Udayavni Special

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ


Team Udayavani, Oct 11, 2020, 7:47 PM IST

ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ವಾಣಿಜ್ಯ ಸಚಿವರಿಗೆ ಕರ್ನಾಟಕ ಬೆಳೆಗಾರರಒಕ್ಕೂಟದಿಂದ ಮನವಿ ಮಾಡಿದ್ದು, ಮಂಡಳಿ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ ಪರಿಣಾಮ ಕಾಫಿ ಮಂಡಳಿ ಕಾರ್ಯದರ್ಶಿ ರಾಜ್ಯದ ಮೂರು ಜಿಲ್ಲೆಗೆಳಿಗೆ ಅ.12ರಿಂದ14ರವರೆಗೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿ ವಾಣಿಜ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಕೆ.ಜಿ.ಎಫ್‌. ನೂತನ ಅಧ್ಯಕ್ಷ ಎನ್‌.ಬಿ. ಉದಯ್‌ಕುಮಾರ್‌ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಫಿ ಬೆಳೆ ಬೆಳೆಯುವ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಭಾರೀ ಪ್ರಮಾಣದ ಕಾಫಿ ಬೆಳೆ ಹಾಗೂ ಕಾಫಿ ತೋಟ ನಾಶವಾಗಿವೆ ಎಂದರು. ಕಾಫಿ ಮತ್ತು ಕಾಳುಮೆಣಸು ಬೆಳೆ ಬೆಲೆ ಕುಸಿತದಿಂದ ಕಾಫಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಉದ್ಯಮ ನಂಬಿರುವ ಲಕ್ಷಾಂತರ ಕಾರ್ಮಿಕರು ತೊಂದರೆಯಲ್ಲಿ ಸಿಲುಕಿರುವುದು ಸೇರಿದಂತೆ ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕೆ.ಜಿ.ಎಫ್‌. ಮನವಿ ಮಾಡಿದೆ ಎಂದು ತಿಳಿಸಿದರು.

ಕಾಫಿ ಮಂಡಳಿ ಇತ್ತೀಚೆಗೆ ಸರ್ಕಾರದ ನೂತನ ಕಾರ್ಯದರ್ಶಿ ಡಾ| ಕೆ.ಜಿ. ಜಗದೀಶ್‌ ಅವರನ್ನು ನೇಮಕ ಮಾಡಿದ್ದು, ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೆ.ಜಿ.ಎಫ್‌. ನೂತನ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ| ಜಗದೀಶ್‌ ಅ.12ರಿಂದ ಅ.14ರ ವರೆಗೆ ಕಾಫಿ ಬೆಳೆ ಬೆಳೆಯುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಕಾಫಿ ತೋಟಗಳ ಪರಿಶೀಲನೆ ಮತ್ತು ಬೆಳೆಗಾರರಸಮಸ್ಯೆ ಆಲಿಸಿ ಸಮಗ್ರ ವರದಿ ತಯಾರಿಸಿ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ ಎಂದರು.

ಪ್ರತೀಕೂಲ ಹವಾಮಾನ ಮತ್ತು ಬೆಲೆ ಏರಿಳಿತದಿಂದ ಕಾಫಿ ಉದ್ಯಮ ನಷ್ಟದಲ್ಲಿದ್ದು, ಬೆಳೆಗಾರರ ಬದುಕು ಅತಂತ್ರವಾಗಿದೆ. ಬೆಳೆಗಾರರುಕೇಂದ್ರ ಸರ್ಕಾರದ ನೆರವಿನ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಬಳಿ ಕೆಜಿಎಫ್‌ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ತಿಳಿಸಿದರು.

ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬಾಕಿ ಸಾಲವನ್ನು ಶೇ.3ರ ಬಡ್ಡಿದರದಲ್ಲಿ ಮರು ಹೊಂದಾಣಿಕೆ ಮಾಡಬೇಕು. ಹೊಸ ಸಾಲವನ್ನು ಶೇ.3ರ ಬಡ್ಡಿದರದಲ್ಲೇ ನೀಡಬೇಕು. ಬೆಳೆಗಾರರ ಕೃಷಿ ಸಾಲವನ್ನು ಸಿ-ಬಿಲ್‌ನಿಂದ ಹೊರಗಿಡಬೇಕು. ನರೇಗಾ ಯೋಜನೆ ವ್ಯಾಪ್ತಿಗೆ ಕಾಫಿ ತೋಟಗಳನ್ನು ಸೇರಿಸಿರುವುದು ಸ್ವಾಗತಾರ್ಹವಾಗಿದ್ದರೂ ಇದಕ್ಕೆ 5 ಎಕರೆಯ ಮಿತಿ ಹೇರಿರುವುದನ್ನು ತೆಗೆದು ಎಲ್ಲ ಬೆಳೆಗಾರರಿಗೂ ನರೇಗಾ ಯೋಜನೆಯ ಸೌಲಭ್ಯ ನೀಡಬೇಕು ಎಂದರು.

ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದ್ದು, ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕು. ರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.ಕಾಡಾನೆ ಹಾವಳಿಯಿಂದ ನಾಶವಾಗುವಪ್ರತೀ ತೋಟಗಳಲ್ಲಿನ ಪ್ರತೀ ರೊಬಾಸ್ಟಾ ಗಿಡಕ್ಕೆ 9 ಸಾವಿರ ರೂ. ಹಾಗೂ ಅರೇಬಿಕಾ ಗಿಡಕ್ಕೆ 7500 ರೂ. ಪರಿಹಾರ ನೀಡಬೇಕು. ಸೋಲಾರ್‌ ಬೇಲಿ ನಿರ್ಮಾಣಕ್ಕೆ ಶೇ.90ರಷ್ಟು ಸಹಾಯಧನ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಜಿಎಫ್‌ ಕಾರ್ಯದರ್ಶಿ ಮುರಳೀಧರ್‌, ಮುಖಂಡರಾದ ಮಹೇಶ್‌ ಗೌಡ, ಎನ್‌.ಕೆ. ಪ್ರದೀಪ್‌, ಅತ್ತಿಕಟ್ಟೆ ಜಗನ್ನಾಥ್‌, ತೀರ್ಥಮಲ್ಲೇಶ್‌, ಸಿ.ಎ. ಸುರೇಶ್‌, ರತ್ನಾಕರ್‌, ಡಿ.ಎಂ. ವಿಜಯ್‌ ಇದ್ದರು.

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

chikkamagalore news

ಕಾಫಿನಾಡಲ್ಲಿ ಪ್ರವಾಸಿ ತಾಣಕ್ಕೆ ಮುಗಿ ಬಿದ್ದ ಜನ

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

chikkamagalore news

ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.