ಟನ್‌ ಕಬ್ಬಿಗೆ 2400 ರೂ. ನಿಗದಿ


Team Udayavani, Jan 3, 2021, 4:22 PM IST

BIDAR-TDY-1

ಬೀದರ: ಪ್ರಸಕ್ತ ಸಾಲಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ದರ ನಿಗದಿಸಂಬಂಧ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿ ಗಳು ಮತ್ತು ಕಾರ್ಖಾನೆ ಮುಖ್ಯಸ್ಥರ ಸಭೆ ಯಶಸ್ವಿಯಾಗಿದ್ದು, ಟನ್‌ ಕಬ್ಬಿಗೆ 2400ರೂ. ಪಾವತಿಸಲು ನಿರ್ಣಯಿಸಲಾಗಿದೆ. ಇದಕ್ಕೆ ರೈತ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ.

ಕಬ್ಬಿನ ದರ ನಿಗದಿಪಡಿಸುವುದಕ್ಕೆಸಂಬಂಧಿಸಿದಂತೆ ಸಂಸದರು, ಶಾಸಕರು ಮತ್ತು ಇನ್ನೀತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮತ್ತು ವಿವಿಧ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರು ಮತ್ತುವ್ಯವಸ್ಥಾಪಕರೊಂದಿಗೆ ಸಚಿವರು ಎರಡುಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಚರ್ಚಿಸಿದರು.

ರಾಜ್ಯ ಸರ್ಕಾರವು ರೈತರು ಮತ್ತುಕಾರ್ಖಾನೆಗಳ ಪರವಿದೆ. ರೈತರಿಗೆತೊಂದರೆಯಾಗದಂತೆ ಮತ್ತುಕಾರ್ಖಾನೆಗಳ ಮೇಲೆ ಹೊರೆಯಾಗದಂತೆನೋಡಿಕೊಳ್ಳುತ್ತೇವೆ. ರೈತರು ಮತ್ತುಕಾರ್ಖಾನೆಗಳೊಂದಿಗೆ ಸದಾಕಾಲ ಜೊತೆಗೆ ಇರುತ್ತೇವೆ. ರೈತರಿಗೆ ನ್ಯಾಯಯುತ ದರನೀಡಲು ಸಹಕರಿಸಿ ಎಂದು ಸಭೆಯಲ್ಲಿದ್ದವಿವಿಧ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರುಮತ್ತು ವ್ಯವಸ್ಥಾಪಕರಿಗೆ ಸಚಿವರು ಮನವೊಲಿಸಿದರು.

ಬಳಿಕ ಡಿಸಿ ಕಚೇರಿ ಸಭಾಂಗಣದಲ್ಲಿ ರೈತರ ಸಭೆ ನಡೆಸಿ ಮಾತನಾಡಿದ ಸಚಿವರು,ರೈತರ ಬೆವರಿಗೆ ಸೂಕ್ತ ಬೆಲೆ ಸಿಗಬೇಕುಎಂದು ಯೋಚಿಸಿ, ಜಿಲ್ಲೆಯ ಎಲ್ಲಾ ಸಕ್ಕರೆಕಾರ್ಖಾನೆಗಳ ನಿರ್ದೇಶಕರು ಮತ್ತುವ್ಯವಸ್ಥಾಪಕರೊಂದಿಗೆ ಚರ್ಚಿಸಿ ದರನಿಗದಿಪಡಿಸಿ ನಿರ್ಣಯಿಸಲಾಗಿದೆ. ಪ್ರತಟನ್‌ ಕಬ್ಬಿಗೆ ರೈತರಿಗೆ ಪಾವತಿಸಬೇಕಾದ  ಒಟ್ಟು ದರ 2400 ರೂ. ನಿಗದಿಪಡಿಸಿಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯ ಜನಪ್ರತಿನಿ ಧಿಗಳು ಪಕ್ಷಬೇಧ ಮರೆತು ಎಲ್ಲರು ಸೇರಿ ಚರ್ಚಿಸಿ, ರೈತರಿಗೆ ದರ ನಿಗದಿಪಡಿಸುವ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪ್ರತಿ ಟನ್‌ ಕಬ್ಬಿಗೆ 2400 ರೂ. ರೈತರಿಗೆ ಪಾವತಿಸಲುಕಾರ್ಖಾನೆಗಳ ಆಡಳಿತ ಮಂಡಳಿಯವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಇದೆ ವೇಳೆ ಶಾಸಕ ರಾಜಶೇಖರ ಪಾಟೀಲಮಾತನಾಡಿ, ಎಲ್ಲ ಜನಪ್ರತಿನಿಧಿಗಳು ಸೇರಿ, ಚರ್ಚಿಸಿ ರೈತರಿಗೆ ನ್ಯಾಯಯುತ ದರ ನೀಡಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಎಂಎಲ್‌ಸಿ ಅರವಿಂದಕುಮಾರ ಅರಳಿ,ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ,ಬಿಡಿಎ ಅಧ್ಯಕ್ಷ ಬಾಬು ವಾಲಿ, ಡಿಸಿರಾಮಚಂದ್ರನ್‌ ಆರ್‌, ಎಸ್‌ಪಿ ನಾಗೇಶಡಿ.ಎಲ್‌., ಸಹಾಯಕ ಆಯುಕ್ತರಾದಗರೀಮಾ ಪನ್ವಾರ್‌, ಭುವನೇಶ ಪಟೇಲ್‌,ವಿವಿಧ ಸಕ್ಕರೆ ಕಾರ್ಖಾನೆಗಳ ನಿರ್ದೇಶಕರುಮತ್ತು ವ್ಯವಸ್ಥಾಪಕರು, ವಿವಿಧ ರೈತಸಂಘಟನೆಗಳ ಮುಖಂಡರು ಇದ್ದರು

