ಎಗ್ಗಿಲ್ಲದೆ ಸಾಗಿದೆ ಮರಳು-ಮರಂ ಸಾಗಣೆ

Team Udayavani, Oct 2, 2020, 7:32 PM IST

ಎಗ್ಗಿಲ್ಲದೆ ಸಾಗಿದೆ ಮರಳು-ಮರಂ ಸಾಗಣೆ

ಕೊಟ್ಟೂರು: ಬಿಕ್ಕಿಮರಡಿ ದುರ್ಗಾಂಬಿಕಾ ದೇವಾಲಯದ ಹಿಂಭಾಗದಿಂದ ಅಕ್ರಮವಾಗಿ ಗ್ರಾವಲ್‌(ಮರಂ) ಸಾಗಣೆ ಮಾಡುತ್ತಿರುವುದು.

ಕೊಟ್ಟೂರು: ಪಟ್ಟಣದ ಕೊಟ್ಟೂರು ಕೆರೆಯಲ್ಲಿ ಪ್ರತಿದಿನ ಹಗಲು ರಾತ್ರಿ ಎನ್ನದೇ ಅಕ್ರಮ ಮರಳು ಹಾಗೂ ಗ್ರಾವಲ್‌ (ಕೆಂಪು ಮಣ್ಣು)(ಮರಂ) ಸಾಗಣೆ ದಂಧೆ ನಡೆಯುತ್ತಿದೆ.

ಪಟ್ಟಣದ ಬಿಕ್ಕಿಮರಡಿ ದುರ್ಗಾಂಬ ದೇವಾಲಯದ ಹಿಂಭಾಗ ಹತ್ತರಿಂದ ಹದಿನೈದು ಟ್ರ್ಯಾಕ್ಟರ್‌ಗಳು ನಂಬರ್‌ ಪ್ಲೇಟ್‌ ಇಲ್ಲದೆ ರಾಜಾರೋಷವಾಗಿ ಪ್ರತಿದಿನ ಮರಳು ಸಾಗಿಸುತ್ತಿವೆ. ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುವುದು. ಇದುವರೆಗೂ ಯಾವ ಅಧಿಕಾರಿಯು ಇತ್ತ ಕಡೆ ಗಮನ ಹರಿಸಿಲ್ಲ. ನಂತರ ಇಲ್ಲಿನ ಅಧಿಕಾರಿಗಳು ಸಹ ಈ ಕಡೆ ಹೋಗಲು ಭಯಭೀತರಾಗುತ್ತಾರೆ. ಇಲ್ಲಿನ ರೈತರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ.

ಮರಳಿನಿಂದ ಕೆರೆ ರಸ್ತೆಗಳು ದೊಡ್ಡ ದೊಡ್ಡ ಕಂದಕಗಳಾಗಿ ಮಾರ್ಪಟ್ಟಿವೆ. ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಮರಳು ಮತ್ತು ಗ್ರಾವಲ್‌ ದಂಧೆ ಬಗ್ಗೆ ತಿಳಿದಾಗ ಸ್ಥಳಕ್ಕೆ ಬಂದು ಗ್ರಾವಲ್‌ ಮತ್ತು ಮರಳು ಅಗೆಯುವರಿಗೆ ಎಚ್ಚರಿಕೆ ನೀಡಿದ್ದರು. ಕೆಲ ದಿನಗಳ ನಂತರ ಮತ್ತೆ ಆರಂಭಗೊಂಡಿದೆ. ಚಿರಬಿ, ಚಪ್ಪರದಹಳ್ಳಿ, ಹ್ಯಾಳಾ, ಮರೂರು, ರಾಂಪುರ ಮಾರ್ಗದಲ್ಲಿನ ಹಳ್ಳ ಹೊಲಗಳಿಂದ ರಾತ್ರಿಯಿಂದ ಬೆಳಗಾಗುವ ತನಕ ಮರಳು ಕಳ್ಳಸಾಗಾಣಿಕೆ ಮಾಡುವ ಅನೇಕ ಮರಳು ಟ್ರ್ಯಾಕ್ಟರ್‌  ಗಳನ್ನು ಸೀಜ್‌ ಮಾಡಿದ್ದರು.ಈಗ ಮತ್ತೆ ಇದು ತಲೆ ಎತ್ತಿದೆ. ನಂಬರ್‌ಪ್ಲೇಟ್‌ ಇಲ್ಲದ ಟ್ರ್ಯಾಕ್ಟರ್‌ಗಳು ಹೆಚ್ಚಾಗಿ ಮರಳು ಸಾಗಾಣಿಕೆ ಮಾಡುತ್ತವೆ. ಆರ್‌ ಟಿಒ ಅಧಿಕಾರಿಗಳು ಕಣ್ಣಿಗೆ ಕಂಡರು ಕಾಣದಂತೆ ವರ್ತಿಸುತ್ತಾರೆ ಎಂದು ಜನ ಆರೋಪಿಸಿದ್ದಾರೆ.

ಪಟ್ಟಣದಿಂದ ಹೊಲಕ್ಕೆ ಮೂರು ಕಿಮೀ ಆಗುವುದು. ಶೇಂಗಾ ಮತ್ತು ಜೋಳದ ಫಸಲನ್ನು ಉಳಿಸಿಕೊಳ್ಳಲು ಒಂದು ಕಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ. ಇನ್ನೊಂದೆಡೆ ಟ್ರ್ಯಾಕ್ಟರ್‌ಗಳು ಕೆರೆ ರಸ್ತೆಯಲ್ಲಿ ಮರಂ, ಮರಳು ಸಾಗಿಸಿ ದಾರಿಯನ್ನು ಸಂಪೂರ್ಣ ಹದಗೆಡಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಫಸಲು ಸಾಗಿಸಲು ಸರಿಯಾದ ದಾರಿ ಮಾಡಿಕೊಡಿ.  -ನೊಂದ ರೈತರು

ಅಕ್ರಮ ಮರಳು ಮತ್ತು ಗ್ರಾವಲ್‌(ಮರಂ) ಅಗೆಯುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇನೆ. ನಂತರ ಕೆರೆಯ ಸುತ್ತಮುತ್ತಲಿನ ರೈತರು ಬೆಳೆ ಸಾಗಿಸಲು ರಸ್ತೆ ಸರಿಪಡಿಸುವಂತೆ ಸೂಚಿಸಿ, ಬೆಳೆ ನಷ್ಟ ಉಂಟಾಗದಂತೆ ಅನುಕೂಲ ಮಾಡಿಕೊಡುತ್ತೇನೆ.  ಜಿ.ಅನಿಲ್‌ಕುಮಾರ್‌, ತಹಶೀಲ್ದಾರ್‌, ಕೊಟ್ಟೂರು.

ರವಿಕುಮಾರ್‌.ಎಂ

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Khandre

KIOCL ಗೆ ದೇವದಾರಿ ಗಣಿಗಾರಿಕೆ ಭೂಮಿ ಹಸ್ತಾಂತರಿಸದಂತೆ ಸಚಿವ ಖಂಡ್ರೆ ಪತ್ರ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

25

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ 24ಕ್ಕೆ ಸಭೆ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.