ಬೆಳೆ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

Team Udayavani, Dec 11, 2020, 5:51 PM IST

ಬೆಳೆ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

ಬೀದರ: ಕಾರಂಜಾ ಜಲಾಶಯದಿಂದ ಹೆಚ್ಚುವರಿ ಜಮೀನಿನಲ್ಲಿ ನಾಶವಾದ ಬೆಳೆಗಳಿಗೆ ಶೀಘ್ರ ಬೆಳೆ ಪರಿಹಾರ ನೀಡಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮನವಿ ಮಾಡಿದೆ.

ಈ ಕುರಿತು ಸಮಿತಿ ಅಧ್ಯಕ್ಷಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದ ಹೆಚ್ಚುವರಿ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಮತ್ತು ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕಬ್ಬಿನ ಜಮೀನು ತನ್ನ ಫಲವತ್ತತೆ ಕಳೆದುಕೊಂಡು ಮುಂದಿನ ಐದು ವರ್ಷ ಕಾಲ ಕಬ್ಬಿನ ಬೆಳೆ ಲಾವಣಿ ಮಾಡಲು ಸಹ ಆಗುವುದಿಲ್ಲ. ಜತೆಗೆ ಇತರೆ ಬೇರೆ ಬೆಳೆ ಬೆಳೆಯಲು ಭೂಮಿಫಲವತ್ತಾಗಿರುವುದಿಲ್ಲ. ಆದ್ದರಿಂದ ಈಹೆಚ್ಚುವರಿ ಜಮೀನಿನ ಸರ್ವೇ ಮಾಡಿ,ಅದರ ವೈಜ್ಞಾನಿಕ ಪರಿಹಾರ ಶೀಘ್ರ ನೀಡಬೇಕೆಂದು ಒತ್ತಾಯಿಸಲಾಗಿದೆ.

ಜಲಾಶಯಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ವೈಜ್ಞಾನಿಕ ಪರಿಹಾರಧನ ಈವರೆಗೆನೀಡದಿರುವುದು ವಿಷಾದನಿಯ. ಕನಿಷ್ಟ ಇತ್ತೀಚೆಗೆ ಅತಿವೃಷ್ಟಿಯಿಂದಾಗಿಬೆಳೆದ ಪೈರುಗಳು ನಾಶವಾಗಿರುವುದಕ್ಕೆ ಪರಿಹಾರ ನೀಡುವುದಲ್ಲಿ ವಿಳಂಬವಾಗುತ್ತಿರುವುದು ಇನ್ನೂ ಶೋಚನೀಯ. ಸರ್ಕಾರ ರೈತರ ಪರವಾಗಿದೆ ಎಂದು ಡಂಗುರ ಸಾರುತ್ತಿದ್ದು, ಅದು ಕಾರ್ಯರೂಪದಲ್ಲಿ ತರದಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಲಾಗಿದೆ. ಕಾರಂಜಾ ಜಲಾಶಯದಲ್ಲಿ

ಭೂಮಿ-ಮನೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವ ವಿಷಯ ನನೆಗುದಿಗೆ ಬಿದ್ದಿರುವುದು ಖೇದಕರ ಸಂಗತಿ. ಹಲವುವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಸರ್ಕಾರ ಇದರತ್ತ ಕಾಳಜಿತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಪರಿಹಾರಕ್ಕಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಡಿಸಿ ರಾಮಚಂದ್ರನ್‌ ಆರ್‌. ಮನವಿ ಸ್ವೀಕರಿಸಿ ಮಾತನಾಡಿ, ಜಲಾಶಯದಿಂದಮುಳುಗಡೆಯಾದ ಹೆಚ್ಚುವರಿ ಜಮೀನಿನ ಸರ್ವೇ ಮಾಡಿಸಿ ಕಾನೂನಿನಚೌಕಟಿನಲ್ಲಿ ದೊರೆಯಬಹುದಾದಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಭಯ ನೀಡಿದರು.

ಈ ವೇಳೆ ಸಮಿತಿ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್‌, ಪ್ರಮುಖರಾದಬಸವರಾಜ ಮೂಲಗೆ, ಶಂಕರರಾವ್‌ ದೇವಣ್ಣನೊರ್‌, ನಾಗಶೆಟ್ಟೆಪ್ಪ ಹಚ್ಚಿ,ಬಸವರಾಜ ಮೂಲಗೆ, ಶಂಕರರಾವ್‌ ಗುಂಡಪ್ಪ, ಮಾಣಿಕ, ದೇವಣ್ಣನೋರ್‌,ವೀರಶೆಟ್ಟಿ, ರಮೇಶರೆಡ್ಡಿ, ಸಿದ್ರಾಮಪ್ಪಾ, ಅರ್ಜುನ, ಮಲ್ಲಶೆಟ್ಟಪ್ಪ, ಸೂರ್ಯಕಾಂತ ಲಾಲಪ್ಪಾ, ಸೋಮನಾಥ ಇದ್ದರು.

ಟಾಪ್ ನ್ಯೂಸ್

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

Prajwal Revanna Case ಅಪಹರಣ ಪ್ರಕರಣ: ಭವಾನಿಗೆ ನಿರೀಕ್ಷಣ ಜಾಮೀನು

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Bidar: ತೈಲ ದರ ಏರಿಕೆ ಖಂಡಿಸಿ ಬೈಕ್- ಕಾರು ಎಳೆದು ಪ್ರತಿಭಟನೆ

Bidar: ತೈಲ ದರ ಏರಿಕೆ ಖಂಡಿಸಿ ಬೈಕ್- ಕಾರು ಎಳೆದು ಪ್ರತಿಭಟನೆ

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

1-asdsadasd

ಬಸವಕಲ್ಯಾಣ; ಭಾರೀ ಮಳೆಗೆ ಒಡೆದ ಕೆರೆ ದಂಡೆ: ನೀರು ನುಗ್ಗಿ ಅಪಾರ ಹಾನಿ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

9 ಕೋಟಿ ರೈತರಿಗೆ 20 ಸಹಸ್ರ ಕೋ.ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

ವಿಧಾನಸೌಧ ಹರಾಜು ಹಾಕಿದರೂ ಅಚ್ಚರಿ ಇಲ್ಲ: ಅಶೋಕ್‌ ಕಿಡಿ

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

CM Siddaramaiah ಅನಗತ್ಯವಾಗಿ ಹಾಸಿಗೆ, ಬೆಡ್‌ಶೀಟ್‌ ಖರೀದಿಸಿದರೆ ಸಹಿಸುವುದಿಲ್ಲ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Jagadish Shettar ಸ್ಥಾನಕ್ಕೆ ಜು. 12ಕ್ಕೆ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.