ಸಭೆ ವಿಳಂಬಕ್ಕೆ ರೈತರ ಆಕ್ರೋಶ :

ರೈತ ಮುಖಂಡರನ್ನು ಹೊರಗಿಟ್ಟು ಕಬ್ಬಿನ ದರ ನಿಗದಿ ಸಂಬಂಧ ಸಭೆಯನ್ನು ನಡೆಸಿದ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ನಡೆಗೆ ಜಿಲ್ಲಾ ರೈತ ಸಂಘದ ಎರಡು ಬಣಗಳು ಆಕ್ರೋಶ ವ್ಯಕ್ತಪಡಿಸಿದವು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬೆ.11ಕ್ಕೆ ಸಭೆ ನಿಗದಿಯಾಗಿದ್ದು, ರೈತ ಸಂಘದ ಪ್ರಮುಖರಲ್ಲರೂ ಸಮಯಕ್ಕೆ ಆಗಮಿಸಿದ್ದರು. ಆದರೆ, ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಜನಪ್ರತಿನಿ ಧಿಗಳು ಮತ್ತು ಕಾರ್ಖಾನೆ ಮುಖ್ಯಸ್ಥರ ಸಭೆ ಪ್ರತ್ಯೇಕವಾಗಿ ನಡೆಸಿದ್ದರು. ಮಧ್ಯಾಹ್ನ 2 ಗಂಟೆವರೆಗೆ ಯಾರೊಬ್ಬರು ಸಭಾಂಗಣಕ್ಕೆ ಬಾರದ ಹಿನ್ನೆಲೆ ಕೆರಳಿದ ರೈತರು ಸರ್ಕಾರ, ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಧಿ ಕ್ಕಾರಕೂಗಿದರು. ಕಬ್ಬು ಬೆಳೆದು ನಮ್ಮ ಬಾಯಿ ಕಹಿ ಆಗಿದೆ. ಸಭೆಯಿಂ ಸಿಹಿ ಸಿಗುತ್ತದೆ ಎಂಬ ಆಸೆ ಹೊತ್ತು ಬಂದಿದ್ದೇವೆ. ಆದರೆ, ಮೂರು ಗಂಟೆ ಕಾಲ ರೈತರನ್ನು ಕಡೆಗಣಿಸಲಾಗಿದೆ. ಮೊದಲೇ ಕಾರ್ಖಾನೆ ಪ್ರಮುಖರ ಜತೆ ಚರ್ಚಿಸಿ ಸಭೆ ಕರೆಯಬಹುದಿತ್ತು ಎಂದು ಕಿಡಿಕಾರಿದರು.

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadsadsad

Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ

1-bidar

Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

BUS driver

Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.