ಕಂಬಳಕ್ಕೆ ಸೆನ್ಸರ್‌, ಓಟಗಾರರಿಗೆ ವಿಮೆ: ಡಾ| ಎಂ.ಎನ್‌.ಆರ್‌.

ಕಂಬಳ ಓಟಗಾರ ಸಾಧಕರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ ಸಮ್ಮಾನ

Team Udayavani, Feb 26, 2020, 5:03 AM IST

kambala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‌ಸಿಡಿಸಿಸಿ) ಬ್ಯಾಂಕ್‌ ವತಿಯಿಂದ ಕಂಬಳದಲ್ಲಿ ಹೆಚ್ಚು ನಿಖರ ಮತ್ತು ಶೀಘ್ರ ಫ‌ಲಿತಾಂಶಕ್ಕೆ ಅನುಕೂಲವಾಗುವ ಸೆನ್ಸರನ್ನು ಅಳವಡಿಸಲಾಗುವುದು ಹಾಗೂ ಕಂಬಳ ಓಟಗಾರರಿಗೆ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ.

ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಕಂಬಳದಲ್ಲಿ ದಾಖಲೆಗಳನ್ನು ಮಾಡಿರುವ, ಹಲವು ವರ್ಷಗಳಿಂದ ಕೋಣಗಳನ್ನು ಓಡಿಸು ತ್ತಿರುವ ಓಟಗಾರರನ್ನು ಸಮ್ಮಾನಿಸಿ ಮಾತನಾಡಿದರು.

ಓಟಗಾರರಿಂದಾಗಿ ಕಂಬಳ ಇಂದು ಅಂತಾರಾಷ್ಟ್ರೀಯವಾಗಿ ಗುರುತಿ ಸಲ್ಪಡುತ್ತಿದೆ. ಹೊಸ ಮಾದರಿಯ ಸೆನ್ಸರ್‌ ಅಳವಡಿಸಲು 4 ಲ.ರೂ. ತಗಲಲಿದ್ದು ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯವರು ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಮನವಿ ಸಲ್ಲಿಸಿದ್ದರು. ಸೆನ್ಸರ್‌ ಅಳವಡಿಸಿದರೆ ನಿಖರ ಫ‌ಲಿತಾಂಶ ದೊರೆಯುತ್ತದೆ. ಸಮಯ ಕೂಡ ಉಳಿಯುತ್ತದೆ. ಇದರಿಂದಾಗಿ ಈ ಮನವಿಯನ್ನು ಬ್ಯಾಂಕ್‌ ಪುರಸ್ಕರಿಸುತ್ತದೆ ಎಂದರು.

ದಾಖಲೆ ನಿರ್ಮಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ, ಬಜಗೋಳಿಯ ನಿಶಾಂತ ಶೆಟ್ಟಿ ಅವರಿಗೆ ತಲಾ 25,000 ರೂ. ನೀಡಿ ಸಮ್ಮಾನಿಸಲಾಯಿತು. ಈ ಹಿಂದೆ ದಾಖಲೆ ನಿರ್ಮಿಸಿರುವ ಓಟಗಾರರಾದ ಇರ್ವತ್ತೂರು ಆನಂದ, ಹಕ್ಕೇರಿ ಸುರೇಶ ಶೆಟ್ಟಿ, ಅಳದಂಗಡಿ ರವಿ ಹಾಗೂ ಪಣಪೀಲು ಪ್ರವೀಣ್‌ ಕೋಟ್ಯಾನ್‌ ಅವರಿಗೆ ತಲಾ 10,000 ರೂ. ನೀಡಿ ಗೌರವಿಸಲಾಯಿತು. ಹಿರಿಯ ಓಟಗಾರರಾದ ಪೇಜಾವರ ಭಾಸ್ಕರ್‌, ವೀರಕಂಬ ಜಯಂತ ಶೆಟ್ಟಿ, ನಕ್ರೆ ಜಯಕರ ಮಡಿವಾಳ, ಪಲಿಮಾರು ದೇವೇಂದ್ರ ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ ಸಾಣೂರು, ಈದು ಅಜಿತ್‌ ಕುಮಾರ್‌, ವಿಜಯ ಕುಮಾರ್‌ ಕಂಗಿನಮನೆ, ಮಾರ್ನಾಡು ರಾಜೇಶ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ಯೋಗ ದಲ್ಲಿ ಗಿನ್ನೆಸ್‌ ದಾಖಲೆ ಮಾಡಿದ ಬಾಲ ಸಾಧಕಿ ತನುಶ್ರೀ ಪಿತ್ರೋಡಿ ಅವರನ್ನು ಸಮ್ಮಾನಿಸಲಾಯಿತು.
ನಿರ್ದೇಶಕರಾದ ಡಾ| ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ಭಾಸ್ಕರ ಕೋಟ್ಯಾನ್‌, ಶಶಿಕುಮಾರ್‌ ರೈ ಬಾಳ್ಯಟ್ಟು , ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ, ವಿಜಯ ಕುಮಾರ್‌ ಕಂಜಿಲಮನೆ, ಗುಣಪಾಲ ಕಡಂಬ, ಪ್ರಸಾದ್‌ ಕೌಶಲ್‌ ಶೆಟ್ಟಿ, ಸದಾಶಿವ ಉಳ್ಳಾಲ್‌, ಕೊಂಡೆಟ್ಟು ಸುಕುಮಾರ ಶೆಟ್ಟಿ, ಶ್ರೀಧರ್‌, ಚಿತ್ತರಂಜನ್‌ ಭಂಡಾರಿ, ಅರುಣ್‌ ಶೆಟ್ಟಿ, ಜಯಪ್ರಕಾಶ್‌ ಉಪಸ್ಥಿತರಿದ್ದರು.

100 ಮಂದಿಗೆ ವಿಮೆ
ಪ್ರಸ್ತುತ ಒಂದು ಕಂಬಳಕ್ಕೆ ಕಂಬಳ ಆಯೋಜಿಸುವವರು ಸೆನ್ಸರ್‌ಗೆ
30,000 ರೂ. ಖರ್ಚು ಮಾಡುತ್ತಿದ್ದಾರೆ. ನಾವು ಸೆನ್ಸರ್‌ಗೆ 18,000 ರೂ. (ಸರ್ವೀಸ್‌ ಚಾರ್ಜ್‌) ಮಾತ್ರ ಪಡೆಯುತ್ತೇವೆ. ಅಲ್ಲದೆ 100 ಮಂದಿ ಓಟಗಾರರಿಗೆ ವಿಮಾ ಸೌಲಭ್ಯವನ್ನು ಒದಗಿಸಿಕೊಡಲಾಗುವುದು ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ಟಾಪ್ ನ್ಯೂಸ್

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ

Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.