ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರು ಇಂದು ಸಂಕಷ್ಟದಲ್ಲಿ


Team Udayavani, Apr 10, 2017, 12:59 PM IST

dvg5.jpg

ದಾವಣಗೆರೆ: ರಾಜ್ಯ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಾರ್ಮಿಕ ವರ್ಗ ಇಂದು ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್‌ ಆರೋಪಿಸಿದ್ದಾರೆ. ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕಟ್ಟ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌(ಸಿಐಟಿಯು)ನ ಜಿಲ್ಲಾ ಸಮಿತಿಯಿಂದ ಕಟ್ಟಡ ಕಾರ್ಮಿಕರ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.

ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಬಡ ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಚಳಿ, ಬೇಸಿಗೆ ಕಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಕಾಮಗಾರಿ ಸಿಗುತ್ತವೆ. ಆದರೆ, ಸರ್ಕಾರಗಳ ತಪ್ಪು ನೀತಿಯಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಕಾಲ ಕಳೆಯುವ ಸ್ಥಿತಿ ಬಂದಿದೆ. ಮರಳು ಸಿಗದೇ ಇರುವುದು, ನೋಟು ರದ್ದತಿ ಕ್ರಮದಿಂದ ಈ ಬಾರಿ ಸುಮಾರು 4.5 ಕೋಟಿ ಜನ ಬೀದಿಪಾಲಾಗಿದ್ದಾರೆ ಎಂದು ಹೇಳಿದರು.

ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸಾಲದ್ದಕ್ಕೆ ಸರ್ಕಾರದ ಮರಳು ನೀತಿಯಿಂದ ಕಾಮಗಾರಿಗೆ ಮರಳು ಸಿಗದಂತಾಗಿದೆ. ಎಂ-ಸ್ಯಾಂಡ್‌ ಗುಣಮಟ್ಟಕ್ಕೆ ಖಾತ್ರಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶದಂತೆ ಮರಳುಗಾರಿಕೆಗೆ ಸರ್ಕಾರ ಅವಕಾಶ ಕೊಡಬೇಕು. ಎಂ-ಸ್ಯಾಂಡ್‌ ಬಗೆಗಿನ ಗೊಂದಲಗಳನ್ನು ನಿವಾರಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ, ನಕಲು ನೋಟು ಹಾವಳಿ ತಡೆಗಟ್ಟುವ ಸಲುವಾಗಿ ನೋಟ್‌ ರದ್ಧತಿ ಮಾಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡರು. ಆದರೆ, ಇದರಿಂದಾಗಿ ಈಗಲೂ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಸಾಲ ಮರುಪಾವತಿಸದ ಉದ್ಯಮಿಗಳಿಂದ ದಿವಾಳಿ ಸ್ಥಿತಿಯಲ್ಲಿದ್ದ ಬ್ಯಾಂಕುಗಳನ್ನು ರಕ್ಷಿಸುವ ಸಲುವಾಗಿ ನೋಟ್‌ ಬ್ಯಾನ್‌ ಮಾಡಲಾಗಿದೆ ಎಂದು ಆರೋಪಿಸಿದರು. 

ಬೆಲೆ ಏರಿಕೆಗೆ ತಕ್ಕಂತೆ ಕಟ್ಟಡ ಕಾರ್ಮಿಕರ ಕೂಲಿ ಹೆಚ್ಚಿಸಬೇಕು. ಕನಿಷ್ಟ 3 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ವಸತಿ, ನಿವೇಶನ ಸೌಲಭ್ಯ ಕಲ್ಪಿಸಬೇಕು. ಮƒತ ಕಾರ್ಮಿಕರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಈಗಿರುವ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಕಲ್ಯಾಣ ಮಂಡಳಿಯಲ್ಲಿ ಸೆಸ್‌ ರೂಪದಲ್ಲಿ ಸಂಗ್ರಹಗೊಂಡಿರುವ 5400 ಕೋಟಿ ಹಣವನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಒತ್ತಾಯಿಸಿದರು. 

ಫೆಡರೇಷನ್‌ ತಾಲೂಕು ಅಧ್ಯಕ್ಷ ತಿಮ್ಮಣ್ಣ ಹೊನ್ನೂರು ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಲಕ್ಷ್ಮೀ ನಾರಾಯಣಭಟ್‌, ಸಂಚಾಲಕ ಜೆ. ಲೋಕೇಶ ನಾಯ್ಕ, ಇ.ಶ್ರೀನಿವಾಸ, ಎಂ.ಡಿ. ರμಕ್‌ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.  

Ad

ಟಾಪ್ ನ್ಯೂಸ್

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

fadnavis

Maharashtra; ಧಾರ್ಮಿಕ ಸ್ಥಳಗಳಿಂದ 3,367 ಧ್ವನಿವರ್ಧಕಗಳ ತೆರವು : ಸಿಎಂ ಫಡ್ನವಿಸ್

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ತಿರುಪತಿ ದೇಗುಲದ 1000 ಹಿಂದೂಯೇತರ ಸಿಬಂದಿ ಕೆಲಸ: ಕೇಂದ್ರ ಸಚಿವ

ತಿರುಪತಿ ದೇಗುಲದಲ್ಲಿ 1000 ಹಿಂದೂಯೇತರ ಸಿಬಂದಿಗಳಿಂದ ಕೆಲಸ: ಬಂಡಿ ಸಂಜಯ್ ಆರೋಪ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-desi-swami-bg

CM;ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ: ನೋಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ

renukaacharya

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮನೆಗಳಿಗೆ ಮುತ್ತಿಗೆ: ಎಂ.ಪಿ.ರೇಣುಕಾಚಾರ್ಯ

davage

Davanagere: ರೈಲಿಗೆ ತಲೆ ಕೊಟ್ಟು ತಾಯಿ – ಮಗಳು ಆತ್ಮಹ*ತ್ಯೆ

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ

Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

POLICE-5

Brahmavar: ಮದ್ಯ ಅಕ್ರಮ ಮಾರಾಟ; ಪ್ರಕರಣ ದಾಖಲು

1

Hiriydaka: ಆನ್‌ಲೈನ್‌ ವಂಚನೆ; 3.60 ಲಕ್ಷ ರೂ. ಕಳೆದುಕೊಂಡ ಯುವತಿ

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.