ಸಂವಿಧಾನ ಅವಮಾನ ಸಹಿಸಲಾಗದು

Team Udayavani, May 2, 2019, 3:01 PM IST

ಬೆಳಗಾವಿ: ಸಂವಿಧಾನದಲ್ಲಿ ಭಾರತದ ಪರಂಪರೆ ಕಡೆಗಣಿಸಲಾಗಿದೆ. ಧರ್ಮ ಶಾಸ್ತ್ರಗಳೇ ನಮ್ಮ ಸಂವಿಧಾನ ಎಂದು ನಾಡಿನ ಖ್ಯಾತ ಸಾಹಿತಿ ಎಸ್‌.ಎಲ್. ಭೈರಪ್ಪ ಹೇಳಿಕೆ ನೀಡುವ ಮೂಲಕ ನಮ್ಮ ಪವಿತ್ರ ಸಂವಿಧಾನವನ್ನೇ ಅವಮಾನಿಸಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯಿಕ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ಬುಧವಾರ ನಡೆದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಕುಲಗೆಟ್ಟ ಪರಂಪರೆ ಹೊಡೆದು ಹಾಕಲು ಹುಟ್ಟಿಕೊಂಡಿದ್ದೇ ಬಂಡಾಯ ಸಾಹಿತ್ಯ. ಡಾ| ಬಿ.ಆರ್‌. ಅಂಬೇಡ್ಕರ್‌ ದೇಶದ ಎಲ್ಲ ನಾಗರಿಕರ ಉನ್ನತಿ ಆಧರಿಸಿ ಸಂವಿಧಾನ ರಚಿಸಿದ್ದಾರೆ. ಆದರೆ ಭೈರಪ್ಪ ಅವರು ಒಳ್ಳೆಯ ಜ್ಞಾನಗಳಾಗಿ ಸಂವಿಧಾನಕ್ಕೆ ಅವಮಾನಿಸುವ ರೀತಿ ಮಾತಾಡಿದ್ದು ತಪ್ಪು. ಭೈರಪ್ಪ ಅವರ ದೃಷ್ಟಿಯಲ್ಲಿ ದೇವದಾಸಿಯರ ಮಕ್ಕಳು ದೇವದಾಸಿಗಳೇ ಆಗಬೇಕೆ ಎಂದು ಪ್ರಶ್ನಿಸಿದ ಅವರು, ತುಳಿತಕ್ಕೊಳಗಾದ ಸಮುದಾಯ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾಯಕದಲ್ಲಿ ಮೇಲು- ಕೀಳು ಇಲ್ಲ: ಬಂಡಾಯ ಸಂಘಟನೆ ರಾಜ್ಯ ಸಂಚಾಲಕ ಡಾ| ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕಾಯಕದಲ್ಲಿ ಮೇಲು- ಕೀಳೆಂಬುದಿಲ್ಲ. ಅದಕ್ಕೆ 12ನೇ ಶತಮಾನದಲ್ಲಿ ಬಸವಣ್ಣನವರು ಕಡಿವಾಣ ಹಾಕಿದ್ದಾರೆ. ಇಂದು ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ನಮ್ಮ ನಗರ ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಪೌರ ಕಾರ್ಮಿಕರಾದ ಗೋಪಾಲ ಹೂವನ್ನವರ, ಪರಶುರಾಮ ಹೂವನ್ನವರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಂತೋಷ ನಾಯಕ, ನಿಖೀತಾ ಭರಮನ್ನವರ, ಲಕುಷಾ ಭರಮನ್ನವರ ಕ್ರಾಂತಿಗೀತೆ ಹಾಡಿದರು. ಮಹಾಂತೇಶ ರಣಗಟ್ಟಿಮಠ, ಮಂಜುನಾಥ ಪಾಟೀಲ, ಅತೀಶ ಢಾಲೆ, ಗಜಾನನ ಸಂಗೋಟೆ, ಶಂಕರ ಕೊಡಲೆ, ರಮೇಶ ಕೋಲಕಾರ, ಅಡಿವೆಪ್ಪ ಇಟಗಿ, ರಾಜು ಸನದಿ, ನೀಲಕಂಠ ಭೂಮನ್ನವರ, ರಮೇಶ ಹುಲ್ಲೂರು ಇತರರು ಇದ್ದರು.

ಶ‌ಂಕರ ಬಾಗೇವಾಡಿ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿ ಬಾಲಕೃಷ್ಣ ನಾಯಕ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗೋಕಾಕ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಸಿವಿನಿಂದ ತೀವ್ರ...

  • ಚಿಕ್ಕೋಡಿ: ಶೈಕ್ಷಣಿಕ ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳದಲ್ಲಿಯೇ ಕಾದಾಟಕ್ಕೆ...

  • ಹುಕ್ಕೇರಿ: ಹುಕ್ಕೇರಿ ತಹಶೀಲ್ದಾರ್‌ ವರ್ತನೆ ಖಂಡಿಸಿ ನ್ಯಾಯವಾದಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿರಿಯ ವಕೀಲರ ಸಂಧಾನದ ಮೂಲಕ ಬಗೆಹರಿದಿದೆ. ಹಲವಾರು ತಿಂಗಳಿನಿಂದ...

  • ಬೆಳಗಾವಿ: ಬಸವ ಸಮಾಜದಲ್ಲಿ ಬಲಪಂಥೀಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜ ಸಂಘಟನೆ ಮತ್ತು ವಿಚಾರಧಾರೆಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಬಸವ ಭೀಮ ಸೇನೆಯ...

  • ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆರಾಯ ಮಂಗಳವಾರ ಮತ್ತೆ ಆರಂಭವಾಗಿದ್ದು, ಇದರಿಂದ ಇಳಿಕೆ ಕಂಡಿದ ಕೃಷ್ಣಾ...

ಹೊಸ ಸೇರ್ಪಡೆ