Code of conduct: ಚುನಾವಣಾ ನೀತಿ ಸಂಹಿತೆ: ರಾಜಕೀಯ ಫ್ಲೆಕ್ಸ್‌, ಬ್ಯಾನರ್‌ ತೆರವು!

Team Udayavani, Mar 17, 2024, 1:26 PM IST

Code of conduct: ಚುನಾವಣಾ ನೀತಿ ಸಂಹಿತೆ; ರಾಜಕೀಯ ಫ್ಲೆಕ್ಸ್‌, ಬ್ಯಾನರ್‌ ತೆರವು!

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಏ.26 ರಂದು ಮುಹೂರ್ತ ನಿಗದಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ತತ್‌ಕ್ಷಣದಿಂದ ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಕಾಂಗ್ರೆಸ್‌ ಸರ್ಕಾರದ ಸಾಧನೆ, ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಿ ರಾರಾಜಿಸುತ್ತಿದ್ದ ಫ್ಲೆಕ್ಸ್‌, ಬ್ಯಾನರ್‌ಗಳ ತೆರವು ಕಾರ್ಯ ಜಿಲ್ಲಾದ್ಯಂತ ಭರದಿಂದ ಸಾಗಿದೆ.

ಅತ್ತ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ ಬೆನ್ನಲೇ ಜಾರಿಗೊಂಡ ಮಾದರಿ ನೀತಿ ಸಂಹಿತೆಯಿಂದ ಎಚ್ಚೆತ್ತ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವ ಕಾಂಗ್ರೆಸ್‌ ಸರ್ಕಾರದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ದೃಶ್ಯಗಳು ಶನಿವಾರ ಸಂಜೆ ಕಂಡು ಬಂದವು.

ಗೋಡೆ ಬರಹಗಳ ತೆರವು: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೇ ಬಂದರೆ ಒಂದು ವರ್ಷ ತುಂಬ ಲಿದ್ದು, ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಿದ್ದ ಪ್ರಚಾರ ಫ‌ಲಕಗಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬೆನ್ನಲೇ ಮುತ್ತಿಗೆ ಹಾಕಿದ್ದ ಸ್ಥಳೀಯ ಸಂಸ್ಥೆಗಳ ನೌಕರರು, ಹಲವು ತಿಂಗಳಿಂದ ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ರಾರಾಜಿಸುತ್ತಿದ್ದ ಪ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವು ಗೊಳಿ ಸಿ ದರೆ ಗೋಡೆ ಬರಹಗಳನ್ನು ಅಳಿಸಿ ಹಾಕಿದರು.

ಇನ್ನೂ ಜಿಲ್ಲಾ ಕೇಂದ್ರದ ತಾಪಂ ಕಚೇರಿ ಆವರಣ, ಜಿಲ್ಲಾ ನ್ಯಾಯಾಲಯ ಆವರಣದ ಸಮೀಪ, ಉಪ ವಿಭಾಗಾಧಿಕಾರಿಗಳ ಕಚೇರಿ, ಟಿ.ಚೆನ್ನಯ್ಯ ಪಾರ್ಕ್‌, ಜಿಲ್ಲಾಧಿಕಾರಿಗಳ ಕಚೇರಿ ಅಂಗಳದಲ್ಲಿ ಹಾಗೂ ಜಿಲ್ಲೆಯ ತಾಪಂ, ಗ್ರಾಪಂಗಳ ಆವರಣದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಹಾಕಲಾಗಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜಾಹೀರಾತು ಪ್ರಚಾರ ಫ‌ಲಕಗಳಲ್ಲಿ ರಾರಾಜಿಸುತ್ತಿದ್ದ ಮುಖ್ಯಮಂತ್ರಿಗಳ, ವಿವಿಧ ಇಲಾಖೆಗಳ ಸಚಿವರ ಭಾವಚಿತ್ರ ಸಮೇತ ಅಳವಡಿಸಿದ್ದ ಇಲಾಖೆಯ ಸಾಧನೆಗಳ

ಪ್ರಚಾರ ಫ‌ಲಕಗಳನ್ನು ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ತೆರವುಗೊಳಿಸಿ ಮಾದರಿ ನೀತಿ ಸಂಹಿತೆಯ ಬಿಸಿ ಮುಟ್ಟಿಸಿ ಸಿಬ್ಬಂದಿ ಗಮನ ಸೆಳೆದರು.

ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೊಂಡ 24 ಗಂಟೆಯಲ್ಲಿ ಸರ್ಕಾರದ ಪ್ರಚಾರ ಫ‌ಲಕಗಳು, ಫ್ಲೆಕ್ಸ್‌Õ, ಬ್ಯಾನರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದೆ. ಸರ್ಕಾರದ ವೈಬ್‌ಸೈಟ್‌ಗಳಲ್ಲಿ ಕೂಡ ಚುನಾಯಿತ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಲಾಗುವುದು. ರಾಜಕೀಯ ಪಕ್ಷಗಳ ಪರ ಇರುವ ಗೋಡೆ ಬರಹವನ್ನು ಸಂಪೂರ್ಣವಾಗಿ ಅಳಿಸಲಾಗುವುದು.-ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ.  

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

4-udupi

Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

chiಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

ಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

manchenahalli

Manchenahalli; ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

3-gudibande

Gudibanda: ಕಾರು ಅಪಘಾತ: ಮೂವರು ಬೆಸ್ಕಾಂ ಸಿಬ್ಬಂದಿಗಳು ಸಾವು

MUST WATCH

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

ಹೊಸ ಸೇರ್ಪಡೆ

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

4-udupi

Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

3-

Throat Cancer: ತಂಬಾಕು ಮುಕ್ತ ಜೀವನ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.