ಅಡವಿಯಲ್ಲಿ ಮೇವಿಗಾಗಿ ಹಸುಗಳ ಅಲೆದಾಟ

Team Udayavani, May 23, 2020, 4:40 PM IST

23-May-18

ಸಾಂದರ್ಭಿಕ ಚಿತ್ರ

ವಾಡಿ: ನಾಗಾವಿ ನಾಡು, ಗಲ್ಲು ಗಣಿಗಳ ತವರು, ಸಿಮೆಂಟ್‌ ಕಾಶಿ ಚಿತ್ತಾಪುರ ತಾಲೂಕಿಗೆ ಈ ವರ್ಷ ಎರಡು ರೀತಿಯಿಂದ ಹೊಡೆತ ಬಿದ್ದಿದೆ. ಒಂದೆಡೆ ಮನುಷ್ಯರಿಗೆ ಮಹಾಮಾರಿ ಕೋವಿಡ್ ಕಾಡುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.

ಬರದ ಛಾಯೆ ಮಧ್ಯೆ ತಾಲೂಕಿನ ಜನರು ಜೀವ ರಕ್ಷಣೆಗೆ ಪರದಾಡುವಂತಾಗಿದೆ. ಭೀಮಾ ಮತ್ತು ಕಾಗಿಣಾ ನದಿಗಳು ಬತ್ತಿದ್ದರಿಂದ ವಾಡಿ, ನಾಲವಾರ, ಚಿತ್ತಾಪುರ ಹೋಬಳಿ ವ್ಯಾಪ್ತಿಯ ಅಡವಿಗಳಲ್ಲಿ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಹಸಿದ ಹಸುಗಳ ದಂಡು ಆಹಾರಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಿವೆ. ಹಳಕರ್ಟಿ, ಲಾಡ್ಲಾಪುರ, ಕಮರವಾಡಿ, ಅಳ್ಳೊಳ್ಳಿ, ಕುಂಬಾರಹಳ್ಳಿ, ಸ್ಟೇಷನ್‌ ತಾಂಡಾ, ಬಳವಡಗಿ, ಕೊಂಚೂರು ಭಾಗದ ಅಡವಿಗಳಲ್ಲಿ ಜಾನುವಾರುಗಳು ಮೇವಿನ ಹಾಹಾಕಾರ ಎದುರಿಸುತ್ತಿವೆ.

ಬೇಸಿಗೆ ಕಳೆಯಲು ರಸ್ತೆಗಳ ಬದಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಗ್ರಾಪಂ ಆಡಳಿತಗಳಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಕಚೇರಿ ಕಡತಗಳಲ್ಲಿ ವರದಿಯೂ ದಾಖಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ತೊಟ್ಟಿಗಳೇ ಕಾಣಸಿಗುವುದಿಲ್ಲ. ಅಲ್ಲೊಂದು ಇಲ್ಲೊಂದು ಕಂಡರೂ ಅವುಗಳಲ್ಲಿ ನೀರಿಲ್ಲ. ಜೋಳದ ಹೊಲಗಳಲ್ಲಿ ಕಣಕಿ ಬಣವೆಗಳನ್ನು ನಿರ್ಮಿಸಲಾಗಿದ್ದು, ಬೀಡಾಡಿ ದನಗಳಿಂದ ಮೇವು ರಕ್ಷಣೆಗೆ ಜಮೀನುದಾರರ ಆಳುಗಳು ಹೊಲ ಕಾಯುತ್ತಿದ್ದಾರೆ. ಮೇವಿಲ್ಲದ ಅಡವಿಯಲ್ಲಿ ಹಸುಗಳು ಮಣ್ಣು ಮೂಸಿ ನೋಡುತ್ತಿರುವ ಚಿಂತಾಜನಕ ದೃಶ್ಯಗಳು ಗೋಚರಿಸುತ್ತಿವೆ.

ಈ ವಿಷಯ ತಿಳಿದ ಶಾಸಕ ಪ್ರಿಯಾಂಕ್‌ ಖರ್ಗೆ ಸರಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಚಿತ್ತಾಪುರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸರಕಾರ ಇನ್ನೂ ಸ್ಪಂದಿಸಿಲ್ಲ. ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡ್ಡಾಯವಾಗಿ ನೀರಿನ ತೊಟ್ಟಿಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ಅವುಗಳಿಗೆ ನಿತ್ಯ ನೀರು ತುಂಬಿಸಬೇಕು ಎಂದು ರೈತ ಕೃಷಿ ಕಾರ್ಮಿಕ ಸಂಘ (ಆರ್‌ಕೆಎಸ್‌) ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

4

ಜಡ್ಜ್ ನಾಗಪ್ರಸನ್ನರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ!

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-chincholi

Chincholi: ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಆತ್ಮಹತ್ಯೆ

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.