ಪ್ರವಾಸಿಗರ ಆಕರ್ಷಣೆಯ ಗುಡಿಬಂಡೆ ತಾಣಗಳು

ಗುಡಿಬಂಡೆಯಲ್ಲಿ ಹಲವು ತಾಣಗಳು , 90ರಷ್ಟು ತುಂಬಿದ ಅಮಾನಿಬೈರಸಾಗರಕೆರೆ

Team Udayavani, Oct 5, 2020, 4:05 PM IST

ಪ್ರವಾಸಿಗರ ಆಕರ್ಷಣೆಯ ಗುಡಿಬಂಡೆ ತಾಣಗಳು

ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟದಿಂದ ಸೆರೆ ಹಿಡಿಯಲಾದ ಅಮಾನಿಬೈರಸಾಗರದಕೆರೆ ದೃಶ್ಯ.

ಗುಡಿಬಂಡೆ: ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಗುಡಿಬಂಡೆ ಅಮಾನಿಬೈರಸಾಗರ ಕೆರೆಯು ಇತ್ತೀಚಿಗೆ ಬಿದ್ದ ಮಳೆಯಿಂದಸುಮಾರು 90 ಭಾಗ ತುಂಬಿದ್ದು, ಕೆರೆ ತುಂಬಿ ಹರಿಯಲು ಕೇವಲ 4 ಅಡಿಗಳು ಮಾತ್ರ ಬಾಕಿಯಿದ್ದು, ಕೆರೆ ನೋಡಲು ರಾಜ್ಯದ ಹಲವು ಜಿಲ್ಲೆಗಳಿಂದ ಪ್ರವಾಸಿಗಳು ಬರುತ್ತಿದ್ದಾರೆ.

ವಿಶಿಷ್ಟ ಶೈಲಿ: ಗುಡಿಬಂಡೆ ಭೈರಸಾಗರ ಕೆರೆ ಭಾರತದ ಭೂಪಟ ಹೋಲುವ ರೀತಿ ಹಾಗೂ ಸಂಜೆ ಸೂರ್ಯಸ್ತದ ದೃಶ್ಯ ನೋಡಲು ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಸುತ್ತಲೂ ಹಸಿರ ಮಧ್ಯೆ ಇರುವ ವಿಶಾಲವಾದ ನೀರಿನ ಸಾಗರ, ಏರಿ ಮೇಲೆ ಸಾಗಿದರೆ ಸಾಗರದಂತೆಕಾಣುವಕೆರೆ ಎಂಥವರಿಗೂ ಮೈಜುಮ್ಮೆನ್ನುವ ಅನುಭವ ಆಗುತ್ತದೆ. ಅಮಾನಿಬೈ ರಸಾಗರ ಕೆರೆ ಎತ್ತರಪ್ರ ದೇಶದಿಂದ ನೋಡಿದರೆ ಭಾರತದ ಭೂಪಟದಂತೆ ಗೋಚರಿಸುವುದು ಬಹು ವಿಶಿಷ್ಟ ಶೈಲಿಯಲ್ಲಿ ಕೆರೆ ಕಟ್ಟೆಯನ್ನು ನಿರ್ಮಾಣ ಮಾಡಿರುವುದಕ್ಕೆ ಸಾಕ್ಷಿಯಾಗಿದೆ.

400 ವರ್ಷ ಇತಿಹಾಸ: ಸುಮಾರು 400 ವರ್ಷಗಳ ಹಿಂದೆ ಈ ಪ್ರದೇಶವನ್ನಾಳಿದ ಬೈರೇಗೌಡ ಸಾಮಾಜಿಕ ಹಿತ ಬಯಸುತ್ತಿದ್ದ ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಪಾಳೇಗಾರ ಎಂಬುದಕ್ಕೆ ಆತ ನಿರ್ಮಿಸಿರುವ ಕೋಟೆ ಕೊತ್ತಲ, ಕೆರೆ ಸೇರಿದಂತೆ ಹಲವಾರುಸ್ಮಾರಕಗಳು ಇಲ್ಲಿ ಕಂಡುಬರುತ್ತವೆ. ಶನಿವಾರ ಮತ್ತು ಭಾನುವಾರ ನೂರಾರು ಪ್ರವಾಸಿಗಳು ಸುರಸದ್ಮಗಿರಿ ಬೆಟ್ಟವನ್ನು ಹತ್ತಿ ವೀಕ್ಷಣೆ ಮಾಡುತ್ತಾರೆ.

