ವಿದ್ಯಾರ್ಥಿಗಳಿಂದ ಹೆಲ್ಮೆಟ್‌ ಬಳಕೆ ಜಾಗೃತಿ

Team Udayavani, Feb 14, 2017, 12:52 PM IST

dvg1.jpg

ದಾವಣಗೆರೆ: ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ನಗರದ ವಿವಿಧೆಡೆ ಬೀದಿ ನಾಟಕದ ಮೂಲಕ ಹೆಲ್ಮೆಟ್‌ ಬಳಕೆ ಜಾಗೃತಿ ಮೂಡಿಸಿದರು. 

ವಿದ್ಯಾರ್ಥಿಗಳು ರಾಂ ಆ್ಯಂಡ್‌ ಕೋ ವೃತ್ತ, ಅಂಬೇಡ್ಕರ್‌ ವೃತ್ತ, ವಿದ್ಯಾನಗರ, ಜಯದೇವ ವೃತ್ತ, ಅಶೋಕ ಚಿತ್ರಮಂದಿರ, ಪೂಜಾ ಇಂಟರ್‌ ನ್ಯಾಷನಲ್‌ ಹೋಟೆಲ್‌, ಕಾಳಿಕಾದೇವಿ ರಸ್ತೆಯಲ್ಲಿ ಬೀದಿ ನಾಟಕದ ಮೂಲಕ ಹೆಲ್ಮೆಟ್‌ ಬಳಕೆ ಅಗತ್ಯತೆ ಮತ್ತು ಉಪಯೋಗದ ಬಗ್ಗೆ ಜಾಗೃತಿ ಮೂಡಿಸಿದರು.

 ಬೇಕೆ ಬೇಕು ಹೆಲ್ಮೆಟ್‌  ಬೇಕು… ಕಡ್ಡಾಯವಾಗಿ ಹೆಲ್ಮೆಟ್‌ ಬಳಸಿ, ಅಮೂಲ್ಯ ಜೀವ ಉಳಿಸಿ… ಉಪ್ಪು ತಿಂದವನು ನೀರು ಕುಡಿಯಲೇಬೇಕು… ಗಾಡಿ ಹತ್ತಿದವನು ಹೆಲ್ಮೆಟ್‌ ಧರಿಸಲೇಬೇಕು… ಹೆಲ್ಮೆಟ್‌  ಇಲ್ಲದ ಪ್ರಯಾಣ ಸಾವಿಗೆ ಆಹ್ವಾನ… ಹೆಲ್ಮೆಟ್‌ ಬಳಸಿ ದಂಡ ಕಟ್ಟುವುದ ನಿಲ್ಲಿಸಿ… ಎಂಬಿತ್ಯಾದಿ ಘೋಷಣೆ ಕೂಗಿದರು.

ಎಲ್ಲ ಕಡೆ ಬೀದಿನಾಟಕದ ಜೊತೆಗೆ ಭಿತ್ತಿಪತ್ರ  ಪ್ರದರ್ಶನ, ಕರಪತ್ರ ವಿತರಿಸಲಾಯಿತು. ಹೆಲ್ಮೆಟ್‌ ಹಾಕಿಕೊಂಡು ವಾಹನ ಸವಾರಿ ಮಾಡುತ್ತಿದ್ದವರಿಗೆ ಗುಲಾಬಿ ನೀಡುವ ಮೂಲಕ ಧನ್ಯವಾದ ತಿಳಿಸಿದ ವಿದ್ಯಾರ್ಥಿಗಳು,  ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಬಳಕೆಯ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಿ, ಕಡ್ಡಾಯವಾಹಿ ಹೆಲ್ಮೆಟ್‌ ಧರಿಸುವಂತೆ ಮನವಿ ಮಾಡಿದರು. 

ವಿವಿಧ  ಭಾಗದಲ್ಲಿ ಬೀದಿನಾಟಕ ಪ್ರರ್ದಶನದ ನಂತರ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ನಗರದ ವಿವಿಧ ಭಾಗದಲ್ಲಿ ಪಥ ಸಂಚಲನ ನಡೆಸಿದರು.  ಸರ್ವೋತ್ಛ ನ್ಯಾಯಾಲಯದ ಆದೇಶದನ್ವಯ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಕಡ್ಡಾಯ. 

ದಾವಣಗೆರೆಯಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ  ಒಂದು  ವರ್ಷಕ್ಕೂ ಹೆಚ್ಚು ಕಾಲ ವಿನಾಯತಿ ನೀಡಲಾಗಿತ್ತು. ಈಚೆಗೆ ಹೆಲ್ಮೆಟ್‌ ಧಾರಣೆ ಕಡ್ಡಾಯಗೊಳಿಸಿರುವ ಪೊಲೀಸ್‌ ಇಲಾಖೆ ಜಾಗೃತಿ ಮೂಡಿಸುವ ಜೊತೆಗೆ ದಂಡ ವಸೂಲಿ ಸಹ ಮಾಡುತ್ತಿದೆ.  

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Valmiki Corporation case: Siddaramaiah should resign on moral responsibility: Bellad

Valmiki Corporation case: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬೆಲ್ಲದ್

Karnataka; ಡಿಸಿಎಂ ಅಲ್ಲ ಸಿಎಂ ಬದಲಾವಣೆ ಕೂಗು; ಶಿವಕುಮಾರ್ ಗೆ ಪಟ್ಟ ಕಟ್ಟಿ ಚನ್ನಗಿರಿ ಶಾಸಕ

Karnataka; ಡಿಸಿಎಂ ಅಲ್ಲ ಸಿಎಂ ಬದಲಾವಣೆ ಕೂಗು; ಶಿವಕುಮಾರ್ ಗೆ ಪಟ್ಟ ಕಟ್ಟಿ ಚನ್ನಗಿರಿ ಶಾಸಕ

police

Davanagere; ಅಲ್ಯೂಮಿನಿಯಂ ವೈರ್ ಕಳ್ಳ 23 ವರ್ಷಗಳ ನಂತರ ಮತ್ತೆ ಬಂಧನ

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.