ಪೌರತ್ವ ಕಾನೂನು: ಕಾಂಗ್ರೆಸ್‌ ಅಪಪ್ರಚಾರ

Team Udayavani, Jan 12, 2020, 3:00 AM IST

powratva-kann

ಶಿಡ್ಲಘಟ್ಟ: ಪೌರತ್ವ ಕಾನೂನುನಿಂದ ದೇಶದ ಯಾರೊಬ್ಬರಿಗೂ ತೊಂದರೆಯಾಗದು. ಆದರೆ ಕಾಂಗ್ರೆಸ್‌ ಪಕ್ಷ ಅಪಪ್ರಚಾರ ಮಾಡುತ್ತಿದ್ದು ಯಾರೊಬ್ಬರೂ ಕಿವಿಗೊಡಬೇಡಿ ಎಂದು ಬಿಜೆಪಿ ಮುಖಂಡ ಚಲವಾದಿ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ದಿಬ್ಬೂರಹಳ್ಳಿಯಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆಯಿಂದ ಪೌರತ್ವ ಕಾನೂನು ಕುರಿತು ಆಯೋಜಿಸಿದ್ದ ಜನ ಜಾಗೃತಿಯ ಅಭಿಯಾನದಲ್ಲಿ ಮಾತನಾಡಿದ ಅವರು, ದೇಶದ ಹಿಂದೂಗಳು, ಮುಸ್ಲಿಮರು, ಯಾವುದೇ ಧರ್ಮದವರಿಗೆ ತೊಂದರೆಯಾಗದು ಎಂದರು.

ನೆರೆಯ ಬಾಂಗ್ಲದೇಶ, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ದೌರ್ಜನ್ಯ, ಶೋಷಣೆಗೆ ಒಳಗಾಗಿ 2014ಕ್ಕಿಂತ ಮುಂಚೆ ಭಾರತಕ್ಕೆ ಬಂದಂತಹ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಸಿಎಎ ಉದ್ದೇಶವೇ ಹೊರತು ದೇಶದಲ್ಲಿನ ಯಾರಿಗೂ ತೊಂದರೆ ಕೊಡುವುದಲ್ಲ. ಆದರೆ ಕಾಂಗ್ರೆಸ್‌ ಹಾಗೂ ಇತರೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ ಮುಸ್ಲಿಮರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪೌರತ್ವ ಕಾನೂನು ಬಗ್ಗೆ ಸಹಮತ ಹೊಂದಿತ್ತು. ಇದೀಗ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರನ್ನು ಕೇವಲ ಓಟ್‌ ಬ್ಯಾಂಕ್‌ ಆಗಿ ಮಾಡಿಕೊಂಡಿರುವ ಕಾಂಗ್ರೆಸ್‌ನ ನಿಜವಾದ ಬಣ್ಣ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡ ಸತ್ಯನಾರಾಯಣ ಮಹೇಶ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್‌ ಬಾಯಿರಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಶಿಡ್ಲಘಟ್ಟ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಭಜರಂಗದಳ ಮುಖಂಡ ನರೇಶ್‌ ಕುಮಾರ್‌, ಶಿವಕುಮಾರ್‌, ಕನ್ನಪ್ಪನಹಳ್ಳಿ ಮಲ್ಲೇಶ್‌, ನಲ್ಲೋಜನಹಳ್ಳಿ ನಾಗರಾಜ್‌, ಭಜರಂಗದಳದ ಅಧ್ಯಕ್ಷ ಸದಾನಂದ, ಉಪಾಧ್ಯಕ್ಷ ನಾಗರಾಜು, ವಿಹೆಚ್‌ಪಿ ಮುಖಂಡ ಆರ್‌.ಕಿರಣ್‌ಕುಮಾರ್‌, ವಕೀಲ ರವೀಂದ್ರನಾಥ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-chikkaballapura

Chikkaballapur: ಯೋಗಾ ದಿನಾಚರಣೆಯಲ್ಲಿ ರಾಜಕೀಯ ಕಡು ವೈರಿಗಳ ಸಂಗಮ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Kodi Mutt Seer expressed his opinion regarding actor Darshan’s case

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೋಡಿ ಮಠದ ಶ್ರೀಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.