ಪ್ಲೀಸ್‌! ನಮಗೂ ಬದುಕಲು ಅವಕಾಶ ಕೊಡಿ


Team Udayavani, Aug 17, 2018, 5:29 PM IST

bell-2.jpg

ನಮನ ಹಂಪಿ
ರಾಮಾಯಣದಲ್ಲಿ ಸೀತೆಯನ್ನು ಕಾಪಾಡಲು ಬೆಟ್ಟ ಹಾರಿ ಹನುಮಂತ ಶ್ರೀರಾಮನ ಸಂದೇಶ ನೀಡಿ ಧೈರ್ಯವಾಗಿರುವಂತೆ ಹೇಳಿದ. ಆದರೆ ಇಲ್ಲಿ ಪರಿಸ್ಥಿತಿ ತುಂಬ ಭಿನ್ನ. ಇಲ್ಲಿನ ದೃಶ್ಯ ನೋಡಿದರೆ ನಿಮ್ಮ ಕಂಗಳಲಿ ನೀರು ಬರದೆ ಇರದು. ಮುನಿದುಕೊಂಡ ತುಂಗಭದ್ರೆಯ ರುದ್ರ ನರ್ತನಕ್ಕೆ ನಲುಗಿ ಹೋಗಿದ್ದೇವೆ. ಅಸಹಾಯಕರಾಗಿದ್ದೇವೆ. ನಮ್ಮ ಪರಿಸ್ಥಿತಿಯನ್ನು ತೋರಿಸಲು ಪಾಪಾ.. ಆ ರಾಚಯ್ಯನೇ ಬರಬೇಕಾಯಿತು. ನಮಗೀಗ ರಾಮನಾಮ ಜಪ ಮಾಡದೆ ಬೇರೆ ವಿಧಿಯಲ್ಲ.

ಹೌದು, ಇಂಥ ಪರಿಸ್ಥಿತಿ ವಿಶ್ವಪ್ರಸಿದ್ಧ ಹಂಪಿ ನದಿ ಪಾತ್ರದಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ. ಈ ಕುರಿತು ನಮ್ಮ ಅಹವಾಲು ಹೇಳಿಕೊಳ್ಳಲೇಬೇಕಾಗಿದೆ. ನಾಳೆಯ ಉಳುವೆಗೆ ನಾವು ಅನಾಥರಾಗದೇ ಜೀವಿಸಬೇಕಿದೆ. ಅಂಗೈ ಅಗಲ ತುಂಬ, ತನ್ನ ಕಬಂಧ ಬಾಹುಗಳು ಮೈಕೊರೆಯುವ ಚಳಿಗೆ ಸೋತು ಹೋಗುತ್ತಿವೆ. ಮೈಮರೆತರೆ ಮಡಿಲಿನಲ್ಲಿ ಮುಂಜಾನೆಯ ಕನಸು ಕಾಣುತ್ತಿರುವ ಹಸುಗೂಸುಗಳು ನೆಮ್ಮದಿಯ ನಿದ್ರೆಗೆ ಜಾರುವುದಿಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಸ್ನೇಹಿತ, ಆತ್ಮೀಯ ಎಲ್ಲರೂ ಒಬ್ಬರಿಗೊಬ್ಬರು ಧೈರ್ಯ ತಂದುಕೊಡುತ್ತಿದ್ದೇವೆ. ಯಾಕೋ ಏನೋ ಈ ಬಾರಿ ತುಂಗಭದ್ರೆ ತುಸು ಹೆಚ್ಚೇ ಮುನಿಸಿಕೊಂಡಿದ್ದಾಳೆ.

