ಬಡ ದಲಿತ ಕುಟುಂಬಕ್ಕೆ ನಿವೇಶನದ ಭರವಸೆ


Team Udayavani, Sep 24, 2020, 4:42 PM IST

CB-TDY-1

ಗಂಭೀರನಹಳ್ಳಿಗೆ ತಾಪಂ ಇಒ ಶಿವಕುಮಾರ್‌, ಪಿಡಿಒ ನೈಯನಾ ನಿಖತ್‌ ಆರಾ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಆಹಾರ ಕಿಟ್‌, ಮಾಸ್ಕ್ ವಿತರಿಸಿದರು.

ಚಿಕ್ಕಬಳ್ಳಾಪುರ: ಬಡತನದಲ್ಲಿ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳ ದಯನೀಯ ಸ್ಥಿತಿ ಕುರಿತು “ಕನಿಷ್ಠ ಸೌಲಭ್ಯಗಳಿಂದ ವಂಚಿತ ಕುಟುಂಬ’ ಶಿಥಿಲವಾಗಿರುವ ಮನೆಯಲ್ಲಿ ವಾಸ- ಬೇಕಿದೆ ಸರ್ಕಾರದ ನೆರವು ಶೀರ್ಷಿಕೆಯಲ್ಲಿ “ಉದಯವಾಣಿ’ಯಲ್ಲಿ ಪ್ರಕಟವಾದ ವರದಿಗೆ ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್‌ ಸ್ಪಂದಿಸಿದ್ದಾರೆ.

ಜಿಪಂ ಸಿಇಒ ಸೂಚನೆ ಮೇರೆಗೆಶಿಡ್ಲಘಟ್ಟ ತಾಪಂ ಇಒಶಿವಕುಮಾರ್‌ ಮತ್ತು ಕುಂಬಿಗಾನಹಳ್ಳಿ ಗ್ರಾಪಂ ಪಿಡಿಒ ನೈಯನಾ ನಿಖತ್‌ ಆರಾ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮೊಹ್ಮದ್‌ ಉಸ್ಮಾನ್‌ ಅವರು ಶಿಡ್ಲಘಟ್ಟ ತಾಲೂಕಿನ ಗಂಭೀರನಹಳ್ಳಿಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ದಲಿತ ಕುಟುಂಬಕ್ಕೆ ಒಂದು ನಿವೇಶನ ಮಂಜೂರು ಮಾಡುವುದಾಗಿ ತಾಪಂ ಇಓ ಶಿವಕುಮಾರ್‌ ಭರವಸೆ ನೀಡಿದ್ದಾರೆ. ಉದಯವಾಣಿ ಪ್ರಕಟವಾದ ವರದಿ ಜಿಪಂ ಸಿಇಒಅವರ ಗಮನಕ್ಕೆಬಂದಿತ್ತು. ಕೊಟ್ಟ ಮಾತಿನಂತೆ ತಾಪಂ ಇಒ ಮತ್ತು ಗ್ರಾಪಂ ಪಿಡಿಒ ಮತ್ತು ಮಕ್ಕಳ ರಕ್ಷಣಾಧಿಕಾರಿಗಳನ್ನು ಗಂಭೀರನಹಳ್ಳಿಗೆ ಕಳುಹಿಸಿ ಬಡ ಕುಟುಂಬಕ್ಕೆ ನೆರವು ಕಲ್ಪಿಸಲು ಜಿಪಂ ಸಿಇಒ ಮುಂದಾಗಿದ್ದಾರೆ.

ಜೊತೆಗೆ ಕುಟುಂಬ ಸದಸ್ಯರಿಗೆ ಬಿಪಿಎಲ್‌ ಪಡಿತರ ಚೀಟಿ ಒದಗಿಸಿ ಎಲ್ಲರಿಗೂ ಆಧಾರ್‌ ಕಾರ್ಡ್‌ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ತಾತ್ಕಾಲಿಕ ವ್ಯವಸ್ಥೆ: ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಯಾರು ವಾಸ ಮಾಡಬಾರದೆಂದು ತಾಪಂ ಇಒ ಶಿವಕು ಮಾರ್‌ ಸೂಚನೆ ನೀಡಿದ್ದು, ಕುಟುಂಬ ಸದಸ್ಯರಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಲು ಅಥವಾ ಸಮೀಪದಲ್ಲಿರುವ ಯಾವುದಾದರೂ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆಹಾರ ವಿತರಣೆ: ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಅಜ್ಜಿಯ ಆಶ್ರಯದಲ್ಲಿ ಬದುಕುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ದಯಾನೀಯ ಸ್ಥಿತಿ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ನೆರವು ಬೇಕಿದೆ ಎಂದು ಉದಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.

ತಾಪಂ ಇಒ ಶಿವಕುಮಾರ್‌, ಪಿಡಿಒ ನಯನಾ ನಿಖತ್‌ ಆರಾ ಕುಟುಂಬ ಸದಸ್ಯರಿಗೆ ಆಹಾರ ಕಿಟ್‌, ಸ್ಯಾನಿಟೈಸರ್‌ ಮತ್ತು ಮಾಸ್ಕ್ ವಿತರಿಸಿದ್ದಾರೆ. ಜಿಪಂ ಸಿಇಒ ಮತ್ತು ತಾಪಂ ಇಒ, ಗ್ರಾಪಂ ಪಿಡಿಒ, ಮಕ್ಕಳ ಸಂರಕ್ಷಣಾಧಿಕಾರಿ ಸೇವಾ ಕಾರ್ಯವನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಟಾಪ್ ನ್ಯೂಸ್

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

chiಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

ಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

manchenahalli

Manchenahalli; ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

3-gudibande

Gudibanda: ಕಾರು ಅಪಘಾತ: ಮೂವರು ಬೆಸ್ಕಾಂ ಸಿಬ್ಬಂದಿಗಳು ಸಾವು

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.