Udayavni Special

ಉಪಕರಣಗಾರದಲ್ಲಿ ಉದ್ಯೋಗಾಧಾರಿತ ಕೋರ್ಸ್‌


Team Udayavani, May 17, 2019, 12:58 PM IST

cham-4

ಚಾಮರಾಜನಗರ: ಇಲ್ಲಿ ನಾಲ್ಕು ವರ್ಷದ ದೀರ್ಘಾವಧಿ ತರಬೇತಿ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳು ರಾಷ್ಟ್ರದ ಪ್ರಖ್ಯಾತ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ದಲ್ಲಿ ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಿದೆ.

ಎಲ್ಲರಿಗೂ ಉದ್ಯೋಗ ದೊರೆತಿದೆ: ಜಿಲ್ಲೆಯ ಯುವ ಜನರು ಕೇಂದ್ರದ ಪ್ರಯೋಜನ ಪಡೆಯಲು ಉತ್ತಮ ಅವಕಾಶವಿದೆ. ಗುಂಡ್ಲುಪೇಟೆ ಪಟ್ಟಣದಲ್ಲಿ 2007ರಲ್ಲಿ ಫ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್‌ ಟೂಲ್ ಮತ್ತು ಡೈ ಮೇಕಿಂಗ್‌ ದೀರ್ಘಾವಧಿ ಕೋರ್ಸು ಅಧ್ಯಯನಕ್ಕೆ ಅವಕಾಶ ನೀಡಿದ್ದು ಇದೂವರೆಗೆ 167 ವಿದ್ಯಾರ್ಥಿಗಳು ತರಬೇತಿ ಪಡೆದು ರಾಷ್ಟ್ರಮಟ್ಟದ ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ನೌಕರಿ ಅವಕಾಶ ಲಭಿಸಿದೆ.

ಹೆಚ್ಚಿನ‌ ಉದ್ಯೋಗ ಅವಕಾಶ: ಈ ಕೋರ್ಸು ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ದೇಶ ವಿದೇಶ ಗಳಲ್ಲೂ ಹೆಚ್ಚಿನ‌ ಉದ್ಯೋಗ ಅವಕಾಶ ಇದೆ. ಜಿಲ್ಲೆ ಯಲ್ಲಿ ಇಂತಹ ಕೋರ್ಸು ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ.

ತರಬೇತಿ ಕೇಂದ್ರದಲ್ಲಿ ಇತರೆ ಸರ್ಟಿಫೈಡ್‌ ಕೋರ್ಸು ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಟೂಲ್ ರೂಂ ಮೆಷಿನಿಷ್ಟ್, ಟೂಲ್ ಅಂಡ್‌ ಡೈ ಟೆಕ್ನಿಷಿಯನ್‌ ಕೋರ್ಸುಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಅಲ್ಪಾವಧಿ ತರಬೇತಿ: ತರಬೇತಿ ಕೇಂದ್ರವು ಕೌಶಲಾ ಭಿವೃದ್ಧಿ ಇಲಾಖೆ ಪ್ರಾಯೋಜನೆಯಡಿ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್‌.ಸಿ ಟೆಕ್ನಾಲ ಜಿಸ್ಟ್‌ ಕ್ಯಾಡ್‌/ಕ್ಯಾಮ್‌ ಸ್ಪೆಷಲಿಸ್ಟ್‌, ಟರ್ನರ್‌, ಮಿಲ್ಲರ್‌ ವಿಷಯದಲ್ಲಿ ಅಲ್ಪಾವಧಿಯ ತರಬೇತಿ ನೀಡುತ್ತಿದೆ.

ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚು ಉಪಯೋಗ: ನೂತನ ಸೌಕರ್ಯ, ತಂತ್ರ ವಿಧಾನಗಳನ್ನು ಬಳಸಿ ಕೊಂಡು ಕೈಗಾರಿಕೆಗಳಲ್ಲಿ ಗರಿಷ್ಠ ಉತ್ಪಾದನೆಗಾಗಿ ತರ ಬೇತಿ ಹಾಗೂ ಆವಿಷ್ಕಾರಕ್ಕಾಗಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ತರ ಗುರಿಯೊಂದಿಗೆ ಸರ್ಕಾರಿ ಉಪ ಕರಣಗಾರ ಮತ್ತು ತರಬೇತಿ ಕೇಂದ್ರ ಆರಂಭವಾಗಿದೆ. ಉನ್ನತ ಗುಣಮಟ್ಟದ ತರಬೇತಿ ನೀಡುತ್ತಿರುವ ಕೇಂದ್ರದ ಮುಖ್ಯ ಉದ್ದೇ ಶವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯ ರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇಕಿರುವ ತರಬೇತಿ ತಂತ್ರಜ್ಞಾನ ಕ್ರಮಗಳನ್ನು ರೂಪಿಸುವುದು ಆಗಿದೆ.

