ಹೊಳಲ್ಕೆರೆ: ಬಿಜೆಪಿಯ 70 ಕಾರ್ಯಕರ್ತರಿಂದ ರಕ್ತದಾನ
Team Udayavani, Sep 18, 2020, 8:01 PM IST
ಸಾಂದರ್ಭಿಕ ಚಿತ್ರ
ಹೊಳಲ್ಕೆರೆ: ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ರಕ್ತದಾನ. ಹಾಗಾಗಿ ಪ್ರಧಾನಿ ಮೋದಿಯವರ 70ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಯುವಕರಿಂದ ರಕ್ತದಾನ ಶಿಬಿರವನ್ನುಆಯೋಜಿಸಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ 70ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 70 ಯುವಕರು ರಕ್ತದಾನ ಮಾಡಿದ್ದಾರೆ. ತಾಲೂಕಿನ ವಿವಿಧೆಡೆ ಸ್ವತ್ಛತಾಆಂದೋಲನ, ಸಸಿ ನೆಡುವುದು, ರೋಗಿಗಳಿಗೆ ಹಾಲು ಹಣ್ಣು ವಿತರಣೆ, ವಿಕಲಚೇತನರಿಗೆ ಅಗತ್ಯ ಪರಿಕರ ವಿತರಣೆ, ಅಂಧರಿಗೆ ಕನ್ನಡ ನೀಡುವುದು, ಮನೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಕಾರ್ಯಕರ್ತರ ಮೂಲಕ ಇಡೀ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ರುದ್ರಮ್ಮ, ವೈದ್ಯಾಧಿ ಕಾರಿ ಡಾ| ತಿಪ್ಪೇಸ್ವಾಮಿ, ಟಿಎಚ್‌ಒ ಡಾ| ಜಯಸಿಂಹ, ಡಾ| ಆನಂದ್, ರೂಪಾ ಬಾಬು, ಪಪಂ ಸದಸ್ಯರಾದ ಕೆ.ಸಿ. ರಮೇಶ್, ಎಚ್.ಆರ್. ನಾಗರತ್ನ ವೇದಮೂರ್ತಿ, ಗುಂಜಿಗನೂರು ಇಂದ್ರಪ್ಪ, ರೆಡ್‌ಕ್ರಾಸ್ ಸದಸ್ಯ ಗಿರೀಶ್, ಸಾವಿತ್ರಿ ಬಾಯಿ, ಕೆ.ಆರ್.ರಾಜಪ್ಪ, ಬಸವರಾಜ್, ಫಣಿಯಪ್ಪ ಮತ್ತಿತರರು ಇದ್ದರು. ಪಪಂ ಸದಸ್ಯರಾದ ಡಿ.ಎಸ್. ವಿಜಯ್, ಪಿ.ಆರ್.ಮಲ್ಲಿಕಾರ್ಜುನ್, ಅಶೋಕ್, ಪಿ.ಎಚ್. ಮುರುಗೇಶ್, ನಗರಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ದರ್ಶನ್, ಮಂಜುಳಾ ಸೇರಿದಂತೆ 70 ಜನರು ರಕ್ತದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2 ಲಕ್ಷ ಟ್ರಾನ್ಸ್ ಫಾರ್ಮರ್ ದುರಸ್ತಿ: ಸಚಿವ ಸುನಿಲ್ ಕುಮಾರ್
ದಕ್ಷಿಣ ಕೊರಿಯಾ ಸೇನಾ ಕವಾಯತು ವಿಸ್ತರಣೆ
ಮಳೆಯಿಂದ ಬೆಳೆ ನಷ್ಟ: ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು; ಮಾಜಿ ಶಾಸಕ ಮಧು ಬಂಗಾರಪ್ಪ
ಪಾಟಿಯಾಲಾದ ಜೈಲಿನಿಂದ ಬ್ಯಾರೆಕ್ ನಂ 10ರಲ್ಲಿ ನವಜೋತ್ ಸಿಂಗ್ ಸಿಧು
ಸಾಗರ: ನೆಡುತೋಪು ಕಾವಲು ಕಾಯುತ್ತಿದ್ದವನಿಂದಲೇ ಪ್ಲಾಂಟೇಶನ್ನಿಂದ ಮರ ಕಳ್ಳತನ; ಆರೋಪಿಗಳ ಬಂಧನ