ಲಾರಿ ಚಾಲಕನ ಮೇಲೆ ಹಲ್ಲೆ ; ಹಣ ಲೂಟಿ


Team Udayavani, Apr 10, 2017, 4:40 PM IST

robbery.jpg

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಂಜಿರದಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಬೆಂಗಳೂರಿನಿಂದ ಉಡುಪಿಗೆ ಸಿಮೆಂಟ್‌ ಲೋಡ್‌ ಹೇರಿಕೊಂಡು ಬರುತ್ತಿದ್ದ ಲಾರಿ ಚಾಲಕ ಚಿಕ್ಕಮಗಳೂರು ನಿವಾಸಿ ರಾಘವೇಂದ್ರ (40) ಹಲ್ಲೆಗೊಳಗಾದವರು. ರಾಘವೇಂದ್ರ ಬೆಂಗಳೂರಿನಿಂದ ಸಿಮೆಂಟ್‌ ತುಂಬಿದ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಎಂಜಿರ ಬಳಿ ಮೂತ್ರಶಂಕೆಗೆಂದು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದರು. ಪುನಃ ಲಾರಿಯನ್ನು ಏರುವ ವೇಳೆಗೆ ಬೆಂಗಳೂರು ಕಡೆಯಿಂದ ಬಂದ ಕೆಂಪು ಬಣ್ಣದ ಮಹಿಂದ್ರಾ ಕಾರಿನಿಂದ ಇಳಿದ ಐವರ ತಂಡ ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿತು. ತಮಿಳು ಭಾಷೆ ಮಾತನಾಡುತ್ತಿದ್ದ ಅವರು ರಾಘವೇಂದ್ರ ಅವರ ಕಾಲು, ಎದೆ, ಬೆನ್ನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದರು. ಪ್ರತಿರೋಧ ಒಡ್ಡಿದ್ದರಿಂದ ಚಾಲಕನ ಮೇಲೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ 17,000 ರೂ. ನಗದು, ಮೊಬೈಲ್‌, ಎಟಿಎಂ ಕಾರ್ಡ್‌ ಮೊದಲಾದವುಗಳನ್ನು ಕಸಿದುಕೊಂಡು ಮಂಗಳೂರು ಕಡೆಗೆ ಪರಾರಿಯಾದರು.  ಗಾಯ ಗೊಂಡ ಚಾಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆ ನಡೆಸಿ ಪರಾರಿಯಾಗುವ ವೇಳೆ ಆರೋಪಿಗಳು ಮೊಬೈಲ್‌ ಫೋನ್‌ ಒಂದನ್ನು ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಬೈಲ್‌ ಮೂಲಕ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ದರೋಡೆ 
ಸಕಲೇಶಪುರದಿಂದ ಉಪ್ಪಿನಂಗಡಿ ವರೆಗೆ ಹೆದ್ದಾರಿಯ ಅಲ್ಲಲ್ಲಿ ನಿರ್ಜನ ಪ್ರದೇಶಗಳಿರುವುದರಿಂದ ಈ ಭಾಗದಲ್ಲಿ ದರೋಡೆ ಇನ್ನಿತರ ದುಷ್ಕೃತ್ಯಗಳು ನಡೆಯುತ್ತಿದ್ದು ಎರಡು ದಿನಗಳ ಹಿಂದೆ ಶಿರಾಡಿ ಬಳಿ ದರೋಡೆ ನಡೆದು ಲಕ್ಷಾಂತರ ರೂ. ದೋಚಿದ ಘಟನೆ ಬೆನ್ನಿಗೇ ಪ್ರಕರಣ ಮರುಕಳಿಸಿರುವುದು ರಾತ್ರಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಹೈವೇ ಪ್ಯಾಟ್ರೋಲ್‌ ವಾಹನ ಕಾರ್ಯಾಚರಣೆಗೆ ಇಳಿದಿದ್ದರೂ ರಾತ್ರಿ ವೇಳೆ ಈ ಭಾಗದಲ್ಲಿ ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ದರೋಡೆ ನಡೆದಿರುವುದು, ತೀರಾ ತಡರಾತ್ರಿಯ ಮೊದಲೇ ದರೋಡೆ ನಡೆಸಿರುವುದನ್ನು ಗಮನಿಸಿದರೆ ಈ ಭಾಗದಲ್ಲಿ ದರೋಡೆಕೋರರ ತಂಡ ಸಕ್ರಿಯವಾಗಿರುವ ಅನುಮಾನ ಕಾಣುತ್ತಿದೆ. 

ರಾತ್ರಿ ವೇಳೆ ಮರಳು, ಡಾಮರು, ಡೀಸೆಲ್‌ ಕಳವು  ಮೊದಲಾದ ಅಕ್ರಮ ಚಟುವಟಿಕೆಗಳನ್ನು ನಡೆಸುವ ತಂಡಗಳು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್‌ಪಿ ರವೀಶ್‌ ಸಿ.ಆರ್‌., ಧರ್ಮಸ್ಥಳ ಠಾಣೆ ಸರ್ಕಲ್‌ ಇನ್ಸ್‌ ಪೆಕ್ಟರ್‌ ನಾಗೇಶ್‌ ಕದ್ರಿ, ಪಿಎಸ್‌ಐ ರಾಮ ನಾಯಕ್‌ ಹಾಗೂ ನೆಲ್ಯಾಡಿ ಹೊರ ಠಾಣಾ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದರು. 
ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ವ್ಯಕ್ತಿಗೆ ಚೂರಿ ಇರಿತ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Kukke Shree Subrahmanya ದೇವರ ನಿತ್ಯೋತ್ಸವ ಸಮಾಪ್ತಿ

Sullia: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಢಿಕ್ಕಿ

Sullia: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಢಿಕ್ಕಿ

ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ

ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ

ನಮಗೆ ಬಸ್‌ ಬೇಕೇ ಬೇಕು: ಬಸ್‌ ಸಿಗದೆ ಸಾವಿರಾರು ವಿದ್ಯಾರ್ಥಿಗಳ ಪರದಾಟ

ನಮಗೆ ಬಸ್‌ ಬೇಕೇ ಬೇಕು: ಬಸ್‌ ಸಿಗದೆ ಸಾವಿರಾರು ವಿದ್ಯಾರ್ಥಿಗಳ ಪರದಾಟ

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-aaaa

Mangaluru; ಅತೀ ವೇಗದ ವಾಹನ ಚಾಲನೆ ತಡೆಗೆ ಮೊಬೈಲ್ ಸ್ಪೀಡ್ ರಾಡಾರ್ ಗನ್ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.