ಅರ್ಜಿಗಳ ವಿತರಣೆ: ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೋರ್ಸುಗಳ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿಗಳನ್ನು ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಉಪಕರಣಗಾರ: ಭರ್ತಿ ಮಾಡಿದ ಅರ್ಜಿಗಳನ್ನು ಮೇ 22ರೊಳಗೆ ಸಲ್ಲಿಸಬೇಕಿದೆ. ಉದ್ಯೋಗಾವಕಾಶಗಳನ್ನು ಒದಗಿ ಸುವ ಕೋರ್ಸುಗಳ ಅಧ್ಯಯನಕ್ಕೆ ಅಭ್ಯರ್ಥಿಗಳು ಮುಂದೆ ಬರಬೇಕು. ಜಿಲ್ಲೆಯ ಏಕೈಕ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಪ್ರಾಂಶು ಪಾಲರು ಕೋರಿದ್ದಾರೆ. ವಿವರಗಳಿಗೆ ದೂ: 08229- 222344, ಮೊ: 9880800692, 9945697513 ಸಂಪರ್ಕಿ ಸುವಂತೆ ಮಾಹಿತಿ ನೀಡಿದ್ದಾರೆ.

ನಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆಗೂ ಮುಂಚೆಯೇ ಕಂಪನಿಗಳಿಂದ ಕ್ಯಾಂಪಸ್‌ ಸಂದರ್ಶನ ನಡೆಯುತ್ತದೆ. ಆ ಸಂದರ್ಶನದಲ್ಲಿ ಎಲ್ಲ ವಿದ್ಯಾರ್ಥಿಗಳೂ ನೌಕರಿಗೆ ಆಯ್ಕೆಯಾಗುತ್ತಾರೆ. ಉದ್ಯೋಗಾವಕಾಶಗಳನ್ನು ಹೆಚ್ಚು ಕಲ್ಪಿಸುವ ಕೋರ್ಸ್‌ಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು. ಜಿಲ್ಲೆಯಲ್ಲಿರುವ ಏಕೈಕ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸದುಪಯೋಗ ಪಡೆಯಬೇಕು.
● ಗಣಪತಿ ಎಸ್‌ ಮೇತ್ರಿ, ಪ್ರಾಂಶುಪಾಲ, ಜಿಟಿಟಿಸಿ. ಗುಂಡ್ಲುಪೇಟೆ

ಟಾಪ್ ನ್ಯೂಸ್

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

araga jnanendra

ಅಲ್ಪಸಂಖ್ಯಾತ ಮತಗಳಿಗೆ ಸಿದ್ದರಾಮಯ್ಯ, ಎಚ್ಡಿಕೆ ಹಲ್ಲು ಗಿಂಜುತ್ತಿದ್ದಾರೆ: ಆರಗ ಜ್ಞಾನೇಂದ್ರ

communal voilance bangla

ಬಾಂಗ್ಲಾದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ: ಕಾಳಿ ದೇವಸ್ಥಾನದ 6 ವಿಗ್ರಹಗಳು ಧ್ವಂಸ

sidu

ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ : ಸಿದ್ದರಾಮಯ್ಯ

ಪ್ಲೆಸಿಸ್,ತಾಹಿರ್ ಗೆ ಮತ್ತೆ ಅವಮಾನ ಮಾಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ! ಕಿಡಿಕಾರಿದ ಸ್ಟೇನ್

ಪ್ಲೆಸಿಸ್,ತಾಹಿರ್ ಗೆ ಮತ್ತೆ ಅವಮಾನ ಮಾಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ! ಕಿಡಿಕಾರಿದ ಸ್ಟೇನ್

ಹೀರೋ ಎಕ್ಸ್‌ಟ್ರೀಂ 160ಆರ್‌ ಸ್ಟೆಲ್ತ್‌ ಬೈಕ್ ಬಿಡುಗಡೆ

ಹೀರೋ ಎಕ್ಸ್‌ಟ್ರೀಂ 160ಆರ್‌ ಸ್ಟೆಲ್ತ್‌ ಬೈಕ್ ಬಿಡುಗಡೆ

pratap

ಡಿಕೆಶಿ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ: ಪ್ರತಾಪ್ ಸಿಂಹ ಹೊಸ ಬಾಂಬ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger Capture After 21 Days of Operation – issue at chikkaballapur

21 ದಿನ ಕಾರ್ಯಾಚರಣೆ ಬಳಿಕ ಹುಲಿ ಸೆರೆ

ಸದಾಶಿವ ವರದಿಗೆ ವಿರೋಧ

ಸದಾಶಿವ ವರದಿ ಜಾರಿಗೆ ಬೃಹತ್‌ ಪ್ರತಿಭಟನೆ

gftyryt

ಚಾ.ನಗರ:  ಜಿ.ಪಂ. ಸಿಇಒ ಹರ್ಷಲ್ ನಾರಾಯಣರಾವ್ ವರ್ಗಾವಣೆ| ಕೆ.ಎಂ. ಗಾಯತ್ರಿ ನೂತನ ಸಿಇಒ

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಚಾ.ನಗರ ದಸರಾ ಮಹೋತ್ಸವ

ಚಾ.ನಗರ ದಸರಾ ಮಹೋತ್ಸವ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

Untitled-1

ಗೋವಾ: ದಿನ ಕಳೆದಂತೆ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ

ಮೇಕೆ ಕುರಿ ಮಾಂಸ ಮಾರಾಟ- ಕ್ರಮಕ್ಕೆ ಆಗ್ರಹ

ಸತ್ತ ಮೇಕೆ, ಕುರಿ ಮಾಂಸ ಮಾರಾಟ: ಕ್ರಮಕ್ಕೆ ಆಗ್ರಹ

ಸಾಲು ಸಾಲು ರಜೆ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು.!

ಸಾಲು ಸಾಲು ರಜೆ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು!

ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.