Udayavni Special

ಮಂಜುನಾಥ್‌ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ


Team Udayavani, May 31, 2020, 7:57 AM IST

ಮಂಜುನಾಥ್‌ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ. ಮಂಜುನಾಥ್‌ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಜಗದೀಶ್‌ ಗೌಡಪ್ಪ ಪಾಟೀಲ ತಿಳಿಸಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಜಿ. ಜಗದೀಶ್‌ ಅವರ ವರ್ಗಾವಣೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಉಪ ಚುನಾವಣೆ ನಡೆಯಿತು. ಸರ್ಕಾರಿ ನೌಕರರ ಪ್ರತಿನಿ ಧಿಳಾದ 57 ಮತದಾರರಿದ್ದು, ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಕೆ. ಮಂಜುನಾಥ್‌ 40 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಎಸ್‌.ಕೆ. ಮಂಜುನಾಥ್‌ 17 ಮತ ಪಡೆದರು.

ಕೋವಿಡ್‌ ನಿಯಂತ್ರಣಕ್ಕೆ ನೌಕರರ ಸೇವೆಗೆ ಮೆಚ್ಚುಗೆ: ಫಲಿತಾಂಶ ಘೋಷಣೆ ಬಳಿಕ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎ. ಷಡಕ್ಷರಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷರ ಅವ  ಐದು ವರ್ಷಗಳಾಗಿದ್ದು, ಈಗಾಗಲೇ 8 ತಿಂಗಳು ಕಳೆದಿದೆ. ಉಳಿದ ಅವಧಿಗೆ ಉತ್ಸಾಹಿ ಯುವ ಸರ್ಕಾರಿ ನೌಕರ ಕೆ. ಮಂಜುನಾಥ್‌ ಆಯ್ಕೆಯಾಗಿದ್ದು, ಜಿಲ್ಲೆಯ ನೌಕರರ ಹಿತ ಕಾಪಾಡಲಿದ್ದಾರೆ. ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೇಂದ್ರ ಸಂಘದ ಗಮನಕ್ಕೆ ತಂದು ಮಾಡಿಕೊಡುವ ಪ್ರಯತ್ನಗಳು ಅವರಿಂದ ಆಗಲಿ ಎಂದರು. ಕೋವಿಡ್‌-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ಸುಮಾರು ರೂ. 200 ಕೋಟಿ ನೀಡಿದ್ದಾರೆ.

ಪ್ರತಿ ವರ್ಷ ಸರ್ಕಾರಿ ನೌಕರರಿಗಾಗಿ 15 ದಿನಗಳ ಗಳಿಕೆ ರಜೆ ನಗದೀಕರಣಕ್ಕೆ ಅವಕಾಶವಿದೆ. ಇದು ಸುಮಾರು ರೂ 400 ರಿಂದ 500 ಕೋಟಿ ರೂ. ಆಗಲಿದೆ. ಆದರೆ ಈ ಬಾರಿ ಸೌಲಭ್ಯ ನೀಡಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಇದರಿಂದ ನೌಕರರಿಗೆ ತೊಂದರೆ ಆಗಿದ್ದರೂ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ಮಾನವೀಯತೆ ಮೆರೆಯುವ ಉದ್ದೇಶದಿಂದ ಅತ್ಯಂತ ಗೌರವಯುತವಾಗಿ ನಿರ್ಧಾರ ಸ್ವೀಕರಿಸಿ, ಸರ್ಕಾರದ ಜೊತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆ, ಕಂದಾಯ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ಶಿಕ್ಷಣ ಇಲಾಖೆಯ ನೌಕರರು ಸೇರಿದಂತೆ ಇತರೆ ಇಲಾಖೆ ನೌಕರರೆಲ್ಲರೂ ಕೋವಿಡ್‌-19 ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ರಾಜ್ಯಗಳಿಗೆ ಹೋಲಿಸಿದಾಗ ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ.

ಇದರ ಶ್ರೇಯಸ್ಸು ರಾಜ್ಯ ಸರ್ಕಾರಿ ನೌಕರರಿಗೆ ಸಲ್ಲಬೇಕು. ವೃತ್ತಿ ಬದುಕಿನ ಸೇವೆಗಳನ್ನು ನೀಡುವುದರ ಜೊತೆಗೆ ಸರ್ಕಾರಕ್ಕೆ ಆರ್ಥಿಕ ಸಹಕಾರಗಳನ್ನು ಕೊಡುವುದರ ಜೊತೆಗೆ ಅತ್ಯಂತ ಗೌರವದಿಂದ ನೌಕರರು ನಡೆದುಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಶ್ರೀನಿವಾಸ್‌, ಗೌರವಾಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷ ಬಸವರಾಜ್‌, ಬೆಂಗಳೂರು ವಿಭಾಗದ ಉಪಾಧ್ಯಕ್ಷ ಮೋಹನ್‌ ಕುಮಾರ್‌, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಜಯಪ್ಪ, ಜಿಲ್ಲಾ ಶಾಖೆಯ ಪ್ರಭಾರಿ ಅಧ್ಯಕ್ಷ ಲೋಕೇಶ್‌, ಜಿಲ್ಲಾ ಮತ್ತು ರಾಜ್ಯ ಘಟಕದ ಪದಾ ಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

ದೇಶದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ: ಬೆಲೆ ಏರಿಕೆಗೆ ಸಚಿವರ ಪ್ರತಿಕ್ರಿಯೆ

PM Narendra Modi to attend UN climate meet at Glasgow, environment minister says

ವಿಶ್ವಸಂಸ್ಥೆಯ ಗ್ಲ್ಯಾಸ್ಗೋ ಹವಾಮಾನ ಶೃಂಗಸಭೆಗೆ ಪ್ರಧಾನಿ ಮೋದಿ

1-222

ನಗರಗಳಿಗೆ ಸೀಮಿತವಾದ ಬಿಜೆಪಿಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಿದ್ದು ಯಡಿಯೂರಪ್ಪ

25

ಮಲೆನಾಡಿನಲ್ಲಿ ಮಳೆ ಅಬ್ಬರ: ಕಾಫಿ ಬೆಳೆಗಾರರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The Ramayana

ರಾಮಾಯಣದಲ್ಲಿದೆ ಆದರ್ಶ ಬದುಕಿನ ಸಾರ

19clk01p

ವೀರಯೋಧರ ಕಾರ್ಯ ಸದಾಸ್ಮರಿಸೋಣ: ಬಸವರೆಡ್ಡಿ

19-ctd-4

ಮುಂದಿನ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾಗಿ ವನಶ್ರೀ ಮಠದ ಸ್ವಾಮೀಜಿ ಆಯ್ಕೆ

19-ctd-3

ತಿಪ್ಪಾರೆಡ್ಡಿಗೆ ಆದ ಅನ್ಯಾಯ ಸರಿಪಡಿಸಲು ಯತ್ನ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

bidkalkatte news

ಬಿದ್ಕಲ್‌ಕಟ್ಟೆ : ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಬಿಸಿಯೂಟ ಸವಿದ ವಿದ್ಯಾರ್ಥಿಗಳು

free school

ಉಚಿತ ಪಾಠ-ಪ್ರವಚನ ತರಗತಿಗಳ ಉದ್ಘಾಟನೆ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.