ಮಲೆನಾಡು, ಪಶ್ಚಿಮಘಟ್ಟದ ಪ್ರಕೃತಿಗೆ ವರುಣ ದೇವನೇನೋ ತಥಾಸ್ತು ಎಂದಿದ್ದಾನೆ. ಆದರೆ ಅದರ ಸಿಟ್ಟು, ಸೆಡುವು ತುಂಗಭದ್ರೆ ತನ್ನ ಒಡಲಾಳ ತುಂಬಿಕೊಂಡು ಇಲ್ಲಿ ತೋರಿಸುತ್ತಿದ್ದಾಳೆ. ಇನ್ನಿಲ್ಲದಂತೆ ಝೇಂಕರಿಸುತ್ತಿದ್ದಾಳೆ. ಈಕೆಯ ಕೋಪ ತಾಪಕ್ಕೆ ನಾವಿರುವ ಸ್ಥಳ ಅಕ್ಷರಶಃ ದಿಕ್ಕಿಲ್ಲದಂತಾಗಿದೆ. ಸುತ್ತಲೂ ತುಂಗಭದ್ರೆಯ ನರ್ತನಕ್ಕೆ ಕಳೆದೆರಡು ದಿನಗಳಿಂದ ಬೆಚ್ಚಿ ಬಿದ್ದಿದ್ದೇವೆ.

ಸಾಕು ಮಾಡು ತಾಯಿ! ನಾವಾದ್ರೂ ಅಲ್ಪಸ್ವಲ್ಪ ತಡೆದುಕೊಳ್ಳಬಹುದು. ಆದರೆ ಪಾಪ ಹಸುಗೂಸುಗಳು ಎದೆಯಲ್ಲಿ ಬೆಚ್ಚನೆಯ ಜಾಗ ಹುಡುಕುತ್ತಿವೆ. ತೋಯ್ದು ತೊಪ್ಪೆಯಾಗಿ ಕೂಳಿಲ್ಲದೇ ಧೋ ಎಂದು ಹರಿಯುವ ನಿನ್ನ ನೋಡಿ ಶಪಿಸಬೇಕೆನಿಸುತ್ತಿದೆ. ಆದರೇನು ಮಾಡೋದು ನಮಗೆ ಮಾತುಬಾರದು. ರಾತ್ರಿ ಕೊರೆಯುವ ಚಳಿಗೆ ಮಕ್ಕಳು ಹೈರಾಣಾಗುತ್ತಿವೆ. ಮನುಷ್ಯರಿಗೆ ಮಾತ್ರ ಜೀವವಿದೆಯಾ? ಮನುಷ್ಯ ಜಾತಿಗೆ ಹೋಲುವ ನಾವಾರೂ ಯಾರಿಗೂ ಕಾಣಿಸುತ್ತಿಲ್ಲವೇ? ನಮ್ಮಂಥವರಿಗೆಂದೇ ಸರ್ಕಾರದ ಇಲಾಖೆಯೊಂದು ಇದೆಯಂತೆ. 

ಆದರೇನು ಮಾಡೋದು ಮನುಜರಿಗಿರುವ ಬೆಲೆ ನಮಗಿಲ್ಲವೇ? ರಾಮಾಯಾಣದಲ್ಲಿ ಶ್ರೀರಾಮನ ನಾಮಬಲವೇ ಶಕ್ತಿಯಾಗಿತ್ತು. ಇದೀಗ ನಮಗೆ ಹಂಪಿಯ ಕೋದಂಡರಾಮನೇ ಬಲ. ಆತನ ದೇಗುಲವೇ ನಮಗೆ ಶ್ರೀರಕ್ಷೆ. ಆ ದೇಗುಲದ ಕಂಬದ ತುದಿಯಲ್ಲಿ ನಾವಿಬ್ಬರೂ ನಮ್ಮ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಹೇಗಿರಬೇಕು? ಹೇ ಶ್ರೀರಾಮ ಈಗಲೂ ನೀನು ಇದ್ದರೆ ನಮ್ಮನ್ನು ಕಾಪಾಡು! ಅತ್ತು ಅತ್ತು ಅಳು ಬತ್ತಿಹೋಗಿದೆ. ನಮ್ಮನ್ನು ನಾವು ಸಂತೈಸಿಕೊಳ್ಳಬೇಕಿದೆ. ದಿನವೂ ಭಕ್ತರ ಹಣ್ಣು ಹಂಪಲು ಸಿಗುತ್ತಿತ್ತು. ಆದರೆ ಕಳೆದೊಂದು ವಾರದಿಂದ ತುಂಗಭದ್ರೆ ಮೈದುಂಬಿ ಹಂಪಿ ಹೊಳೆಯ ಮೂಲಕ ಹರಿಯುತ್ತಿದ್ದಾಳೆ. ನಿನ್ನೆ ಮೊನ್ನೆಯಂತೂ 2 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಬಿಡುತ್ತಿದ್ದಂತೆ ನದಿ ಪಾತ್ರದ ನಾವೆಲ್ಲ ಕಂಗಾಲಾಗಿದ್ದೇವೆ. ರಭಸದಿಂದ ಹೊಳೆಯಲ್ಲಿ ಬಾಳೆ ದಿಂಡು ಕಿತ್ತು ತಿನ್ನಲು ಹರಸಾಹ ಪಡುತ್ತಿದ್ದೇವೆ. ಆದರೆ ಏನೂ ಉಪಯೋಗವಾಗುತ್ತಿಲ್ಲ. ಸುತ್ತಲೂ ತುಂಗಭದ್ರೆ ಒಂದೇ ಸಮನೆ ಬುಸುಗುಡುತ್ತಿದ್ದಾಳೆ.

