ಲಕ್ಷದ್ವೀಪದಲ್ಲಿ ಬೋಟ್‌ ಮುಳುಗಡೆ, ಇನ್ನೊಂದು ಅಪಾಯದಲ್ಲಿ

Team Udayavani, Dec 2, 2017, 6:00 AM IST

royal-navy-ship-sinking.jpg

ಮಂಗಳೂರು/ಪಣಂಬೂರು: “ಒಖೀ’ ಚಂಡಮಾರುತ ಪ್ರಭಾವದಿಂದ ಮಂಗಳೂರು -ಲಕ್ಷದ್ವೀಪ ಮಧ್ಯೆ ಸರಕು ಸಾಗಾಟ ನಡೆಸುತ್ತಿದ್ದ ಮೂರು ಮಂಜಿ (ಮಿನಿ ಬೋಟ್‌)ಗಳು ಶುಕ್ರವಾರ ಲಕ್ಷದ್ವೀಪದ ಕವರತ್ತಿ ದ್ವೀಪದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅಲ್ಲೋರ್‌ ಹೆಸರಿನ ಬೋಟ್‌ ಸಮುದ್ರದಲ್ಲಿ ಮುಳುಗಡೆಯಾಗಿದೆ. ಯಹವಾ ಹೆಸರಿನ ಇನ್ನೊಂದು ಬೋಟ್‌ ಮುಳುಗಡೆಯ ಹಂತದಲ್ಲಿದೆ. ಇನ್ನೂ ಒಂದು ಬೋಟ್‌ಗೆ ಹಾನಿಯಾಗಿದೆ. ಮೂರೂ ಬೋಟ್‌ಗಳಲ್ಲಿ ಒಟ್ಟು 14 ಮಂದಿ ಇದ್ದು, ಅವರನ್ನು ರಕ್ಷಿಸಲಾಗಿದೆ. 

ಈ ಬೋಟ್‌ಗಳು ಮಂಗಳೂರಿನಿಂದ ಕಬ್ಬಿಣ, ಜಲ್ಲಿ ಮತ್ತಿತರ ಕಟ್ಟಡ ನಿರ್ಮಾಣ ಸರಕು ಹೊತ್ತು ಗುರುವಾರ ಲಕ್ಷದ್ವೀಪಕ್ಕೆ ತೆರಳಿ ದ್ದವು. ಕವರತ್ತಿ ದ್ವೀಪದಲ್ಲಿ ಲಂಗರು ಹಾಕಿದ್ದು, ಎರಡು ಬೋಟ್‌ಗಳಲ್ಲಿನ 

ಸರಕನ್ನು ಖಾಲಿ ಮಾಡಲಾಗಿತ್ತು. ಒಂದು ಬೋಟ್‌ನಲ್ಲಿ ಮಾತ್ರ ಸರಕು ಇದ್ದು, ಅದು ಮುಳುಗಿದೆ ಎಂದು ಮೂಲಗಳು ಹೇಳಿವೆ. ಕೊಚ್ಚಿಯ ಕೋಸ್ಟ್‌ಗಾರ್ಡ್‌ ಹಾಗೂ ನೌಕಾ ಪಡೆ ಸಿಬಂದಿ ಕಾರ್ಯಾಚರಣೆ ನಡೆಸಿ ಎರಡು ಬೋಟ್‌ಗಳಲ್ಲಿದ್ದವರನ್ನು ರಕ್ಷಿಸಿದ್ದಾರೆ.  

3 ಮೀನುಗಾರಿಕಾ ದೋಣಿ ಅಪಾಯದಲ್ಲಿ : ಏತನ್ಮಧ್ಯೆ ಮಂಗಳೂರು ಹಳೆ ಬಂದರಿನಿಂದ ಮೀನುಗಾರಿಕೆಗೆ  ತೆರಳಿದ್ದ ಮೂರು ಮೀನುಗಾರಿಕಾ ದೋಣಿಗಳು ಅಳಿವೆ ಬಾಗಿಲಿಗೆ ಬರಲಾಗದೆ ಅಪಾಯದಲ್ಲಿವೆ. ಅವುಗಳಲ್ಲಿ ಸುಮಾರು 20 ಮೀನುಗಾರರು ಇದ್ದಾರೆ ಎಂದು ತಿಳಿದುಬಂದಿದೆ. ಸಫಾ ಫಿಶರೀಸ್‌, ಎನ್‌ಎಂಪಿಟಿ ಫಿಶರೀಸ್‌ ಮತ್ತು ಸಫಾ ಟೂ ಫಿಶರೀಸ್‌ ಅಪಾಯಕ್ಕೆ ಸಿಲುಕಿದ ದೋಣಿಗಳಾಗಿವೆ.
 
ಮೂರೂ ಬೋಟ್‌ಗಳವರು ಲಂಗರು ಹಾಕಿ ನಿಂತಿದ್ದೇವೆ. ರಾತ್ರಿ ವೇಳೆಗೆ ಗಾಳಿಯ ರಭಸ ಸ್ವಲ್ಪ ಕಡಿಮೆಯಾಗಿದೆ. ಎಲ್ಲರೂ ಬೋಟ್‌ನಲ್ಲಿಯೇ ಇದ್ದೇವೆ. ಸಮುದ್ರ ಇನ್ನಷ್ಟು ಶಾಂತವಾದರಷ್ಟೇ ಇಲ್ಲಿಂದ ಹೊರಡಲು ಸಾಧ್ಯ ಎಂದು ಬೋಟ್‌ನಲ್ಲಿರುವ ಅಲೆಕ್ಸ್‌ ಅವರು ಸಂಬಂಧಿಕರಿಗೆ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಎನ್‌ಎಂಪಿಟಿ ಅಥವಾ ಮೀನುಗಾರಿಕಾ ದಕ್ಕೆಗೆ ಬರುವುದಾಗಿ ಮೀನುಗಾರರು ತಿಳಿಸಿದ್ದಾರೆ.

ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಬಂದರಿನ ಆಡಳಿತ ಮಂಡಳಿ ದೋಣಿಯು ಎನ್‌ಎಂಪಿಟಿ ಪ್ರವೇಶಿಸಲು ಒಪ್ಪಿದೆ ಎಂದು ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.