ಮತ್ತೆ ಆಶ್ಲೇಷಾ ಆರ್ಭಟ: ಜನಜೀವನ ಅಸ್ತವ್ಯಸ್ತ


Team Udayavani, Aug 17, 2018, 5:06 PM IST

cta.jpg

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಶ್ಲೇಷಾ ಮಳೆ ಪುನಃ ಆರ್ಭಟಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗವಾದ ಶೃಂಗೇರಿ, ಮೂಡಿಗೆರೆ, ಕೊಪ್ಪ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ನದಿಯ ನೀರು ಜಮೀನುಗಳಿಗೆ ನುಗ್ಗಿದೆ.

ಪ್ರವಾಸಿಗರಿಗೆ ನಿರ್ಬಂಧ: ಗುಡ್ಡ ಕುಸಿಯುತ್ತಿರುವುದರಿಂದ ಅಪಾಯದ ಮುನ್ಸೂಚನೆ ಅರಿತು ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧಿಂಸಲಾಗಿದೆ.

ಶೃಂಗೇರಿಯ ಗಾಂಧಿ ಮೈದಾನ ನೀರಿನಿಂದ ಆವೃತವಾಗಿದ್ದು, ಗುಡ್ಡೇತೋಟದಲ್ಲಿ 4 ಕಡೆ ರಸ್ತೆ ಬಿರುಕು ಬಿಟ್ಟಿದೆ. ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ 15ನೇ ಬಾರಿಗೆ ತುಂಬಿದೆ. ನಂತರ ಮಳೆ ಕಡಿಮೆಯಾಗಿದ್ದರಿಂದ ಸಂಚಾರಕ್ಕೆ  ರೆದುಕೊಂಡಿದೆ.ಶೃಂಗೇರಿ ರಾಷ್ಟ್ರೀಯ ಹೆದ್ದಾರಿ, ತನಿಗೋಡು ರಸ್ತೆಗೂ ನೀರು ನುಗ್ಗಿದೆ.

ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಅಕ್ಕಪಕ್ಕದ ತೋಟಗಳಿಗೆ ನೀರು ನುಗ್ಗಿದೆ. ಜೀವನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ, ಮಲೆನಾಡು ಭಾಗದಲ್ಲಿ ಬಿಟ್ಟು,ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿವೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ.

ಚಿಕ್ಕಮಗಳೂರು ತಾಲೂಕಿನ ಕೋಟೆವೂರಿನ ಉದ್ದಮ್ಮ, ಹೊಸಳ್ಳಿಪೇಟೆಯ ಸರಸ್ವತಿ ಅವರ ಮನೆಗಳು ಭಾಗಶಃ, ಸವಿತಾ ಅವರಿಗೆ ಸೇರಿದ ಮನೆ ಶೇ.100 ಹಾನಿಯಾಗಿದೆ. ಸೀಗೋಡಿನ ಯಶೋಧ, ನರಸಿಂಹರಾಜಪುರ ಪಟ್ಟಣದ ಮಂಜುಳಾ ಅವರ ಮನೆಗಳಿಗೂ ಹಾನಿಯಾಗಿದೆ. 

