ದೇವರ ಅನುಸಂಧಾನಕ್ಕೆ ಭಕ್ತಿ ಮಾರ್ಗ ಶ್ರೇಷ್ಠ

ಕಲಾವಿದ ಹರೀಶ್‌ ಡೋಂಗ್ರೆ ಅಭಿಮತಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರದಿಂದ ಬನದಲ್ಲಿ ದಾಸ ಗಾಯನ ಕಾರ್ಯಕ್ರಮ

Team Udayavani, Mar 15, 2020, 4:55 PM IST

15-March-28

ಶೃಂಗೇರಿ: ದೇವರ ಜೊತೆಗೆ ಅನುಸಂಧಾನಕ್ಕೆ ಭಕ್ತಿ ಮಾರ್ಗ ಅತ್ಯಂತ ಉನ್ನತವಾದ ದಾರಿ. ಈ ಮಾರ್ಗದ ಹೆಗ್ಗಳಿಕೆ ದಾಸವರೇಣ್ಯರು ರಚಿಸಿದ ಹಾಡುಗಳಲ್ಲಿವೆ ಎಂದು ಕಲಾವಿದ, ಅರ್ಚಕ ಹರೀಶ್‌ ಡೋಂಗ್ರೆ ತಿಳಿಸಿದ್ದಾರೆ.

ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್‌ ನೆಮ್ಮಾರು, ಹೊಸೂರು ಗ್ರಾಮದ ಅಬ್ಬಿಗುಂಡಿಯಲ್ಲಿ ಏರ್ಪಡಿಸಿದ್ದ ಬನದಲ್ಲಿ ದಾಸ ಗಾಯನ ಕಾರ್ಯಕ್ರಮವನ್ನು ತಾಳ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ದಾಸ ಪಂಥದ ಗೀತ ರಚನೆಗಳಲ್ಲಿ ಭಕ್ತಿಯ ಪರಾಕಾಷ್ಠೆ ಮಾತ್ರವಲ್ಲದೇ, ಬದುಕಿನ ಲೌಕಿಕತೆಗೂ ಕನ್ನಡಿಯಾಗಿದೆ. ಹೀಗೆ ಆಧ್ಯಾತ್ಮ ಮತ್ತು ಲೌಕಿಕತೆಯ ಸಮ್ಮಿಲನದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ. ಇದನ್ನು ಮಾಧುರ್ಯ ಪೂರ್ಣವಾಗಿ ಹಾಡಿದಾಗ ಭಕ್ತಿಯ ಮತ್ತು ಸಂಗೀತದ ವಾತಾವರಣ ಯುಕ್ತವಾಗಿ ಒಡಮೂಡಿ ಹೊಸದೊಂದು ಲೋಕವನ್ನು ಅನಾವರಣಗೊಳಿಸುತ್ತದೆ. ಅತ್ಯಂತ ದುರ್ಗಮ ತಾಣವಾದ ಅಬ್ಬಿಗುಂಡಿಯಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಸಂಸ್ಥೆ ಮೇಲ್ಪಂಕ್ತಿಯಾಗಿದೆ. ಈ ಸಂಸ್ಥೆಯು ಬಹುತೇಕ ಕಾರ್ಯಕ್ರಮಗಳನ್ನು ಸಂಪೂರ್ಣ ಹಳ್ಳಿ ಇಲ್ಲವೇ ಕಾಡಿನ ಪ್ರದೇಶದಲ್ಲಿ ನಡೆಸುತ್ತಾ ಕಲಾ ಸಂಘಟನೆಗೆ ಹೊಸ ಭಾಷ್ಯ ಬರೆಯುತ್ತಿದೆ. ಸಂಸ್ಥೆಯ ಈ ರೀತಿಯ ಯಶಸ್ವೀ ಪರಿಕಲ್ಪನೆಯ ಹಿಂದೆ ನಾಡು ಕಂಡ ಶ್ರೇಷ್ಠ ಸಾಂಸ್ಕೃತಿಕ ಸಂಘಟಕ ರಮೇಶ್‌ ಬೇಗಾರ್‌ ಅವರ ಕನಸಿರುವುದು ಸ್ಪಷ್ಟವಾಗಿದೆ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್‌ ಬೇಗಾರ್‌ ಮಾತನಾಡಿ, ಕಲೆ ಕಟ್ಟ ಕಡೆಯ ಗ್ರಾಮವನ್ನು ಮತ್ತು ಗ್ರಾಮಸ್ಥರನ್ನು ತಲುಪಬೇಕು ಎಂಬುದನ್ನು ಸಂಸ್ಥೆಯ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಸಂಸ್ಥೆ ನಕ್ಸಲ್‌ ಬಾತ್‌ ಸ್ಥಳ ಸೇರಿದಂತೆ ಬೇರೆ ಬೇರೆ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಸಮಾಜದ ಎಲ್ಲಾ ಸ್ತರದ ಜನರನ್ನು ತಲುಪುತ್ತಿದೆ. ಕಾಲ್ನಡಿಗೆಯ ಸಂಚಾರ ಮಾತ್ರ ಇರುವ ದುರ್ಗಮ ತಾಣಗಳಲ್ಲಿಯೂ ಕಾರ್ಯಕ್ರಮ ಏರ್ಪಡಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ ಎಂದರು. ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿ, ಕಕ್ಕರಣೆ ಮಹಾಬಲ ವಂದಿಸಿದರು.

