ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಕರ್ತವ್ಯ ಪಾಲಿಸಿ


Team Udayavani, Jan 4, 2020, 3:00 AM IST

abhivruddi

ಚಾಮರಾಜನಗರ: ಸಮಾಜದ ಅಭಿವೃದ್ಧಿಯಲ್ಲಿ ವಕೀಲರು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವವಾಗಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪಾಲನೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಡಿ.ವಿ. ಪಾಟೀಲ್‌ ತಿಳಿಸಿದರು.

ನಗರದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಗ್ರಂಥಾಲಯದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ವಕೀಲರ ಡೈರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ವಕೀಲರ ಸಂಘ ಉತ್ತಮ ರೀತಿಯಲ್ಲಿ ಸಂಘಟನೆಗೊಂಡಿದೆ. ಸದಾ ಲವಲವಿಕೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮವಹಿಸುತ್ತಿದೆ ಎಂದು ಪ್ರಶಂಸಿಸಿದರು.

ಅಭಿವೃದ್ಧಿ ಪರ ಬರಹ ಮೂಡಲಿ: ಸಮಾಜದಲ್ಲಿ ನಡೆಯುವ ಆಗು-ಹೋಗುಗಳು ಮತ್ತು ಅಭಿವೃದ್ಧಿ ಪರವಾದ ಬರಹಗಳು ಪತ್ರಕರ್ತರಿಂದ ಮೂಡಿಬರಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರದು ಪ್ರಮುಖ ಪಾತ್ರವಾಗಿದೆ. 2020ರ ನೂತನ ವರ್ಷವು ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ಉಂಟುಮಾಡಲಿ ಎಂದು ಶುಭ ಕೋರಿದರು.

ಉತ್ತಮ ವಾತಾವರಣ ನಿರ್ಮಾಣ: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಬಿ.ಆರ್‌. ಚಂದ್ರಮೌಳಿ ಮಾತನಾಡಿ, ಜಿಲ್ಲಾ ವಕೀಲರ ಸಂಘವು ಎಲ್ಲರ ಒಗ್ಗಟ್ಟಿನಿಂದ ಸಂಘಟನೆ ಮಾಡುವ ಜೊತೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿದೆ. ಒಳ್ಳೆಯ ಸಮಾಜಮುಖೀ ಕಾರ್ಯಕ್ರವನ್ನು ಹಮ್ಮಿಕೊಂಡು ಮಾದರಿ ವಕೀಲ ಸಂಘವಾಗಿ ಹೊರಹೊಮ್ಮಿರುವುದು ಶ್ಲಾಘನೀಯ ಎಂದರು.

ಸಂಘಕ್ಕೆ ಹೆಚ್ಚಿನ ಉತ್ತೇಜನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮಾತನಾಡಿ, ನಮ್ಮ ಸಂಘವು ವಕೀಲರ ಹಿತವನ್ನು ಬಯಸಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ಪ್ರತಿವರ್ಷದಂತೆ ವಕೀಲರ ಡೈರಿಯನ್ನು ಬಿಡುಗಡೆ ಮಾಡಲಾಗಿದೆ. ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಘಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಅವರ ಸಲಹೆ ಮತ್ತು ಸಹಕಾರ ವಕೀಲರ ಸಂಘಕ್ಕೆ ಹೆಚ್ಚಿನ ರೀತಿಯಲ್ಲಿ ದೊರೆಯಲಿ. ವಕೀಲರು ಹಾಗೂ ನ್ಯಾಯಾಧೀಶರುಗಳ ಸಂಬಂಧ ಉತ್ತಮವಾಗಿದ್ದಲ್ಲಿ ಕಕ್ಷಿದಾರರಿಗೆ ಉತ್ತಮ ನ್ಯಾಯದಾನ ನೀಡಬಹುದು ಎಂದರು.

ಸಮಾರಂಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ರಮೇಶ್‌, ಯಳಂದೂರು ಸಿವಿಲ್‌ ನ್ಯಾಯಾಧೀಶ ಶರತ್‌ಚಂದ್ರ.ಎನ್‌ ಮಾತನಾಡಿದರು. ವಕೀಲರಾದ ಕೆ.ಬಿ. ಷಡಕ್ಷರಿ ಸ್ವಾಮಿ ಮತ್ತು ಎ.ಎಸ್‌ ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿ.ಪಾಟೀಲ್‌ ಅವರು ಕೇಕ್‌ ಕತ್ತರಿಸಿ ನೂತನ ವರ್ಷಕ್ಕೆ ಶುಭ ಕೋರಿದರು.

ಈ ವೇಳೆ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಗಣಪತಿ .ಜಿ.ಬಾದಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಕ್ಷಿ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಶಾ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಸ್ಮಿತಾ.ಎಸ್‌.ವಿ, ಸರ್ಕಾರಿ ಅಭಿಯೊಜಕಿ ಲೋಲಾಕ್ಷಿ, ಜಿಲ್ಲಾ ವಕೀಲ ಎಚ್‌.ಎನ್‌.ಲೋಕೇಶ್‌, ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೀಶ್‌, ವಕೀಲರ ಸಂಘದ ಕಾರ್ಯದರ್ಶಿ ಎಸ್‌.ಮಂಜು ಹರವೆ, ಉಪಾಧ್ಯಕ್ಷ ಎಂ.ಶಿವರಾಮು, ಜಂಟಿ ಕಾರ್ಯದರ್ಶಿ ಬಿ.ಮಂಜು, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಮತಿ ಅಬೂಬ್‌ಕರ್‌, ಜಯಶ್ರೀ ಶೆಣೈ, ಮಹೇಶ್‌, ಸರ್ಕಾರಿ ವಕೀಲ ಎಂ.ಶಿವಲಿಂಗೇಗೌಡ, ಪುಟ್ಟಸ್ವಾಮಿ, ಎಸ್‌.ಜಿ.ಮಹಲಿಂಗಸ್ವಾಮಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Liquor sale ban in Shimoga- Bhadravati city limits

ಹೆಚ್ಚಿದ ಭದ್ರತೆ: ಶಿವಮೊಗ್ಗ- ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧ

ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಮಧ್ಯಪ್ರದೇಶದ ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

thumb tiranga sale 4

ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ

ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ ಎಚ್ಚರಿಕೆ

ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ ಎಚ್ಚರಿಕೆ

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್, ಬಸ್ ಭೀಕರ ಅಪಘಾತ; 20 ಮಂದಿ ಸಜೀವ ದಹನ

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್, ಬಸ್ ಭೀಕರ ಅಪಘಾತ; 20 ಮಂದಿ ಸಜೀವ ದಹನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

hanuru

ಹಣ ಕೊಡದ ಲಾರಿ ಚಾಲಕನನ್ನು ಬಂದೂಕಿನಿಂದ ಸುಡುತ್ತೇನೆಂದ ಅರಣ್ಯ ಇಲಾಖೆ ನೌಕರ : ವಿಡಿಯೋ ವೈರಲ್

17-idga-q

ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ: ಆರಗ ಜ್ಞಾನೇಂದ್ರ

ಗುಂಡ್ಲುಪೇಟೆ: ಮನೆಯ ಒಲೆಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಲು ಹೋದ ಮಹಿಳೆ ಸಜೀವ ದಹನ

ಗುಂಡ್ಲುಪೇಟೆ: ಮನೆಯ ಒಲೆಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಲು ಹೋದ ಮಹಿಳೆ ಸಜೀವ ದಹನ

tdy-8

ನಗರಸಭೆ, ಪೊಲೀಸ್‌ ಇಲಾಖೆಯಿಂದ ಜಾಥಾ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

Liquor sale ban in Shimoga- Bhadravati city limits

ಹೆಚ್ಚಿದ ಭದ್ರತೆ: ಶಿವಮೊಗ್ಗ- ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧ

7

ದೇಶಭಕ್ತಿ ಕಿಚ್ಚು ಹೊತ್ತಿಸಿದ 9 ಕಿಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ

tdy-4

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ 

6

ತುಪ್ಪರಿಯಿಂದ 10 ಸಾವಿರ ಹೆಕ್ಟೆರ್‌ಗೆ ನೀರಾವರಿ

ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಮಧ್ಯಪ್ರದೇಶದ ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.