ಏಕರೂಪ ತೆರಿಗೆ ಪದ್ಧತಿ ಅನುಕೂಲ

Team Udayavani, Apr 14, 2017, 1:20 PM IST

dvg5.jpg

ದಾವಣಗೆರೆ: ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಾರಿ ಒಂದು ದಿಟ್ಟ ನಿರ್ಧಾರ ಆಗಿದ್ದು, ಇದರಿಂದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಕೇಂದೀÅಯ ಅಬಕಾರಿ ಮತ್ತು ಸೇವಾ ತೆರಿಗೆ ಬೆಂಗಳೂರು ವಿಭಾಗದ ಆಯುಕ್ತ ಅಮಿತ್‌ಕುಮಾರ್‌ ಸಿನ್ಹ ಹೇಳಿದ್ದಾರೆ. 

ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ ವಿಚಾರ ಸಂಕಿರಣದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು,  ವೈವಿಧ್ಯತೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಏಕರೂಪ ತೆರಿಗೆ ಆಡಳಿತ ಒಂದು ದಿಟ್ಟ ನಿರ್ಧಾರವಾಗಿದೆ. 

ಈ ಪದ್ಧತಿ ಜಾರಿಯಿಂದ ಜನತೆಗೆ ಅನೇಕ ಅನುಕೂಲಗಳು ಇವೆ. ಈ ನಿಟ್ಟಿನಲ್ಲಿ ತೆರಿಗೆದಾರರು ವಿವರವಾಗಿ ತಿಳಿದುಕೊಂಡು ಜಿಎಸ್‌ಟಿಗೆ ವರ್ಗಾವಣೆಗೊಳ್ಳುವ ಅವಶ್ಯಕತೆ ಇದೆ ಎಂದರು. ದೇಶದ ಪರೋಕ್ಷ ತೆರಿಗೆ ಸುಧಾರಣೆಯಲ್ಲಿ ಜಿಎಸ್‌ಟಿ ಒಂದು ಪ್ರಮುಖ ಹೆಜ್ಜೆಯಾಗಿದೆ.

7 ರೀತಿಯ ಕೇಂದ್ರ ಮತ್ತು 8 ರೀತಿಯ ರಾಜ್ಯ ತೆರಿಗೆಗಳು ಜಿಎಸ್‌ಟಿಗೊಳಪಟ್ಟಿದ್ದು, ಬಹುಸಂಖ್ಯಾತ ತೆರಿಗೆಗಳ ಕಡಿತ, ವಿಳಂಬವಿಲ್ಲದೆ, ಪೇಪರ್‌ ಕೆಲಸವಿಲ್ಲದೆ ಏಕರೂಪದ ಜಿಎಸ್‌ಟಿ ನೆಟ್‌ ವರ್ಕ್‌ನಲ್ಲಿ ಕೆಲಸ ಸರಾಗವಾಗಿ ಆಗುವ ಮೂಲಕ ತೆರಿಗೆದಾರರಿಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದರು.  

ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ದಾವಣಗೆರೆ ವಲಯದ ಆಯುಕ್ತ ನಾರಾಯಣ ಸ್ವಾಮಿ ಮಾತನಾಡಿ, ಜಿಎಸ್‌ಟಿ ಒಂದು ಐತಿಹಾಸಿಕ ಆರ್ಥಿಕ ಏಕೀಕರಣವಾಗಿದೆ. ತೆರಿಗೆದಾರರು ಜಿಎಸ್‌ಟಿ ಅರ್ಥೈಸಿಕೊಂಡು ಪೂರ್ವತಯಾರಿ ನಡೆಸಿ ಜಾರಿಗೊಳಿಸಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ಜಿಎಸ್‌ಟಿ ಬಗ್ಗೆ ವಿವರವಾಗಿ ತಿಳಿದ ನಂತರ ಎಲ್ಲವೂ ಸುಲಭವಾಗುತ್ತದೆ. ಪಾರದರ್ಶಕತೆ, ತೆರಿಗೆ ಸುಧಾರಣೆ ಸೇರಿದಂತೆ ಅನೇಕ ಅನುಕೂಲಗಳು ಇವೆ ಎಂದರು. ಆಡಳಿತದಲ್ಲಿ ಪಾರದರ್ಶಕತೆ, ಸರಳ ಮತ್ತು ಸುಲಭ ತೆರಿಗೆ ವ್ಯವಸ್ಥೆ ಇದಾಗಿದೆ. ತೆರಿಗೆ ವಂಚನೆ ಕಡಿತ, ಎಲ್ಲರೂ ತೆರಿಗೆ ವ್ಯವಸ್ಥೆಗೆ ಒಳಪಡುವುದುದರಿಂದ ರಾಜ್ಯಗಳ ರಾಜಸ್ವ ಹೆಚ್ಚಿ, ಉದ್ಯೋಗಾವಕಾಶ ಹೆಚ್ಚಳ ಆಗುವುದು.