ಎತ್ತಲೂ ಹೋಗದ ಪರಿಸ್ಥಿತಿ. ತಿನ್ನಲು ನಮಗೇನೂ ಸಿಗುತ್ತಿಲ್ಲ. ಮಾರುದ್ದ ಈಜಾಡಲು ನಮಗಾಗುವುದಿಲ್ಲ. ಅಲ್ಲಿಯ ಬೋರ್ಗರತೆ ದನಿ ಕೇಳಿಯೇ ಭಯಗೊಂಡಿದ್ದೇವೆ. ಕಳೆದೊಂದು ದಶಕದಿಂದೇಚೆಗೆ ಇಂಥ ಪರಿಸ್ಥಿತಿಯಿದ್ದರೂ ನಮ್ಮನ್ನು ಚಿತ್ರಿಸುವವರು ಕಡಿಮೆಯಿದ್ದರು. ಆದರೆ ಇಂದು ನಮ್ಮವರನ್ನು ನಮಗೆ ತಿಳಿಯದಂತೆ ಸೆರೆ ಹಿಡಿದಿದ್ದಾರೆ.

ಇಂದು ಸಂಜೆಯ ಹೊತ್ತಿಗೆ ಬದುಕಿನ ಭರವಸೆ ಕ್ಷೀಣಿಸುತ್ತಿದೆ. ಒಬ್ಬರಿಗೊಬ್ಬರು ಧೈರ್ಯ ತಂದುಕೊಳ್ಳುತ್ತಿದ್ದೇವೆ. ಆತ್ಮಸ್ಥೈರ್ಯ ಕುಸಿಯುತ್ತಿದೆ. ಆದರೆ ಸೋಲು ಒಪ್ಪಿಕೊಳ್ಳುತ್ತಿಲ್ಲ. ಇನ್ನೇನು ಮಾಡೋದು? ನಾಳೆಯ ಒಂದೊಳ್ಳೆ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಸಾಧ್ಯವಾದರೆ ನಮ್ಮನ್ನು ಕಾಪಾಡಿ. ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬಿಡಿ. ನಾವು ಬದುಕಬೇಕಿದೆ. ಬದುಕಲು ಅವಕಾಶ ಮಾಡಿಕೊಡಿ! ನಮಗೂ ಬದುಕುವ ಹಕ್ಕಿದೆ. ಹೀಗೆಂದು ನಮಗೆ ಕೇಳಲೂ ಹಕ್ಕಿಲ್ಲವೇ? ಹೌದು ನಾವು ಮೂಕರು. ಆದರೆ ಮನಸು…. ಮೂಕಲ್ಲ. ಸಹಾಯ ಮಾಡಿ.

ಟಾಪ್ ನ್ಯೂಸ್

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khandre

KIOCL ಗೆ ದೇವದಾರಿ ಗಣಿಗಾರಿಕೆ ಭೂಮಿ ಹಸ್ತಾಂತರಿಸದಂತೆ ಸಚಿವ ಖಂಡ್ರೆ ಪತ್ರ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

25

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ 24ಕ್ಕೆ ಸಭೆ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.