ಸಾಮೂಹಿಕ ನಾಯಕತ್ವದಲ್ಲಿ ಉಪಚುನಾವಣೆ ಗೆಲುವು: ಆಂಜನೇಯ
Team Udayavani, Apr 15, 2017, 11:18 AM IST
ಚಿತ್ರದುರ್ಗ: ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ 2018ರಲ್ಲಿ ಅಧಿಧಿಕಾರಕ್ಕೆ ಬರುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಚ್. ಮುನಿಯಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ಒತ್ತಾಯಿಸಲು ಹೈಕಮಾಂಡ್ ಬಳಿ ನಿಯೋಗ ತೆರಳಲಾಗುವುದು ಎಂದರು.
“ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಮಾದಿಗ ಸಮುದಾಯದ ಹಿರಿಯರಾದ ಕೆ.ಎಚ್. ಮುನಿಯಪ್ಪನವರು ಆಕಾಂಕ್ಷಿಯಾಗಿದ್ದಾರೆ. ಅವರ ಹಿರಿತನ, ಸೇವೆ ಗುರುತಿಸಿ ಅಧ್ಯಕ್ಷ ಪಟ್ಟ ನೀಡುವಂತೆ ನಾವು ಹೈಕಮಾಂಡ್ ಬಳಿ ನಿಯೋಗ ತೆರಳಿ ಒತ್ತಾಯಿಸುತ್ತೇವೆ’ ಎಂದರು.
ಸುಡುಗಾಡು ಸಿದ್ಧರ ಮನೆಯಲ್ಲಿ ವಾಸ್ತವ್ಯ
ಚಿತ್ರದುರ್ಗ: ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ತಮ್ಮ ಸ್ವ ಕ್ಷೇತ್ರದ ರಾಮಗಿರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿದರು. ಈ ಬಾರಿ ಸಚಿವರ ಪತ್ನಿ ವಿಜಯಮ್ಮ ಆಂಜನೇಯ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಈ ಮೊದಲು ಮೊಳಕಾಲ್ಮೂರು ತಾಲೂಕಿನ ಹನುಮನ ಗುಡ್ಡದಲ್ಲಿ 2015 ಸೆಪ್ಟೆಂಬರ್ 22ರಂದು ವಾಸ್ತವ್ಯ ಮಾಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದರು. ಸಚಿವರು ಅರೆ ಮಲೆನಾಡು ಖ್ಯಾತಿಯ ರಾಮಗಿರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡಾ ವಣೆಯ ಸುಡುಗಾಡು ಸಿದ್ಧರ ಮನೆಯೊಂದರಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
1600 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಮಳೆ ನೀರು ಕಾಲುವೆಗಳ ಆಧುನೀಕರಣ
ಗಾಳಿ ಮಳೆ : ಕಿಷ್ಕಿಂದಾ ಅಂಜನಾದ್ರಿ ಬಳಿ ನಿರ್ಮಾಣ ಹಂತದ ಮೊಬೈಲ್ ಟವರ್ ಬಿದ್ದು 7 ಮಂದಿಗೆ ಗಾಯ
ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ: ಎಸ್ಎಂಕೆ ಗೆ ಹೆಚ್ ಡಿಕೆ ಟಾಂಗ್
ಕುಣಿಗಲ್ ತಾಲೂಕಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ, 10 ಮನೆಗಳಿಗೆ ಹಾನಿ
ನಾರಾಯಣ ಗುರು, ಭಗತ್ ಸಿಂಗ್ ಪಠ್ಯ ತೆಗೆದಿಲ್ಲ: ಸಚಿವ ಸುನಿಲ್ ಸ್ಪಷನೆ