Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Team Udayavani, Apr 30, 2024, 9:22 AM IST

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

ಹೊನ್ನಾಳಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಾಮಾಣಿಕತೆ, ದೇಶಪ್ರೇಮ ಹಾಗೂ ಜನರ ಸುರಕ್ಷತೆ ಬಗ್ಗೆ ಇರುವ ಕಾಳಜಿ ಗಮನಿಸಿ ಮೂರನೇ ಅವಧಿಗೂ ಅವರನ್ನೇ ಪ್ರಧಾನಿಯನ್ನಾಗಿಸಲು ಸಹಕರಿಸಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.

ಸೋಮವಾರ ತಾಲೂಕಿನ ಹನುಮ ಸಾಗರ, ಎಚ್‌.ಗೋಪಗೊಂಡನಹಳ್ಳಿ, ಕತ್ತಿಗೆ, ದೊಡ್ಡೇರಹಳ್ಳಿ, ಚಿಕ್ಕೇರಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಲೋಕಸಭೆ ಚುನಾವಣೆ ಮುಗಿದರೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ. ಆದ್ದರಿಂದ ಆಮೀಷಗಳಿಗೆ ಆಸೆ ಪಡದೆ ಬಿಜೆಪಿ ಬೆಂಬಲಿಸಬೇಕು. ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ದೇಶ ಮತ್ತಷ್ಟು ಉತ್ತುಂಗಕ್ಕೆ ಹೋಗಲಿದೆ. ನೀವು ಕೊಡುವ ಒಂದೊಂದು ಮತವೂ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಹಾಗೂ ದೇಶದ ಅಭಿವೃದ್ಧಿಗಾಗಿ ಎಂಬುದನ್ನು ಗಮನದಲ್ಲಿಟ್ಟಕೊಳ್ಳಬೇಕು ಎಂದರು.

ಕಳೆದ ಹತ್ತು ವರ್ಷಗಳಲ್ಲಿ 1070 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ, 20 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ, ವಂದೇಭಾರತ್‌ ರೈಲು ಸಂಚಾರ, 51 ಸಾವಿರಕ್ಕೂ ಹೆಚ್ಚು ಪಾಸ್‌ ಪೋರ್ಟ್‌ ವಿತರಣೆ, 2888 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, 790 ಕಿಮೀ ಗ್ರಾಮ್‌ ಸಡಕ್‌ ರಸ್ತೆಗಳು, 29 ಕೇಂದ್ರಗಳಲ್ಲಿ ಜನೌಷಧ ಕೇಂದ್ರಗಳು, ತುಂಗಾ ನಾಲಾ ಆ ಧುನೀಕರಣ, 13.5 ಕೋಟಿ ರೂ. ವೆಚ್ಚದಲ್ಲಿ ಕೇಂದ್ರಿಯ ವಿದ್ಯಾ ಶಾಲೆ, ಶಾಲಾ ಕಟ್ಟಡ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿದ್ದಾರೆ. ಕಳೆದ 50 ವರ್ಷಗಳ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದೆ. ಅಂದು “ಗರೀಬಿ ಹಟಾವೋ’ ಎಂಬ ಘೋಷಣೆ ಕೂಗಲಾಗುತ್ತಿತ್ತು. ಈಗಲೂ ಅದೇ ಘೋಷಣೆ ಮುಂದುವರಿದೆ. ಹಾಗಾದರೆ 50 ವರ್ಷ ಇವರು ಯಾವ ರೀತಿ ಆಡಳಿತ ನಡೆಸಿದರು ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಸೊಸೆ ಡಾ| ದಾಕ್ಷಾಯಣಮ್ಮ ಮಾತನಾಡಿ, ಗಾಯಿತ್ರಿ ಸಿದ್ದೇಶ್ವರ ಅವರಿಗೆ ಮೊದಲಿನಿಂದಲೂ ರಾಜಕೀಯ ಅನುಭವ ಇದೆ. ಅಲ್ಲದೆ ಅವರು ರೈತ ಮಹಿಳೆಯೂ ಆಗಿದ್ದಾರೆ. ಆದ್ದರಿಂದ ಅವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ತರಗನಹಳ್ಳಿ ರಮೇಶ ಗೌಡ, ಮುಖಂಡರಾದ ಡಿ.ಜಿ. ರಾಜಪ್ಪ, ಅರಕೆರೆ ನಾಗರಾಜ್‌, ಸಿ.ಆರ್‌. ಶಿವಾನಂದ, ಕೆ.ಇ.ನಾಗರಾಜ್‌, ಶಾಂತರಾಜ್‌ ಪಾಟೀಲ್‌, ಎ.ಬಿ. ಹನುಮಂತಪ್ಪ, ಕೆ.ವಿ. ಚನ್ನಪ್ಪ, ಎಂ.ಆರ್‌. ಮಹೇಶ್‌ ಇದ್ದರು.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Lokayukta

ದಾವಣಗೆರೆ: ಕಂದಾಯ ಅಧಿಕಾರಿ ಮತ್ತು ಎಸ್‌ಡಿಎ ಲೋಕಾಯುಕ್ತ ಬಲೆಗೆ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

ಯಾರಿಗೂ, ಯಾವ ಪಕ್ಷ ಗಳಿಗೂ ರೈತರ ಕಾಳಜಿ ಇಲ್ಲ: ಎಚ್‌. ಆರ್‌. ಬಸವರಾಜಪ್ಪ

6

Davangere: ಸರಣಿ ಅಪಘಾತ; ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸೇರಿ ಇಬ್ಬರಿಗೆ ಗಂಭೀರ ಗಾಯ

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.