ಹಳ್ಳಿ ಕದನಕ್ಕೆ ತಾಲೀಮು ಶುರು

|ಗರಿಗೆದರಿದ ಗ್ರಾಪಂ ಚುನಾವಣೆ ಭರಾಟೆ |ಹಳ್ಳಿಕಟ್ಟೆ-ಮದುವೆ ಸಮಾರಂಭದಲ್ಲಿ ರಾಜಕೀಯದ್ದೇ ಚರ್ಚೆ

Team Udayavani, Dec 6, 2020, 2:57 PM IST

ಹಳ್ಳಿ ಕದನಕ್ಕೆ ತಾಲೀಮು ಶುರು

ಸಾಂದರ್ಭಿಕ ಚಿತ್ರ

ಬೀದರ: ಬಸವಕಲ್ಯಾಣ ಉಪಚುನಾವಣೆ ಘೋಷಣೆಗೂ ಮುನ್ನವೇ ಬಿರುಸುಗೊಂಡಿದ್ದ ರಾಜಕೀಯ ಚಟುವಟಿಕೆಗಳು ತಣ್ಣಗಾಗಿದ್ದರೆ ಇತ್ತ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಹಿನ್ನಲೆ “ಹಳ್ಳಿ ಕದನ’ ರಂಗೇರುತ್ತಿದೆ. ಮಿನಿ ಸಮರಕ್ಕೆ ಚುನಾವಣಾ ಆಕಾಂಕ್ಷಿತರು ತೆರೆ ಮೆರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ.

ಗಡಿ ಜಿಲ್ಲೆ ಬೀದರನಲ್ಲಿ ಒಟ್ಟು 185 ಗ್ರಾಮ ಪಂಚಾಯತಗಳಿದ್ದು, ಈ ಪೈಕಿ 7 ಪಂಚಾಯತಿ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಕಳೆದ ಬಾರಿಯಂತೆ ಈ ಚುನಾವಣೆಯಲ್ಲೂ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಲಾಗುತ್ತಿದ್ದು, ಬೀದರ ರಾಜ್ಯದಲ್ಲೇ ಇವಿಎಂ ಬಳಸುತ್ತಿರುವ ಏಕೈಕ ಜಿಲ್ಲೆ ಆಗಿರುವುದು ವಿಶೇಷ.

ಹುಮ್ಮಸ್ಸು ಹೆಚ್ಚಿಸಿದ ಪಕ್ಷಗಳು: ಗ್ರಾಪಂ ಪಕ್ಷ ರಹಿತ ಚುನಾವಣೆ ಆಗಿದ್ದರೂ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಬೆಂಬಲಿಗ ರಾಗಿರುವುದರಿಂದ ವಿವಿಧ ಪಕ್ಷಗಳು ಈಗಾಗಲೇ ಚುನಾವಣೆಗೆ ಕಹಳೆ ಊದಿದಿದ್ದಾರೆ. ಮುಂಬರುವ ವಿಧಾನಸಭೆ ಸಾರ್ವಜನಿಕ ಚುನಾವಣೆಗೆ ಪಕ್ಷವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ವಿವಿಧ ಪಕ್ಷಗಳು ಈ ಸ್ಥಳೀಯ ಸಂಸ್ಥೆ ಕುಸ್ತಿಯನ್ನು ಸಹ ಪ್ರತಿಷ್ಠೆಯಾಗಿ ಪಡೆದಿವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ ಬಸವಕಲ್ಯಾಣ ಉಪ ಕದನದ ಜತೆಗೆ ಗ್ರಾಪಂ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದರೆ ಇನ್ನೊಂದು ಬಿಜೆಪಿ ಗ್ರಾಮ ಸ್ವರಾಜ್‌ ಸಮಾವೇಶದ ಮೂಲಕ ಹಳ್ಳಿ ಪಾಲಿಟಿಕ್ಸ್‌ಗಾಗಿ ಕಾರ್ಯಕರ್ತರಲ್ಲಿ ಹುಮಸ್ಸು ಹೆಚ್ಚಿಸಿದ್ದಾರೆ. ಆದರೆ, ಜೆಡಿಎಸ್‌ ಪಕ್ಷ ಮಾತ್ರ ಇನ್ನೂ ಅಖಾಡಕ್ಕೆ ಇಳಿಯಬೇಕಿದೆ.

