ಕಸ ವಿಲೇವಾರಿಗೆ ಬದಲಿ ಜಾಗ: ಬೆಟ್ಟಂಪಾಡಿ ಗ್ರಾ.ಪಂ. ಆಗ್ರಹ

Team Udayavani, Apr 10, 2017, 3:08 PM IST

94nlp2.jpg

ಬೆಟ್ಟಂಪಾಡಿ: ಗ್ರಾ.ಪಂ.ಗೆ ಕಸ ವಿಲೇವಾರಿ ಮಾಡಲು ಬದಲಿ ಜಾಗವನ್ನು ಗುರುತಿಸಿ ಕೊಡುವಂತೆ ಕಂದಾಯ ಇಲಾಖೆಗೆ ಬರೆಯುವುದೆಂದು ಎ. 7ರಂದು ನಡೆದ ಸಾಮಾನ್ಯಸಭೆಯಲ್ಲಿ ನಿರ್ಣಯಿಸಲಾಯಿತು.

ಅಧ್ಯಕ್ಷೆ ಉಮಾವತಿ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗ್ರಾಮದ ಪುದ್ದೊಟ್ಟಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಘಟಕ ಸ್ಥಾಪಿಸಲು ಕಂದಾಯ ಇಲಾಖೆ ಸ್ಥಳ ಗುರುತಿಸಿ ಪಂಚಾಯತ್‌ಗೆ ವರ್ಗಾಯಿಸಿದ ಜಾಗವನ್ನು ಸಮತಟ್ಟು ಮಾಡಲಾಗಿತ್ತು. ಆದರೆ ಈಗ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಅಲ್ಲದೆ ಸುತ್ತಮುತ್ತ ಅದರ ದುರ್ವಾಸನೆಯ ಸಮಸ್ಯೆ, ಕಲುಷಿತ ನೀರು ಕೃಷಿ ಭೂಮಿಗೆ ನುಗ್ಗಿ ಜಮೀನು ಹಾಳಾಗುವ ಭೀತಿ ವ್ಯಕ್ತಪಡಿಸಿ ನಾಗರಿಕರು ದೂರು ನೀಡಿದ್ದಾರೆ. ಘಟಕಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಬಾರದು ಎಂದು ತಾಲೂಕು ಆರೋಗ್ಯಾಧಿಕಾರಿಯವರಿಂದ ಪತ್ರ  ಪಂಚಾಯತ್‌ಗೆ ಬಂದ ಬಗ್ಗೆ ಚರ್ಚೆ ನಡೆಸಲಾಯಿತು. 

ಬಳಿಕ ಬೇರೆ ಜಾಗವನ್ನು ಗುರುತಿಸಿಕೊಡುವಂತೆ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಯಿತು. 

ವರ್ತಕರಿಂದ ವಿಲೇವಾರಿ 
ಪುದ್ದೊಟ್ಟಿನಲ್ಲಿ ಘನ ತ್ಯಾಜ್ವ ವಿಲೇವಾರಿ ಘಟಕಕ್ಕೆ ಆಕ್ಷೇಪ ಬಂದ ಕಾರಣ ಬದಲಿ ವ್ಯವಸ್ಥೆ ಆಗುವವರೆಗೆ  ಅಂಗಡಿಗಳ ತ್ಯಾಜ್ಯ ನಿರ್ವಹಣೆ ಅಸಾಧ್ಯ. ಅಂಗಡಿಯವರು ಅವರ ಕಸವನ್ನು ಎಲ್ಲೊಂದರಲ್ಲಿ ಹಾಕುವಂತಿಲ್ಲ. ಘನ ತ್ಯಾಜ್ಯ ಘಟಕ ಆಗು ವವರೆಗೆ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡ ಬೇಕು ಎಂದು ನಿರ್ಧರಿಸಿ ಈ ಕುರಿತುಅವರಿಗೆ ತಿಳಿಸುವ ಬಗ್ಗೆ ನಿರ್ಣಯಿಸಲಾಯಿತು.

ಶಾಲೆ ದುರಸ್ತಿಗೆ ಆಗ್ರಹ
ಕುಸಿದು ಬೀಳುವ ಸ್ಥಿತಿಯಲ್ಲಿರುವ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೊಳಿಸಲು ಆಗ್ರಹಿಸಿ ಜಿ.ಪಂ.ಗೆ ಬರೆಯಲು ನಿರ್ಣಯಿಸಲಾಯಿತು.

ಇತ್ತೀಚೆಗೆ ನಿಧನ ಹೊಂದಿದ ಹಿರಿಯರಾದ ಆನಾಜೆ ಗಣೇಶ ರೈ ಅವರ ಬಗ್ಗೆ ಸದಸ್ಯ ವಿನೋದ್‌ ರೈ ಗುತ್ತು ಮಾತನಾಡಿದರು. ಅವರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಪ್ರಕಾಶ್‌ ರೈ, ಐತ್ತಪ್ಪ ಜಿ., ದಿನೇಶ್‌ ಜಿ., ಜಗನ್ನಾಥ ರೈ, ರಕ್ಷಣ್‌ ರೈ, ವಿನೋದ್‌ ರೈ ಗುತ್ತು.ಮೊಯಿದು ಕುಂಞೆ ಕೋನಡ್ಕ, ಭವಾನಿ ಪಿ., ಶಾಲಿನಿ ಘಾಟೆ, ದಿವ್ಯಾ ಪಿ., ಬೇಬಿ ಜಯರಾಂ, ಪುಷ್ಪಲತಾ, ಪದ್ಮಾವತಿ ಡಿ., ಪ್ರೇಮಲತಾ, ರಮೇಶ್‌ ಶೆಟ್ಟಿ ಕೊಮ್ಮಂಡ, ಪಿಡಿಒ ಶಾಂತಾರಾಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿದರು. ಸಿಬಂದಿ ರಾಮಣ್ಣ, ಸಂದೀಪ್‌, ಚಂದ್ರಾವತಿ, ಸವಿತಾ ಸಹಕರಿಸಿದರು.

ಟಾಪ್ ನ್ಯೂಸ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Marriage of 72-year-old man with 12-year-old girl; The father sold his daughter for money!

Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!

2

Viral Video: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್‌ ಮಸಾಜ್‌ ಮಾಡಿದ್ದ ಕ್ಷೌರಿಕ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

ʼಪುಷ್ಪ-2ʼ ರಿಲೀಸ್‌ ಮುಂದೂಡಿಕೆ ಬೆನ್ನಲ್ಲೇ ‘Double iSmart’ ರಿಲೀಸ್‌ ಡೇಟ್‌ ಅನೌನ್ಸ್

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.