ರಜೆ ದಿನಗಳಲ್ಲಿ ಪ್ರವಾಸಿಗರ ದಂಡು: ಗುಡಿಬಂಡೆ ಅಮಾನಿಬೈರ ಸಾಗರ ಮತ್ತು ಸುರಸದ್ಮಗಿರಿ‌ ಬೆಟ್ಟಕ್ಕೆ ರಜೆ ದಿನಗಳಲ್ಲಿ ಚಾರಣಕ್ಕೆ ಆಗಮಿಸುವವರು, ಸುತ್ತಮುತ್ತ ಪಂಚಗಿರಿಗಳನ್ನು ಸುತ್ತಲು ಬರುವ ಪ್ರವಾಸಿಗರು ಬೈರಸಾಗರ ಕೆರೆಗೂ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಅನುಭವಿಸುತ್ತಿದ್ದಾರೆ. ಹೆಚ್ಚಾಗಿ ಇಲ್ಲಿಗೆ ಬೆಂಗಳೂರು ನಗರ, ಅನಂತಪುರ, ತುಮಕೂರು ಸೇರಿದಂತೆ ಹಲವೆಡೆಯಿಂದಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಇತ್ತೀಚೆಗೆ ಗುಡಿಬಂಡೆ ಪಟ್ಟಣದ ಯುವಕರು ಮತ್ತು ಈಗಾಗಲೇ ಪ್ರಕೃತಿ ಸೊಬಗನ್ನು ಆನಂದಿಸಿರುವ ಪ್ರವಾಸಿಗರು, ಡ್ರೋಣ್‌ ಕ್ಯಾಮೆರಾದ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಬಳಿಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಬರುತ್ತಿದ್ದಾರೆ. ಪ್ರವಾಸಿ ತಾಣಗಳನ್ನಾಗಿ ಮಾಡುವಲ್ಲಿ ವಿಫಲ:ಪ್ರತಿ ದಿನ ಇಲ್ಲಿನ ಪ್ರವಾಸಿ ತಾಣಗಳನ್ನುನೋಡಲು ನೂರಾರು ಪ್ರವಾಸಿಗರು ಇಲ್ಲಿಗೆಬರುತ್ತಾರೆ.ಆದರೆಇದನ್ನುಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರಿಗೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಸ್ಥಳಿಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

ಮೂಲಸೌಕರ್ಯ ಕಲ್ಪಿಸಿದರೆ ಉತ್ತಮ :  ಬೆಂಗಳೂರಿಗೆ ಹತ್ತಿರದಲ್ಲಿ ಇರುವ ಗುಡಿಬಂಡೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ ಎಂದು ನಮಗೆ ಗೊತ್ತೆ ಇರಲಿಲ್ಲ.ಸಾಮಾಜಿಕಜಾಲತಾಣದಲ್ಲಿಅಮಾನಿಬೈರಸಾಗರ ಕೆರೆಯ ಮತ್ತು ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಫೋಟೋ ಮತ್ತು ವಿಡಿಯೋ ಹಾಕಿದ್ದರು. ಅದನ್ನು ನೋಡಿದ ಬಳಿಕ ನೋಡಲೇ ಬೇಕೆನಿಸಿ ನಾನು ಮತ್ತು ಕುಟುಂಬಸ್ಥರು ಆಗಮಿಸಿ ಸಂತೋಷದಿಂದ ಕಳೆದಿದ್ದೇವೆ. ಆದರೆ ಕೆಲ ಮೂಲ ಸೌಕರ್ಯಗಳ ಕೊರತೆಯಿದ್ದು, ಸರಿಪಡಿಸಿದರೆ ಉತ್ತಮವಾಗಿರುತ್ತದೆ ಎಂದು ಬೆಂಗಳೂರು ನಿವಾಸಿ ಸಾಗರ್‌ ಎಂಬುವವರು ಪ್ರತಿಕ್ರಿಯಿಸಿದರು.