ಇದನ್ನೂ ಓದಿ : ಊಟ ಕೊಡಿಸುವುದಾಗಿ ಕರೆದೊಯ್ದು ಆಸ್ಪತ್ರೆ ವಾರ್ಡ್ ಬಾಯ್ ಮತ್ತುಸ್ನೇಹಿತರಿಂದ ಬಾಲಕಿಯ ಅತ್ಯಾಚಾರ

ಅಧಿಕಾರ ವಿಕೇಂದ್ರೀಕರಣ ಬಳಿಕ ಪಂಚಾಯತಗಳಿಗೆ ಅನುದಾನ ಹರಿದುಬರುತ್ತಿರುವ ಕಾರಣ ಗ್ರಾಪಂಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಜತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ನಿಗದಿಪಡಿಸಿರುವುದು ಹಾಗೂ ಸ್ಥಳೀಯವಾಗಿ ಜನರ ಕೆಲಸ ಮಾಡಿಕೊಟ್ಟು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬಹುದೆಂಬ ಆಸೆ ಸಣ್ಣಪುಟ್ಟ ನಾಯಕರಲ್ಲಿ ಬೆಳೆಯುತ್ತಿರುವುದು ಸ್ಪರ್ಧಾಗಳುಗಳಲ್ಲಿ ಯುವ ಸಮೂಹದ ಸಂಖ್ಯೆ ಅಧಿಕವಾಗುತ್ತಿದ್ದು, ಜಿದ್ದಾ ಜಿದ್ದಿನ ಪೈಪೋಟಿಗೆ ವೇದಿಕೆ ಸಿದ್ಧವಾಗುತ್ತಿದೆ. ಪ್ರತಿ ಗ್ರಾಮ, ಓಣಿಗಳಲ್ಲಿ ಚುನಾವಣೆಯದ್ದೇ ಸದ್ದು. ಪಂಚಾಯತಿಕಟ್ಟೆ, ಹೊಟೇಲ್‌ಗ‌ಳು, ಸಭೆ-ಸಮಾರಂಭಗಳಲ್ಲಿ ಕದನದ ಚರ್ಚೆ ನಡೆಯುತ್ತಿದೆ. ವಾರ್ಡ್‌ವಾರು ಮೀಸಲಾತಿ, ಗೆಲುವಿಗೆ ಜಾತಿ ಲೆಕ್ಕಾಚಾರದ ಮಾತುಗಳು ಕೇಳಿ ಬರಲಾರಂಭಿಸಿವೆ. ಸ್ಪರ್ಧೆಗೆ ಮನವರಿಕೆ,

 ಬಾಡೂಟ ವ್ಯವಸ್ಥೆ: ಇನ್ನೂ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ತಂತ್ರಗಾರಿಕೆ ಆರಂಭಿಸಿದ್ದಾರೆ. ಮತದಾರ ಪ್ರಭುಗಳನ್ನು ಭೇಟಿ ಮಾಡಿ ತಮ್ಮ ಸ್ಪರ್ಧೆ ಬಗ್ಗೆ ಮನವರಿಕೆ ಮಾಡಿಕೊಡಲಾರಂಭಿಸಿದ್ದಾರೆ. ವಿಶೇಷವಾಗಿ ಎಂದಿಗೂ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳದವರು ಸಹ ಇದೇ ನೆಪದಲ್ಲಿ ಭರ್ಜರಿ ಬಾಡೂಟ ಮಾಡಿಸುವುದು, ಸಾರ್ವಜನಿಕ ಕಾರ್ಯಕ್ಕೆ ಹಣ ಖರ್ಚು ಮಾಡಿ ಓಲೈಕೆಗೆ ಮುಂದಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಂತೆ ಗ್ರಾಪಂ ಚುನಾವಣೆಯೂ ಸಹ ಬಿರುಸುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರವ ಚಳಿಯ ನಡುವೆಯೂ “ಹಳ್ಳಿ ಫೈಟ್‌’ನ ಅಖಾಡದ ಕಾವು ಏರಿಸುವಂತೆ ಮಾಡಿದೆ.

 

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadsadsad

Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ

1-bidar

Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

BUS driver

Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.