ಯುಪಿಎಸ್ಸಿ ಪರೀಕ್ಷೆ; 26ಕ್ಕೆ ಅರಿವು ಕಾರ್ಯಕ್ರಮ


Team Udayavani, Sep 16, 2020, 6:29 PM IST

ಯುಪಿಎಸ್ಸಿ ಪರೀಕ್ಷೆ; 26ಕ್ಕೆ ಅರಿವು ಕಾರ್ಯಕ್ರಮ

ಬೀದರ: ಜಿಲ್ಲೆಯ ಯುವ ಜನತೆಗೆ ಅನುಕೂಲವಾಗುವಂತೆ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಾಗರೀಕ ಸೇವೆಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌.ಆರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗಳ ಕುರಿತು ಅರಿವು ಮೂಡಿಸಲು ಹಿಂದಿನ ಡಿಸಿ ಡಾ. ಜಾಫರ್‌ ನಡೆಸಿದ ಕಾರ್ಯಕ್ರಮ ಮುಂದುವರಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಸೆ.26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2.30ರ ವರೆಗೆ ನಗರದ ರಂಗ ಮಂದಿರದಲ್ಲಿ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಚಾಲನೆ ನೀಡುವರು. ನಂತರ ಆಕಾಂಕ್ಷಿ ಅಭ್ಯರ್ಥಿ, ವಿದ್ಯಾರ್ಥಿಗಳನ್ನುದ್ದೇಶಿಸಿ 7 ಜನ ಐಎಎಸ್‌, ಇಬ್ಬರು ಐಪಿಎಸ್‌,ಇಬ್ಬರು ಐಆರ್‌ಎಸ್‌ ಹಾಗೂ ಐವರು ಕೆಎಎಸ್‌ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ನೋಂದಣಿ ಮಾಡಬಹುದು: ಅಂದು ರಂಗ ಮಂದಿರದಲ್ಲಿ ಬರಿ 300 ಆಸನಗಳು ಮಾತ್ರ ಇರುವುದರಿಂದ ಆಕಾಂಕ್ಷಿಗಳು ಈ ಲಿಂಕ್‌ನ್ನು https://rb.gy/kg2lnu   ಬಳಸುವ ಮೂಲಕ ನೋಂದಣಿ ಮಾಡಬಹುದು. 300ಕ್ಕಿಂತ ಹೆಚ್ಚಿನ ಆಕಾಂಕ್ಷಿಗಳು ನೋಂದಣಿ ಮಾಡಿದ್ದಲ್ಲಿ ಈ ಕಾರ್ಯಕ್ರಮವನ್ನು Youtube ಲಿಂಕ್‌ youtube/ civilservicesbidar  ಮತ್ತು Facebook https://www.facebook.com/ deo.bidar  ಮೂಲಕ ವಿಕ್ಷೀಸಬಹುದು ಎಂದರು.

ಖಾಸಗಿ ಕಾಲೇಜುಗಳಲ್ಲಿ 63 ಸೀಟು: ಜಿಲ್ಲಾಡಳಿತ ಮನವಿ ಮೇರೆಗೆ ಜಿಲ್ಲೆಯ 63 ಖಾಸಗಿ ಪಿಯು ಕಾಲೇಜುಗಳು ತಮ್ಮ ಕಾಲೇಜುಗಳಲ್ಲಿ 803 ಸೀಟುಗಳ ಪೈಕಿ 665 ಸೀಟುಗಳನ್ನು ಉಚಿತವಾಗಿ ಬಡ ವಿದ್ಯಾರ್ಥಿಗಳಿಗೆ ನೀಡಿವೆ. ಈ ಯೋಜನೆಯೂ ಹಿಂದಿನ ಡಿಸಿ ಡಾ| ಪಿ.ಸಿ. ಜಾಫರ್‌ ಅವರದ್ದೇ ಆಗಿದ್ದು, ಅದನ್ನು ಎಲ್ಲರ ಅನುಮತಿ ಮೇರೆಗೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಹೀಗಾಗಿ ಜಿಲ್ಲೆಯ 665 ವಿದ್ಯಾರ್ಥಿಗಳು ತಮಗೆ ಬೇಕಿರುವ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಶಾಹೀನ್‌ ಒಂದೇ ಕಾಲೇಜು 108 ಸೀಟು ಉಚಿತವಾಗಿ ನೀಡಿದೆ ಎಂದು ವಿವರಿಸಿದರು.

ಹಿಂದಿನ ಡಿಸಿ ಹರ್ಷ ಗುಪ್ತಾ ಅವರು ರಿಂಗ್‌ ರಸ್ತೆ ಅಭಿವೃದ್ಧಿ ಪಡಿಸಿದ್ದು, ಈ ರಿಂಗ್‌ ರಸ್ತೆ ಸುತ್ತಲೂ ಇದೀಗ 4 ಸಾವಿರ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದರು. ಎಸ್‌ಪಿ ಡಿ.ಎಲ್‌.ನಾಗೇಶ್‌, ಅಪರ ಡಿಸಿ ರುದ್ರೇಶ್‌ ಗಾಳಿ ಸುದ್ದಿಗೋಷ್ಠಿಯಲ್ಲಿದ್ದರು

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadsadsad

Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ

1-bidar

Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ

Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

BUS driver

Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.