ತೆರಿಗೆ ಕಡಿತಗೊಳಿಸುವ ಸಾಧ್ಯತೆಯೂ ಇದೆ. 20 ಲಕ್ಷಗಳ ಕ್ರೋಢೀಕೃತ ವ್ಯವಹಾರಕ್ಕೆ ಜಿಎಸ್‌ಟಿ ವಿನಾಯಿತಿ ಇದ್ದು, 1.5 ಕೋಟಿಗಿಂತ ಹೆಚ್ಚಿರುವ ವ್ಯವಹಾರಗಳಲ್ಲಿ 50:50 ಅನುಪಾತದಲ್ಲಿ ರಾಜ್ಯ ಮತ್ತು ರಾಷ್ಟ್ರದ ಪಾಲು ಇರುತ್ತದೆ.  ಮದ್ಯ, ಪೆಟ್ರೋಲಿಯಂ ಗಳಂತಹ ಕೆಲ ಸರಕು ಹೊರತುಪಡಿಸಿ ಸರಕು ಮತ್ತು ಸೇವೆಗಳ ಬಹುಪಾಲು ಎಲ್ಲ ರೀತಿಯ ಪೂರೈಕೆಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು. 

ಒಂದು ಜಿಎಸ್‌ಟಿ ಯಲ್ಲಿ ಮೂರು ರೀತಿಯ ತೆರಿಗೆ ಒಳಗೊಂಡಿರುತ್ತದೆ. ತೆರಿಗೆದಾರರು ಆದಷ್ಟು ಬೇಗ ಜಿಎಸ್‌ ಟಿಗೆ ವರ್ಗಾವಣೆ ಮಾಡಿಕೊಂಡರೆ ಒಳಿತು ಎಂದು ಹೇಳಿದರು. ದಾವಣಗೆರೆ ವಲಯದ ಸಹಾಯಕ ಆಯುಕ್ತ ದ್ಯಾಮಪ್ಪ ಐರಣಿ, ಗ್ರಾಸಿಮ್‌  ಇಂಡಸ್ಟ್ರಿಯ ಉಪಾಧ್ಯಕ್ಷ ಮಹಾವೀರ ಜೈನ್‌, ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಕಿರಣ್‌ ಪಾಟಿಲ್‌, ಸುದೀಂದ್ರ ರಾವ್‌ ಮತ್ತಿತರರು ಇದ್ದರು.  

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

mp renukacharya

ಬಿಎಸ್ ವೈ ವಿರುದ್ದದ ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರಿದ್ದಾರೆ: ರೇಣುಕಾಚಾರ್ಯ

17

Priyanka Jarakiholi: ಸಮಸ್ಯೆ ಇರುವ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಪ್ರಸ್ತಾವ ಸಲ್ಲ

1-dsadadd

Congress; ಲೀಡ್ ಕೊಡಿಸದಿರುವ ಸಚಿವರ ರಾಜೀನಾಮೆಗೆ ಬಸವರಾಜ್ ವಿ. ಶಿವಗಂಗಾ ಒತ್ತಾಯ

ರಾಮಾಯಣದ ರಾಮ ದಶರಥನ ಮಗ ಅಲ್ಲ: ಭಗವಾನ್‌

ರಾಮಾಯಣದ ರಾಮ ದಶರಥನ ಮಗ ಅಲ್ಲ: ಭಗವಾನ್‌

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.