ಶೃಂಗೇರಿ: ಒಂದೇ ವಾರದಲ್ಲಿ ಮೂರನೇ ಬಾರಿ ಪ್ರವಾಹ ಶೃಂಗೇರಿ: ಆಶ್ಲೇಷಾ ಮಳೆಯಬ್ಬರ ಮುಂದುವರಿದಿದ್ದು,
ಒಂದೇ ವಾರದಲ್ಲಿ ಮೂರನೇ ಬಾರಿಗೆ ತುಂಗೆಯಲ್ಲಿ ಪ್ರವಾಹ ಉಂಟಾಗಿದೆ. ಗುರುವಾರ ದಿನವಿಡೀ ಮಳೆ ಸುರಿದಿದ್ದು, ನದಿ ನೀರಿನ ಮಟ್ಟ ಏರಿಕೆಯಾಗತೊಡಗಿದೆ. ಶಾಲೆ, ಕಾಲೇಜುಗಳಿಗೆ ಶುಕ್ರವಾರವೂ ರಜೆ ನೀಡಲಾಗಿದೆ. ಪ್ರವಾಹದ ನೀರು ಪಟ್ಟಣದ ಬೈಪಾಸ್‌ ರಸ್ತೆ ಹಾಗೂ ಕೆವಿಆರ್‌ ರಸ್ತೆಗೆ ಬಂದಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಾವಡಿ ಸಮೀಪದ ಕಾರ್ಮಿಕರ ಶೆಡ್‌ಗಳಿಗೆ ನೀರು ನುಗ್ಗಿದೆ. ತೋಟ,ಗದ್ದೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಮರ್ಕಲ್‌ ಗ್ರಾಪಂನ ಕೋಗೋಡು ಗ್ರಾಮದ
ವಡಗೆರೆಮನೆಯ ಲಕ್ಷಿ  ನಾರಾಯಣ ಅವರ ಮನೆಗೆ ದರೆ ಕುಸಿದು ಮನೆ ಸಂಪೂರ್ಣ ಜಖಂಗೊಂಡಿದೆ. ಯಡದಾಳು
ಗ್ರಾಮದ ಕೊಠಾರಿಕೊಪ್ಪ ಹಿರಿಯಣ್ಣಯ್ಯರವರ ಮನೆ, ಕಾವಡಿ ಗ್ರಾಮದ ಹೆಗ್ಗದ್ದೆ ಗೋಪಾಲಕೃಷ್ಣಭಟ್‌ ಮನೆ, ಬೇಗಾನೆ ಹಕೀಂ ಸಾಹೇಬರ ಮನೆಗೆ ಧರೆ ಕುಸಿದು ಹಾನಿಯಾಗಿದೆ.

ಕೋಗೋಡು ಗ್ರಾಮದ ಹೊನ್ನೆಕುಡಿಗೆ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಹೊನ್ನವಳ್ಳಿ ಗ್ರಾಮದ ಹೊಂಬಾಗಿ ದೇವಸ್ಥಾನ, ಹೊನ್ನವಳ್ಳಿ ದೇವಸ್ಥಾನ ಬಳಿ ಅಕೇಶಿಯಾ ಮರ ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್‌ ಕಂಬಗಳು ಮುರಿದು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಅಡ್ಡಗದ್ದೆ ಗ್ರಾಮದ ನೇರಳಕೊಡಿಗೆ ವೃತ್ತದ ಬಳಿ ಪ್ರಸಕ್ತ ವರ್ಷ ಅಭಿವೃದ್ಧಿಪಡಿಸಲಾಗಿದ್ದ ರಸ್ತೆ ಕುಸಿದು, ಶೃಂಗೇರಿ-ಆಗುಂಬೆ
ರಸ್ತೆ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 169ರ ಆನೆಗುಂದ, ಉಳುವೆ, ಕಾವಡಿ, ತನಿಕೋಡು ಬಳಿ ರಸ್ತೆ ಭೂಕುಸಿತ ಉಂಟಾಗಿದೆ. ಮೆಣಸೆ ಗ್ರಾಪಂನ ಮಸಿಗೆ ಗ್ರಾಮದಲ್ಲಿ ತೆಂಗಿನ ಮರ ಗಾಳಿಯ ಹೊಡೆತಕ್ಕೆ ಉರುಳಿ ಬಿದ್ದಿದೆ.

ವಿದ್ಯುತ್‌ ಸಂಪರ್ಕ ಕಡಿತ: ಸತತ ಗಾಳಿಯಿದ ವಿದ್ಯುತ್‌ ಕಂಬ ನೆಲಕ್ಕುರುಳುತ್ತಿದ್ದು, ವಿದ್ಯುತ್‌ ಸಂಪರ್ಕ ಸಾಧ್ಯವಾಗುತ್ತಿಲ್ಲ 

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

ಚಾರ್ಮಾಡಿ ಘಾಟಿ ; ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ

1-sadasd

July27;ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ಪ್ರೌಢ ಶಾಲೆಗಳವರೆಗೆ,ಕೊಡಗಿನಲ್ಲಿ ಪಿಯುಸಿವರೆಗೆ ರಜೆ

N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್

N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್

Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ

Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ

Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ

Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.