ವೇತನ ಪಾವತಿಗೆ ಕೆಬಿಜೆಎನ್ನೆಲ್‌ ಗಾರ್ಡನ್‌ ನೌಕರರ ಆಗ್ರಹ

Team Udayavani, Sep 9, 2020, 4:30 PM IST

ವೇತನ ಪಾವತಿಗೆ ಕೆಬಿಜೆಎನ್ನೆಲ್‌ ಗಾರ್ಡನ್‌ ನೌಕರರ ಆಗ್ರಹ

ವಿಜಯಪುರ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಲಮಟ್ಟಿ ಕೆಬಿಜೆಎನ್ನೆಲ್‌ ಗಾರ್ಡನ್‌ ಡಿ ಗ್ರೂಪ್‌ ನೌಕರರ 5 ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಮಿಕರು ಬಾಕಿ ಇರುವ 4 ತಿಂಗಳ ವೇತನ ಕೂಡಲೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ಸಮವಸ್ತ್ರ ಮತ್ತು ಅಗತ್ಯ ವಸ್ತುಗಳು ನೀಡಬೇಕು. ವಿಶ್ರಾಂತಿ ಕೋಣೆ ನಿರ್ಮಿಸಬೇಕು. ವಾರಕ್ಕೊಮ್ಮೆ ರಜೆ ನಿಡಬೇಕು ಎಂಬುದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ವೇತನ ಸಿಗದ ಕಾರಣ ಜೀವನ ನಿರ್ವಹಣೆಗೆ ತಾವು ಎದುರಿಸುತ್ತಿರುವ ಸಮಸ್ಯೆ ನಿವೇದಿಸಿಕೊಂಡರು.

ಈ ವೇಳೆ ಎಐಯುಟಿಯುಸಿ ಸಂಘದ ಅಧ್ಯಕ್ಷ ಎಚ್‌.ಟಿ. ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್‌-19 ಸಂದರ್ಭದಲ್ಲಿ ಯಾವ ಕಾರ್ಮಿಕರ ವೇತನ ಬಾಕಿ ಉಳಿಸಿಕೊಳ್ಳದೆ ಪ್ರತಿ ತಿಂಗಳು ಪಾವತಿಸಲು ನಿರ್ದೇಶನ ನೀಡಿದೆ. ಆದರೂ ಜಿಲ್ಲೆಯ ಆಲಮಟ್ಟಿ ಗಾರ್ಡನ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ 5 ತಿಂಗಳ ವೇತನ ಪಾವತಿಸದೇ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಗಾರ್ಡನ್‌ ನೌಕರರ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.

ಇಲ್ಲಿವರೆಗೆ ಆಳ್ವಿಕೆ ಮಾಡಿದ ಎಲ್ಲ ಸರ್ಕಾರಗಳು ದೇಶದ ಸಂಪತ್ತನ್ನು ಲೂಟಿ ಮಾಡುವಬಂಡವಾಳಗಾರರ, ಕೋಟ್ಯಾಧಿಪತಿಗಳ ಸೇವೆ ಮಾಡಿವೆ. ಆದ್ದರಿಂದ ಈ ಸರ್ಕಾರಗಳ ಮೇಲೆ ಯಾವುದೇ ಭರವಸೆ ಇಡದೆ ಸಂಧಾನಾತೀತ ಹೋರಾಟ ಬೆಳೆಸುತ್ತ ಸಂಘಟನೆಯನ್ನು ಬಲಿಷ್ಠವಾಗಿಕಟ್ಟುವ ಮೂಲಕ ಕಾರ್ಮಿಕ ವಿರೋಧಿ , ಜನ ವಿರೋಧಿ  ಸರ್ಕಾರಗಳನ್ನು ಕಿತ್ತೆಸೆಯಬೇಕೆಂದು ಕರೆ ನೀಡಿದರು.

ಬಾಕಿ ಇರುವ ವೇತನ, ಸಮವಸ್ತ್ರ ಮತ್ತು ವಿಶ್ರಾಂತಿ ಕೋಣೆ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದಾಗ ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿಗಳು ಆಲಮಟ್ಟಿ ಕೆಬಿಜೆಎನ್ನೆಲ್‌ ಮುಖ್ಯ ಎಂಜಿನಿಯರ್‌ ಜೊತೆ ಮಾತನಾಡಿ ಹೆಚ್ಚಳ ವೇತನದೊಂದಿಗೆ 8 ದಿನದಲ್ಲಿ ಕಾರ್ಮಿಕರ ಖಾತೆಗೆವೇತನ ಪಾವತಿಸುವ ಭರವಸೆ ನೀಡಿದ್ದರು.ಇದೀಗ ಭರವಸೆ ಈಡೇರಿಸುವಲ್ಲಿ ಅಧಿ ಕಾರಿಗಳು ವಿಫಲವಾಗಿದ್ದಾರೆ ಎಂದು ದೂರಿದರು.

ಸಂಘಟನೆ ಪ್ರಮುಖರಾದ ದ್ಯಾಮಣ್ಣ ಬಿರಾದಾರ,ಮೀನಾಕ್ಷಿ ರಾಠೊಡ, ಸಿ.ಎ. ಕುಂಬಾರ, ಅಖಂಡೇಶಬಡಿಗೇರ, ಅನಿತಾ ಜಾಧವ, ಚಂದ್ರಶೇಖರ ಮಾಳಿ, ಯಮನೂರಿ, ಯಲ್ಲಮ್ಮ ಇನ್ನಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

Madrid Open ನಾಲ್ಕನೇ ಸುತ್ತಿನಲ್ಲಿ ಸೋಲು: ಮ್ಯಾಡ್ರಿಡ್‌ಗೆ ನಡಾಲ್‌ ವಿದಾಯ

Madrid Open ನಾಲ್ಕನೇ ಸುತ್ತಿನಲ್ಲಿ ಸೋಲು: ಮ್ಯಾಡ್ರಿಡ್‌ಗೆ ನಡಾಲ್‌ ವಿದಾಯ

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

IPL ಮಾಯಾಂಕ್‌ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.