ಆಸ್ಪತ್ರೆ ಕಾಂಪೌಂಡ್‌ ಕಾಮಗಾರಿ ಸ್ಥಗಿತ: ರೋಗಿಗಳು ಪರದಾಟ


Team Udayavani, May 4, 2019, 3:00 AM IST

aspatre

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಅತ್ಯಧಿಕ ಹೆರಿಗೆಗಳು ನಡೆದ ಆಸ್ಪತ್ರೆವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭದ್ರತೆ ಒದಗಿಸಲು ಆರಂಭಿಸಿದ ಕಾಂಪೌಂಡ್‌ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಚಿಕಿತ್ಸೆಗೆಂದು ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು ಪರದಾಡುವಂತಾಗಿದೆ.

ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿ.ಮುನಿಯಪ್ಪ ತಾಲೂಕಿನ ಜಂಗಮಕೋಟೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರಲ್ಲದೆ 30 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ಕಾಂಪೌಂಡ್‌ ಕಾಮಗಾರಿಗೆ ಚಾಲನೆ ನೀಡಿದ್ದರು.

ಅಪಾಯಕ್ಕೆ ಆಹ್ವಾನ: ಕಾಮಗಾರಿಯ ಗುತ್ತಿಗೆ ಪಡೆದ ಲೇಪಾಕ್ಷಿ ಕನ್ಸಟ್ರಕ್ಷನ್‌ ಕಂಪನಿಯ ಗುತ್ತಿಗೆದಾರರು ಕೇವಲ ಆಸ್ಪತ್ರೆಯ ಮುಂದೆ ಗುಣಿಗಳು ಅಗೆದು ಮೌನಕ್ಕೆ ಶರಣಾಗಿದ್ದು, ರೋಗಿಗಳು ಮತ್ತು ಸಂಬಂಧಿಕರು ಆಸ್ಪತ್ರೆಗೆ ಹೋಗಿ ಬರಲು ಹರಸಾಹಸ ಪಡುವಂತಾಗಿದೆ. ಆಸ್ಪತ್ರೆಗೆ ತುರ್ತು ವಾಹನ ಮಾತ್ರ ಸಂಚರಿಸಲು ಜಾಗ ಬಿಟ್ಟು ಅದರ ಸುತ್ತಲು ಗುಣಿಗಳು ಅಗೆದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಯಾಮಾರಿದರೆ ಗುಣಿಯೊಳಗೆ: ಹೋಬಳಿ ಕೇಂದ್ರವಾಗಿರುವ ಜಂಗಮಕೋಟೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಈ ಆಸ್ಪತ್ರೆ ಆಶ್ರಯಿಸಿಕೊಂಡು ಬರುತ್ತಾರೆ. ಆದರೆ ಆಸ್ಪತ್ರೆ ಸುತ್ತಲೂ ಗುಣಿಗಳು ಅಗೆದಿರುವುದರಿಂದ ವಯಸ್ಸಾದವರು ಮತ್ತು ಮಹಿಳೆಯರು ಗುಣಿ ದಾಟಿ ಆಸ್ಪತ್ರಗೆ ಬರುವಂತಾಗಿದೆ. ಸ್ವಲ್ಪ ಯಾಮಾರಿದರೆ ಗುಣಿಯೊಳಗೆ ಬೀಳುವುದು ನಿಶ್ಚಿತ.

ರೋಗಿಗಳಿಗೆ ಇನ್ಫೆಕ್ಷನ್‌: ಈ ಕುರಿತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಂಬಿಕಾ ಅವರನ್ನು ಸಂಪರ್ಕಿಸಿದಾಗ ಆಸ್ಪತ್ರೆಯ ಕಾಂಪೌಂಡ್‌ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ. ಕಾಮಗಾರಿಗಳ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು, ಸಂಬಂಧಿಕರಿಗೆ ತೊಂದರೆಯಾಗಿದೆ.

ಜೊತೆಗೆ ಧೂಳು ಆಸ್ಪತ್ರೆಯೊಳಗೆ ಸೇರುತ್ತಿರುವುದರಿಂದ ರೋಗಿಗಳಿಗೆ ಇನ್ಫೆಕ್ಷನ್‌ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಲೋಕಸಭಾ ಚುನಾವಣೆ ವೇಳೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಧಾನಗತಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ನೀಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತಗಮನ ಹರಿಸಿ ಸ್ಥಗಿತಗೊಂಡಿರುವ ಆಸ್ಪತ್ರೆಯ ಕಾಂಪೌಂಡ್‌ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಟಾಪ್ ನ್ಯೂಸ್

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

11-question

Question: ಎಲ್ಲರಲ್ಲೂ ಬೆಳೆಯಲಿ ಪ್ರಶ್ನಿಸುವ ಮನೋಭಾವ…

10-mother-tongue

Mother Tongue: ಮಾತೃಭಾಷೆಯ ಮೇಲೆ ಇರಲಿ ಗೌರವ

ಹೆಣ್ಣು ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು… ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮಹಿಳೆ ಮೃತ್ಯು.. ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pradeep-eshwar

Chikkaballapur: ಶಾಸಕ ಪ್ರದೀಪ್ ಈಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

3-chikkaballapura

Chikkaballapur: ಯೋಗಾ ದಿನಾಚರಣೆಯಲ್ಲಿ ರಾಜಕೀಯ ಕಡು ವೈರಿಗಳ ಸಂಗಮ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Kodi Mutt Seer expressed his opinion regarding actor Darshan’s case

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೋಡಿ ಮಠದ ಶ್ರೀಗಳು

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

11-question

Question: ಎಲ್ಲರಲ್ಲೂ ಬೆಳೆಯಲಿ ಪ್ರಶ್ನಿಸುವ ಮನೋಭಾವ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.