ಜನಮನ ಗೆದ್ದ ದಾಸವಾಣಿ: ಉಡುಪಿಯ ನಾರಾಯಣ ಸರಳಾಯ ಮತ್ತು ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ಸೇರಿದ್ದ ಅಪಾರ ಸಂಖ್ಯೆಯ ಗ್ರಾಮಸ್ಥರನ್ನು ರಂಜಿಸಿತು. ಸರಳಾಯರು ವಂದಿಪೆ ನಿನಗೆ ಗಣನಾಥ ಎಂಬ ನಾಟರಾಗದ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮೋಹನ ರಾಗದಲ್ಲಿ ಪ್ರಸ್ತುತಪಡಿಸಿದ ಪಿಳ್ಳಂಗೋವಿ ಹಾಡು, ಕಾಪಿ ರಾಗದ ಆಡಿಸಿದಳ್‌ ಯಶೋಧೆ, ಮಧ್ಯಮಾವತಿ ರಾಗದ ಲಕ್ಷ್ಮೀ ಬಾರಮ್ಮ ಕೃತಿಗಳು ಪ್ರೇಕ್ಷಕರ ಮನ ಸೂರೆಗೊಂಡವು.

ಪಕ್ಕವಾದ್ಯದಲ್ಲಿ ಸುಹಾಸ್‌ ಹೆಬ್ಟಾರ್‌, ಪುತ್ತೂರು ಇವರು ತಬಲಾದಲ್ಲಿ, ಕೀ ಬೋರ್ಡ್‌ ನಲ್ಲಿ ಎಂ.ಕೆ. ಶ್ರೀನಿ  ಮತ್ತು ವಿಶೇಷ ಉಪಕರಣದಲ್ಲಿ ಸುಮಂತ್‌ ಹೆಬ್ಟಾರ್‌ ಸಹಕಾರ ನೀಡಿದರು.

ಟಾಪ್ ನ್ಯೂಸ್

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

5

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

mb-patil

ಕಾನೂನು ಎಲ್ಲರಿಗೂ ಒಂದೇ, ಪ್ರಭಾವಿಗಳಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಎಂ.ಬಿ.ಪಾಟೀಲ್

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

Mysore: ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

ಒಂದಕ್ಕಿಂತ ಹೆಚ್ಚು SIM ಕಾರ್ಡ್‌ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು

RSS

RSS; ಭಾಗ್ವತ್ ‘ನಿಜವಾದ ಸೇವಕ’ ಹೇಳಿಕೆ ಮೋದಿ ಉದ್ದೇಶಿಸಿ ನೀಡಿದ್ದಲ್ಲ: ಸಂಘ ಸ್ಪಷ್ಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2022ರಲ್ಲಿ ಲ್ಯಾಪ್ ಟಾಪ್ ಕಳವು ಮಾಡಿದ ಪ್ರಕರಣ: ಮಂಗಳೂರು ಮೂಲದ ಆರೋಪಿ ಬಂಧನ

Laptop ಕಳವು ಮಾಡಿ 2 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಮ್ ಖರೀದಿಸಿ ಸಿಕ್ಕಿಬಿದ್ದ

Elephant: ಚಾರ್ಮಾಡಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ… ಕಂಗಾಲಾದ ಪ್ರಯಾಣಿಕರು

Elephant: ಚಾರ್ಮಾಡಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ… ಕಂಗಾಲಾದ ಪ್ರಯಾಣಿಕರು

1-sasasad

Tarikere; ಸೆಲ್ಫಿ ತೆಗೆಯುವ ವೇಳೆ ಜಲಪಾತದಿಂದ ಬಿದ್ದು ಪ್ರವಾಸಿಗ ಸಾವು

Kottigehara ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌: ಪ್ರಯಾಣಿಕರಿಗೆ ತೊಂದರೆ

Kottigehara ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌: ಪ್ರಯಾಣಿಕರಿಗೆ ತೊಂದರೆ

Kadur: ಕಾರಿನ ಬಾನೆಟ್ ನಲ್ಲಿ ಕಾಣಿಸಿಕೊಂಡ ಬೆಂಕಿ; ಅಪಾಯದಿಂದ ಪಾರು

Kadur: ಕಾರಿನ ಬಾನೆಟ್ ನಲ್ಲಿ ಕಾಣಿಸಿಕೊಂಡ ಬೆಂಕಿ; ಅಪಾಯದಿಂದ ಪಾರು

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

Alanda; ಕುವೈತ್ ಅಗ್ನಿ ದುರಂತದಲ್ಲಿ ಮೃತ ವ್ಯಕ್ತಿಯ ಶವ ಸ್ವಗ್ರಾಮಕ್ಕೆ ಆಗಮನ: ಅಂತ್ಯಕ್ರಿಯೆ

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

5

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

mb-patil

ಕಾನೂನು ಎಲ್ಲರಿಗೂ ಒಂದೇ, ಪ್ರಭಾವಿಗಳಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಎಂ.ಬಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.