಡಿಗೆ ಕಾಂಗ್ರೆಸ್‌ ಸಾಕಷ್ಟು ಆತಂಕ ಉಂಟುಮಾಡಿದೆ. ಈ ಬಾರಿ ಕಾಂಗ್ರೆಸ್‌ಗೆ ಜೆಡಿಎಸ್‌ ಕೈಜೋಡಿಸಿದೆ. ಈ ಕ್ಷೇತ್ರದಲ್ಲಿ ಸುರೇಶ ಅಂಗಡಿ ಹಾಗೂ ಸಾಧುನವರ ನಡುವಿನ ಚುನಾವಣೆ ಎನ್ನುವದಕ್ಕಿಂತ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಸೆಣಸಾಟ ಎಂಬಂತೆ ಕಂಡುಬಂದಿದೆ.

ಕ್ಷೇತ್ರದ ಜನರಿಗೆ ಸುರೇಶ ಅಂಗಡಿ ಪರ ಅಸಮಾಧಾನ ಇದೆ. ಮೂರು ಬಾರಿ ಸಂಸದರಾಗಿದ್ದರೂ ನಮಗೆ ಏನೂ ಮಾಡಿಲ್ಲ. ಈ ಬಾರಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಅಭಿಪ್ರಾಯ ಕ್ಷೇತ್ರದ ಜನರಲ್ಲಿ ವಿಶೇಷವಾಗಿ ಯುವ ಸಮುದಾಯದಲ್ಲಿತ್ತು. ಇದು ತಮಗೆ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್‌ ನಾಯಕರ ವಿಶ್ವಾಸ.

ಕೇಂದ್ರದಲ್ಲಿ ಮೋದಿ ಅವರು ಐದು ವರ್ಷ ಮಾಡಿದ ಸಾಧನೆ ಜನರಿಗೆ ಬಹಳ ಮೆಚ್ಚುಗೆಯಾಗಿದೆ. ಮತ್ತೆ ಅವರೇ ಪ್ರಧಾನಿಯಾಗಿ ಬರಬೇಕು ಎಂಬ ಅಭಿಪ್ರಾಯ ಎಲ್ಲ ಕಡೆ ಇದೆ. ಇದಲ್ಲದೇ ಕಾಂಗ್ರೆಸ್‌ದಲ್ಲಿ ನಾಯಕತ್ವವೇ ಇರಲಿಲ್ಲ. ಅವರಲ್ಲಿನ ಗೊಂದಲ ನಮಗೆ ಸಹಾಯಮಾಡಿತು ಎಂಬುದು ಬಿಜೆಪಿ ಮುಖಂಡರ ಹೇಳಿಕೆ.

.ಕೇಶವ ಆದಿ

ಟಾಪ್ ನ್ಯೂಸ್

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅದ್ಧೂರಿ ಮೆರವಣಿಗೆ ಇಲ್ಲದ ರಾಜ್ಯೋತ್ಸವ ಆಚರಣೆಗೆ ಸಮ್ಮತಿಯಿಲ್ಲ: ಕನ್ನಡ ಪರ ಸಂಘಟನೆಗಳು

ಅದ್ಧೂರಿ ಮೆರವಣಿಗೆ ಇಲ್ಲದ ರಾಜ್ಯೋತ್ಸವ ಆಚರಣೆಗೆ ಸಮ್ಮತಿಯಿಲ್ಲ: ಕನ್ನಡ ಪರ ಸಂಘಟನೆಗಳು

belagavi news

ಕಾಂಗ್ರೆಸ್‌ ದುಸ್ಥಿತಿ ಅನಾವರಣ: ಅಶ್ವತ್ಥನಾರಾಯಣ

Guest lecturer

ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಿ

Development works

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ghgtyt

ಅಶೋಕ್‌ ಪೂಜಾರಿ ಕಾಂಗ್ರೆಸ್‌ ಸೇರ್ಪಡೆ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

suicide

ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.