ಬೋಟಿಂಗ್‌ ಮಾಡುವುದಾಗಿ ಹೇಳಿ 5 ವರ್ಷ ಕಳೆದವು :  ಗುಡಿಬಂಡೆ ಅಮಾನಿಬೈರಸಾಗರ ಕೆರೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸುತ್ತೇವೆಂದು ಹೇಳಿ ಸುಮಾರು5 ವರ್ಷಗಳೇ ಕಳೆದಿವೆ. ಆದರೆ ಇಲ್ಲಿಯವರೆಗೂ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

ಪೊಲೀಸ್‌ ಬಂದೋಬಸ್ತ್ :  ಕೆರೆಗೆ ಹೆಚ್ಚು ನೀರು ಬಂದು ಇನ್ನೇನು ಹರಿಯುವ ಮಟ್ಟದಲ್ಲಿರುವುದರಿಂದ ಇಲ್ಲಿಗೆ ಅನೇಕ ಪ್ರವಾಸಿಗರು ಮತ್ತು ಮಕ್ಕಳು ಬರುತ್ತಾರೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅಮಾನಿಬೈರಸಾಗರ ಕೆರೆ ಕಟ್ಟೆಗೆ ಪೊಲೀಸರನ್ನು ನಿಯೋಜನ ಮಾಡಿ ಸೂಕ್ತ ಬಂದೋಬಸ್ತ್ ನೀಡಲಾಗುತ್ತಿದೆ.

 

ವೆಂಕಟೇಶ್‌ ಎನ್‌.ವಿ

ಟಾಪ್ ನ್ಯೂಸ್

Kuwait ಅಗ್ನಿ ದುರಂತ: ತಾಯ್ನಾಡಿನತ್ತ ಹೊರಟ 45 ಭಾರತೀಯರ ಮೃತದೇಹ ಹೊತ್ತ ವಿಶೇಷ ವಿಮಾನ

Kuwait ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತು ಕೊಚ್ಚಿಗೆ ಹೊರಟ ವಿಶೇಷ ವಿಮಾನ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

manchenahalli

Manchenahalli; ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

3-gudibande

Gudibanda: ಕಾರು ಅಪಘಾತ: ಮೂವರು ಬೆಸ್ಕಾಂ ಸಿಬ್ಬಂದಿಗಳು ಸಾವು

Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್‌

Pradeep Eshwar: ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್‌

ನಂದಿಗಿರಿಧಾಮ ಪ್ರವೇಶ ಸಮಯ 1 ಗಂಟೆ ಕಡಿತ

ವಿಶ್ವ ವಿಖ್ಯಾತ ನಂದಿಗಿರಿಧಾಮ ಪ್ರವೇಶ ಸಮಯ 1 ಗಂಟೆ ಕಡಿತ

Pocso Case: ಮುಖ್ಯ ಶಿಕ್ಷಕನಿಂದ ಅತ್ಯಾಚಾರ:13 ವರ್ಷದ ವಿದ್ಯಾರ್ಥಿನಿ ಗರ್ಭಿಣಿ

Pocso Case: ಮುಖ್ಯ ಶಿಕ್ಷಕನಿಂದ ಅತ್ಯಾಚಾರ:13 ವರ್ಷದ ವಿದ್ಯಾರ್ಥಿನಿ ಗರ್ಭಿಣಿ

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

Kuwait ಅಗ್ನಿ ದುರಂತ: ತಾಯ್ನಾಡಿನತ್ತ ಹೊರಟ 45 ಭಾರತೀಯರ ಮೃತದೇಹ ಹೊತ್ತ ವಿಶೇಷ ವಿಮಾನ

Kuwait ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತು ಕೊಚ್ಚಿಗೆ ಹೊರಟ ವಿಶೇಷ ವಿಮಾನ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.