ಬ್ಯಾಂಕಾಕ್‌ನಿಂದ ಹಿಂದಿರುಗಿದ್ದ ವ್ಯಾಪಾರಿಗೆ ತಪಾಸಣೆ


Team Udayavani, Mar 16, 2020, 3:00 AM IST

bankok-

ಚಿಕ್ಕಬಳ್ಳಾಪುರ: ಬ್ಯಾಂಕಾಕ್‌ನಿಂದ ಹಿಂದಿರುಗಿ ಬಂದಿದ್ದ ವ್ಯಕ್ತಿಯೋರ್ವ ಕೊರೊನಾ ವೈರಸ್‌ ಹರಡಿರುವ ಸಾಧ್ಯತೆ ಇರಬಹುದೆಂದು ಭೀತಿಗೊಂಡು ನಗರದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೊರನಾ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಜಮ್ಸ್‌ ಸ್ಟೋನ್‌ ವ್ಯಾಪಾರಿ ಬ್ಯಾಂಕಾಕ್‌ಗೆ ತೆರಳಿ ಕಳೆದ ಮಾ.7 ರಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸ್ವಗ್ರಾಮ ಅಲ್ಲೀಪುರಕ್ಕೆ ಹಿಂದಿರುಗಿದ್ದಾನೆ. ಈ ವೇಳೆ ಆತನಲ್ಲಿ ಶಂಕಿತ ಕೊರಾನ ವೈರಸ್‌ ಲಕ್ಷಣಗಳು ಕಾಣಿಸಿಕೊಂಡು ಆರೋಗ್ಯದಲ್ಲಿ ತುಸು ಏರುಪೇರು ಕಂಡಿದೆ. ಭಯಭೀತನಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾನೆ.

ತಜ್ಞ ವೈದ್ಯರ ಪರಿಶೀಲನೆ: ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮುಂದಾಳತ್ವದಲ್ಲಿ ಜಿಲ್ಲಾಸ್ಪತ್ರೆಯ ನುರಿತ ವೈದ್ಯರು ಅಲ್ಲೀಪುರದ ವ್ಯಾಪಾರಿಯ ಆರೋಗ್ಯ ತಪಾಸಣೆ ನಡೆಸಿದ್ದು, ಕೊರೊನಾ ವೈರಸ್‌ ಲಕ್ಷಣ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಮನೆಗೆ ವಾಪಸು ಕಳಿಸಿದ್ದಾರೆ. ಜಮ್ಸ್‌ ಸ್ಟೋನ್‌ ವ್ಯಾಪಾರಿಯಾಗಿರುವ ಆತ ಸಾಕಷ್ಟು ಬಾರಿ ಬ್ಯಾಂಕಾಕ್‌ಗೆ ಹೋಗಿ ವಾಪಸ್‌ ಆಗಿದ್ದನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ತಿಳಿಸಿದರು.

ಸಾರ್ವಜನಿಕ ವಲಯದಲ್ಲಿ ಆತಂಕ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರದ ಜಮ್ಸ್‌ ವ್ಯಾಪಾರಿಗೆ ಶಂಕಿತ ಕೊರನಾ ವೈರಸ್‌ ಲಕ್ಷಣ ಕಾಣಿಸಿಕೊಂಡಿದೆ ಎಂದು ಸ್ವಯಂ ಆತನೆ ಜಿಲ್ಲಾಸ್ಪತ್ರೆಗೆ ಬಂದು ವೈದ್ಯರ ತಪಾಸಣೆಗೆ ಒಳಗಾದ ವಿಷಯ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೆಲಕಾಲ ಆತಂಕ ಮೂಡಿಸಿದರೂ ವೈದ್ಯರ ತಂಡ ವ್ಯಾಪಾರಿಯಲ್ಲಿ ಕೊರೊನಾ ವೈರಸ್‌ ಲಕ್ಷಣ ಇಲ್ಲ ಎಂದು ದೃಢಪಡಿಸಿದ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ನೆಮ್ಮದಿಯ ನಿಟ್ಟಿಸಿರು ಬಿಟ್ಟರು.

ಅಲ್ಲೀಪುರದಲ್ಲಿ 46 ಮಂದಿ ಮೇಲೆ ನಿಗಾ: ಜಮ್ಸ್‌ ಸ್ಟೋನ್‌ ವ್ಯಾಪಾರಿಗೆ ಕೊರೊನಾ ಲಕ್ಷ್ಮಣಗಳು ಇಲ್ಲದೇ ಇರುವುದನ್ನು ವೈದ್ಯರ ತಂಡ ದೃಢಪಡಿಸಿದ್ದರೂ ವಿದೇಶಕ್ಕೆ ಹೋಗಿ ಬಂದಿರುವುದರಿಂದ ವ್ಯಾಪಾರಿ ಜೊತೆಗೆ ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಜೊತೆಗೆ ವಿದೇಶಗಳಿಂದ ಬಂದಿರುವ ಒಟ್ಟು 46 ಮಂದಿ ಮೇಲೆ ಜಿಲ್ಲೆಯ ವೈದ್ಯರ ತಂಡ ನಿಗಾ ವಹಿಸಿ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಉದಯವಾಣಿಗೆ ತಿಳಿಸಿದರು.

ಹಲವು ದಿನಗಳ ಹಿಂದೆ ಬ್ಯಾಂಕಾಕ್‌ನಿಂದ ಅಲ್ಲೀಪುರಕ್ಕೆ ವಾಪಸ್‌ ಬಂದಿರುವ ಜಮ್ಸ್‌ ಸ್ಟೋನ್‌ ವ್ಯಾಪಾರಿ ಶಂಕಿತ ಕೊರೊನಾ ವೈರಸ್‌ ಲಕ್ಷ್ಮಣ ಇದೆಯೆಂದು ಭಯ ಭೀತನಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ. ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ರೀತಿಯ ಲಕ್ಷಣಗಳು ಕಾಣಸಿಲ್ಲ. ಜಿಲ್ಲೆಯ ಒಟ್ಟು 46 ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
-ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gyhghgf

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಬೆಳೆ ನಾಶ

ಲಕ್ಷಾಂತರ ರೂ. ಬೆಳೆ ನಾಶವಾದ್ರೂ ತಿರುಗಿ ನೋಡಿಲ್ಲ..!

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

MUST WATCH

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಹೊಸ ಸೇರ್ಪಡೆ

1-masti

ಹೊಸಬೀಡು ಗ್ರಾಮದಲ್ಲಿ ಮಾಸ್ತಿಗಲ್ಲು ಪತ್ತೆ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

1-shi

ತೀರ್ಥಹಳ್ಳಿ: ಹಿಂದೂಪರ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

1-bra

ಬ್ರಾಹ್ಮಣ ಸಂಘದ ಅಭಿವೃದ್ಧಿಗೆ ಮುಂದಾಗಿ

1-cm-1

ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ-ಸ್ಪರ್ಧೆ: ಕಲಾಸಕ್ತರ ಗಮನ ಸೆಳೆದ ಕಲಾ-ಚಿತ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.