ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮೀನಮೇಷ

Team Udayavani, Sep 22, 2018, 10:06 AM IST

shiradi.jpg

ಸುಬ್ರಹ್ಮಣ್ಯ: ಅತಿವೃಷ್ಟಿ ಸಂದರ್ಭ ಭೂಕುಸಿತದಿಂದಾಗಿ ಹಾನಿಗೀಡಾಗಿರುವ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾರ್ಯಕ್ಕೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಇಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲವಾದ್ದರಿಂದ ಸರಕು ಸಾಗಾಟ ಲಾರಿಗಳ ಚಾಲಕರು, ವ್ಯಾಪಾರಸ್ಥರು, ಶ್ರಮಿಕ ವರ್ಗದವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಜನರ ಸಹನೆಯ ಕಟ್ಟೆಯೂ ಒಡೆಯುತ್ತಿದೆ. ಗುಂಡ್ಯದಿಂದ ಹೆಗ್ಗದ್ದೆ ತನಕ ಕಾಂಕ್ರೀಟ್‌ ರಸ್ತೆ 12 ಕಡೆ ಭೂಕುಸಿದಿದೆ. ಹಲವು ಕಡೆ ಹೊಳೆ ಬದಿಯ ರಸ್ತೆಯ ಮಣ್ಣು ಜರಿದಿದೆ. ಅಲ್ಲೆಲ್ಲ ಮರಳಿನ ಚೀಲ ಜೋಡಿಸಿ ಟರ್ಪಾಲು ಮುಚ್ಚಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಇದರ ಹೊರತು ಈ ಮಾರ್ಗದಲ್ಲಿ ಯಾವುದೇ ತುರ್ತು ಕಾಮಗಾರಿಗೆ ಗಮನ ಹರಿಸಿಲ್ಲ.

ಇಂದು ಗುಂಡ್ಯದಲ್ಲಿ  ಪ್ರತಿಭಟನೆ
ಶಿರಾಡಿ ಘಾಟಿ ರಸ್ತೆ ಬಂದ್‌ ಮಾಡಿ ದ.ಕ. ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಮಾಡಿರುವ ಆಡಳಿತ ವ್ಯವಸ್ಥೆಯ ಕ್ರಮ ಖಂಡಿಸಿ, ಸಾರಿಗೆ ಬಸ್‌ ಸಹಿತ ಅಗತ್ಯ ಘನವಾಹನಗಳಿಗೆ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸುವಂತೆ ಆಗ್ರಹಿಸಿ ಮಲೆ ನಾಡು ಜನಹಿತ ರಕ್ಷಣಾ ವೇದಿಕೆ ಸೆ. 22ರಂದು ಗುಂಡ್ಯ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಮಲೆ ನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ ಶಿರಾಡಿ ತಿಳಿಸಿದ್ದಾರೆ.

9 ತಿಂಗಳು ಬಂದ್‌
ಈ ರಾ.ಹೆ.ಯನ್ನು 2ನೇ ಹಂತದಲ್ಲಿ ಕಾಂಕ್ರೀಟ್‌ ಹಾಸಲು ಜನವರಿ 19ರಿಂದ ಬಂದ್‌ ಮಾಡಲಾಗಿತ್ತು. ಬಳಿಕ ಜೂನ್‌ 15ರಿಂದ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಲಾಗಿತ್ತು. ಈ ಅವಧಿಯಲ್ಲಿ ಮಳೆ ಬಂದು ಅಲ್ಲಲ್ಲಿ ಭೂಕುಸಿತವಾದ ಕಾರಣ ಪುನಃ ವಾಹನ ಸಂಚಾರ ನಿಷೇಧಿಸಲಾಗಿತ್ತು. ಕೇವಲ 10 ದಿನ ಮಾತ್ರ ಲಘು ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿತ್ತು. 

ಕಳೆದ 9 ತಿಂಗಳಿಂದ ಈ ಮಾರ್ಗದಲ್ಲಿ ವಾಹನ ಓಡಾಟವಿಲ್ಲದೆ ಲಾರಿ ಚಾಲಕ-ಮಾಲಕರು, ಗುಂಡ್ಯ, ನೆಲ್ಯಾಡಿ, ಮಾರನಹಳ್ಳಿಯ ವ್ಯಾಪಾರಸ್ಥರು ವ್ಯಾಪಾರ ವಿಲ್ಲದೆ ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲೂ ಅಸಾಧ್ಯವಾಗಿದೆ. ಸಾಲ ಮಾಡಿ ವಾಹನ ಖರೀದಿಸಿದ ಕೆಲವರು ಕಂತು ಕಟ್ಟಲು ಸಾಧ್ಯವಾಗದೆ ವಾಹನ ಮಾರಿದ್ದಾರೆ. ಕಷ್ಟ ಕೇಳಲು ಯಾರೂ ಬಂದಿಲ್ಲ ಎಂದು ಗುಂಡ್ಯದ ಗ್ಯಾರೇಜ್‌ ಮೆಕ್ಯಾನಿಕ್‌ ಸುರೇಶ್‌ ಅಳಲು ತೋಡಿಕೊಂಡರು.

ಒಂದೇ ದಿನ 9 ಅಪಘಾತ !
ರಸ್ತೆ ಕುಸಿತದ ಸ್ಥಳಗಳಲ್ಲಿ ಲಘು ವಾಹನಗಳು ಏಕಮುಖವಾಗಿ ಸಂಚರಿಸುತ್ತಿವೆ. ಬುಧವಾರ ಒಂದೇ ದಿನ ಈ ಮಾರ್ಗದಲ್ಲಿ 9 ಕಡೆ ಅಪಘಾತ ಸಂಭವಿಸಿದೆ. ದೊಡ್ಡತಪ್ಪಲು ಮತ್ತು ದೋಣಿಗಲ್‌ನಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಂಡುಬರುತ್ತಿದೆ. ಹೆದ್ದಾರಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಕೂಡ ಅರ್ಧಕ್ಕೆ ನಿಂತಿದೆ. ಮಣ್ಣನ್ನು ತೆರವುಗೊಳಿಸಿದರೆ ವಾಹನಗಳ ಸಂಚಾರಕ್ಕೆ ಮತ್ತಷ್ಟು ಅನುಕೂಲ ವಾಗುತ್ತಿತ್ತು. 

ಟಾಪ್ ನ್ಯೂಸ್

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

1-sads-das

Kanchanjunga Express ‘ಕವಚ’ ಇದ್ದಿದ್ದರೆ ರೈಲು ಅಪಘಾತ ತಪ್ಪುತ್ತಿತ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.