ನಾಲ್ವರು ತಬ್ಲೀಘಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಆರೋಗ್ಯ ಇಲಾಖೆ-ಜಿಲ್ಲಾಸ್ಪತ್ರೆ ಸಿಬ್ಬಂದಿಯೊಂದಿಗೆ ಪುಷ್ಪವೃಷ್ಟಿ ಮಾಡಿ ಬೀಳ್ಕೊಟ್ಟ ಜಿಲ್ಲಾಧಿಕಾರಿ

Team Udayavani, May 24, 2020, 12:56 PM IST

ನಾಲ್ವರು ತಬ್ಲೀಘಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಚಿತ್ರದುರ್ಗ: ಜಿಲ್ಲಾ ಕೋವಿಡ್‌ ಆಸ್ಪತ್ರೆ ಆವರಣದಲ್ಲಿ ಕೋವಿಡ್ ವಾರಿಯರ್ಗೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಲಾಯಿತು.

ಚಿತ್ರದುರ್ಗ: ಅಹಮದಾಬಾದ್‌ನಿಂದ ಜಿಲ್ಲೆಗೆ ಆಗಮಿಸುತ್ತಲೇ ಕೋವಿಡ್ ಸೋಂಕು ದೃಢಪಟ್ಟಿದ್ದ 6 ಮಂದಿ ತಬ್ಲೀಘಿ ಸದಸ್ಯರ ಪೈಕಿ ಗುಣಮುಖರಾದ ನಾಲ್ವರನ್ನು ಶನಿವಾರ ಆರೋಗ್ಯ ಇಲಾಖೆ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಿತು. ಒಟ್ಟು 6 ರಲ್ಲಿ 4 ಜನರು ಕೋವಿಡ್  19 ಸೋಂಕಿನಿಂದ ಗುಣಮುಖರಾಗಿದ್ದು, ಅವರಿಗೆ ಆಸ್ಪತ್ರೆಯಿಂದ ಮನೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಖುದ್ದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕೋವಿಡ್‌ ಆಸ್ಪತ್ರೆ ಬಳಿ ಬಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಜತೆಗೂಡಿ ಪುಷ್ಪವೃಷ್ಟಿ ಮಾಡಿ ಬೀಳ್ಕೊಟ್ಟರು.

ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ 64 ವರ್ಷದ (ಪಿ-751), ಮಧ್ಯ ವಯಸ್ಕ 53 (ಪಿ-752), ಯುವಕರಾದ 34 ವರ್ಷದ (ಪಿ-787), 26 ವರ್ಷದ (ಪಿ-788) ಕೋವಿಡ್‌-19 ಕೊರೊನಾ ಗೆದ್ದು ಬಂದವರು. ಗುಜರಾತಿನ  ಅಹಮದಾಬಾದಿನಿಂದ ಮೇ 5 ರಂದು ಜಿಲ್ಲೆಗೆ ಮರಳಿದ 15 ಜನ ತಬ್ಲೀಘಿಗಳ ಪೈಕಿ ಮೇ 8 ಮತ್ತು 9 ರಂದು ತಲಾ ಮೂವರು ಸೇರಿ ಒಟ್ಟು ಆರು ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿತ್ತು. ಅದರಲ್ಲಿ ನಾಲ್ವರು ಎರಡು ವಾರಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿದ್ದಾರೆ. ಈ ವೇಳೆ ಕೊರೊನಾ ಗೆದ್ದು ಬಂದ ನಾಲ್ವರಲ್ಲೂ ಮಂದಹಾಸ ಮೂಡಿತ್ತು. ಜತೆಗೆ ಆರೋಗ್ಯ ಇಲಾಖೆ ಹಾಗೂ
ಜಿಲ್ಲಾಡಳಿತ ಶುಶ್ರೂಷೆ ಮಾಡಿದ ವೈದ್ಯರು ನರ್ಸ್‌ಗಳು ಸೇರಿದಂತೆ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಓರ್ವ ವೃದ್ಧರಂತೂ ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಯಾವಾಗ ಕರೆದರೂ ಬಂದು ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು. ಮತ್ತೋರ್ವ
ಯುವಕ ಮಾತನಾಡಿ, ಕೊರೊನಾ ಸೋಂಕಿನ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಆದರೆ ಇಲ್ಲಿ ನಮಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ನಮಗೆ ಧೈರ್ಯ ತುಂಬಿದ್ದಾರೆ. ಬೇಗ ಗುಣಮುಖರಾಗುತ್ತಿರಿ ಎಂದು ಹೇಳುವ ಮೂಲಕ ಪ್ರೇರಣೆ ನೀಡಿದ್ದಾರೆ. ಅವರಿಗೆ ನಮಸ್ಕಾರಗಳು ಎಂದರು.

ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರು ನನಗೆ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಆಗಿಂದಾಗ್ಗೆ ನರ್ಸ್‌ಗಳು ಬಂದು ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಔಷ ಧ ಕೊಟ್ಟು ಹೋಗುತ್ತಿದ್ದರು. ಜತೆಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು. ಅವರೆಲ್ಲರ ಶ್ರಮ, ದೇವರ ದಯೆಯಿಂದ ಗುಣಮುಖನಾಗಿ ಹೊರಬಂದಿದ್ದೇನೆ ಎಂದು ಪಿ-751 ತಿಳಿಸಿದರು.

ಗುಜರಾತಿನ ಅಹಮದಾಬಾದಿನಲ್ಲಿ ಇದ್ದಾಗಲೂ ಕೋವಿಡ್‌-19 ದೃಢಪಟ್ಟಿತ್ತು. ಅಲ್ಲಿ 14 ದಿನ ಚಿಕಿತ್ಸೆ ಪಡೆದು ಗುಣವಾದ ನಂತರ ಜಿಲ್ಲೆಗೆ ವಾಪಸ್‌ ಬಂದೆ. ಇಲ್ಲಿ
ಮತ್ತೂಮ್ಮೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಿದರು. ಇಲ್ಲಿ ಪುನಃ ಪಾಸಿಟಿವ್‌ ಬಂದಾಗ ಗಾಬರಿಯಾಗಿತ್ತು. ಆದರೆ ಮೊದಲೇ ಚಿಕಿತ್ಸೆ ಪಡೆದಿದ್ದರಿಂದ ಭಯಪಡಲಿಲ್ಲ.
ಒಮ್ಮೊಮ್ಮೆ ರಾತ್ರಿ ಎಚ್ಚರವಾದಾಗ ಏನೇನೋ ಆಲೋಚನೆ ಬರುತ್ತಿತ್ತು. ಫೋನ್‌ ಕಿರಿಕಿರಿ ಬೇಡವೆಂದು ಸ್ವಿಚ್‌ ಆಫ್‌ ಮಾಡುತ್ತಿದ್ದೆ. ಈಗ ಗುಣಮುಖನಾಗಿದ್ದು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಡಿಎಚ್‌ಒ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಗಿರೀಶ್‌, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

ಕೋವಿಡ್ ಪಾಸಿಟಿವ್‌ ಬಂದವರಿಗೆ 7 ಮತ್ತು 12ನೇ  ದಿನ ಪರೀಕ್ಷೆ ಮಾಡಿದಾಗ ನೆಗೆಟಿವ್‌ ವರದಿ ಬಂದಿದೆ. 12ನೇ ದಿನ 24 ಗಂಟೆ ಅವ ಧಿಯಲ್ಲಿ ಎರಡು ಸಲ
ಪರೀಕ್ಷೆ ನಡೆಸಿದ್ದು, ನಾಲ್ಕು ಜನರ ವರದಿ ನೆಗೆಟಿವ್‌ ಬಂದಿದೆ. ಈಗ ಮನೆಯಲ್ಲಿ ಮತ್ತೆ 14 ದಿನಗಳ ಕಾಲ ಕ್ವಾರಂಟೈನ್‌ ಇರಲು ಸೂಚಿಸಿದ್ದೇವೆ.
ಡಾ| ಪಾಲಾಕ್ಷ, ಡಿಎಚ್‌ಒ

ಟಾಪ್ ನ್ಯೂಸ್

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hajj; Pilgrim from Chitradurga passed away due to sunstroke in Mecca

Hajj Pilgrimage; ಮೆಕ್ಕಾದಲ್ಲಿ ಬಿಸಿಲಿನ ಝಳಕ್ಕೆ ಚಿತ್ರದುರ್ಗ ಮೂಲದ ಯಾತ್ರಾರ್ಥಿ ಸಾವು

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

7-chitradurga

ಒತ್ತಡಕ್ಕೆ ಮಣಿಯದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಾಗಲಿ; ಬಿ.ವೈ.ವಿಜಯೇಂದ್ರ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

hejjaru movie releasing on July 19th

Hejjaru; ಪ್ಯಾರಲಲ್‌ ಲೈಫ್ ಸಿನಿಮಾ; ಜುಲೈ 19ಕ್ಕೆ ‘ಹೆಜ್ಜಾರು’ ರಿಲೀಸ್‌

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

20-uv-fusion

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.