ಖಿನ್ನತೆ ಅಪಾಯದ ಕಾಯಿಲೆಯಾಗುವ ಸಾಧ್ಯತೆ


Team Udayavani, Apr 8, 2017, 1:28 PM IST

hub4.jpg

ಹುಬ್ಬಳ್ಳಿ: ಮಾನಸಿಕ ಖಿನ್ನತೆ ಸಾಮಾನ್ಯ ಕಾಯಿಲೆಯಾಗಿದ್ದು, ದಶಕದ ಹಿಂದೆ ಇದರ ಸ್ಥಾನ 10ಕ್ಕೆ ಇತ್ತು. ಇತ್ತೀಚೆಗೆ ಅದು 2ನೇ ಸ್ಥಾನಕ್ಕೆ ಬಂದಿದ್ದು, ಇದನ್ನು ಹೀಗೆ ಬಿಟ್ಟರೆ 2030ರಲ್ಲಿ ಮಾನಸಿಕ ಖಿನ್ನತೆ ಇನ್ನಿತರೆ ಕಾಯಿಲೆಗಳಿಗಿಂತ ಮೊದಲ ಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲವೆಂದು ಕಿಮ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖಿಯಸ್ಥ ಡಾ| ಮಹೇಶ ದೇಸಾಯಿ ಅಭಿಪ್ರಾಯಪಟ್ಟರು. 

ಇಲ್ಲಿನ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾನಸಿಕ ಖಿನ್ನತೆ ವಿಷಯವಾಗಿ ಉಪನ್ಯಾಸ ನೀಡಿದರು. ವಿಶ್ವದಲ್ಲಿ 30 ಕೋಟಿ ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 5 ಕೋಟಿಗೂ ಅಧಿಕ ಜನ ಇದರಿಂದ ಬಳಲುತ್ತಿದ್ದಾರೆ. 

ವಿಶ್ವ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ 20 ಜನರಲ್ಲಿ ಒಬ್ಬರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ವೃದ್ಧರಲ್ಲಿ ಇದು  ಹೆಚ್ಚು ಕಂಡುಬರುತ್ತದೆ. ಚಿಕ್ಕ ಮಕ್ಕಳಲ್ಲೂ ಖಿನ್ನತೆ ಆಗುತ್ತಿದೆ. ಈ ಕಾಯಿಲೆಗೆ ವಯಸ್ಸಿನ ಇತಿಮಿತಿ ಇಲ್ಲ. ಕಾಯಿಲೆ ಬಗ್ಗೆ ಹೇಳಿಕೊಳ್ಳಲು, ಚಿಕಿತ್ಸೆ ಪಡೆದುಕೊಳ್ಳಲು ಸಂಕೋಚ ಪಡುತ್ತೇವೆ.

ಕಾಯಿಲೆ ಬಗ್ಗೆ ಕೀಳರಿಮೆ ಇರುವುದರಿಂದ ಇದರ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಸಮಾಜದಲ್ಲಿ ಮನೋರೋಗಿಗಳನ್ನು ಅಸಡ್ಡೆಯಿಂದ ನೋಡಲಾಗುತ್ತದೆ. ಸಮಾಜದಲ್ಲಿನ ಅಜ್ಞಾನದಿಂದಾಗಿ ಖಿನ್ನತೆಗೊಳಗಾದವರನ್ನು ಬಲಿ ತೆಗೆದುಕೊಳ್ಳಲು ಆಸ್ಪದ ನೀಡಲಾಗುತ್ತಿದೆ. ಮಾನಸಿಕ ಖಿನ್ನತೆಯು ಆರೋಗ್ಯದ ಮೇಲೆ ಹಾಗೂ ಆತ್ಮಹತ್ಯೆಗೂ ಕಾರಣವಾಗಬಹುದು. 

ಜಗತ್ತಿನಾದ್ಯಂತ 1.80 ಲಕ್ಷ ಜನ ಆತ್ಮಹತ್ಯೆಗೊಳಗಾಗುತ್ತಿದ್ದಾರೆ. ಸದ್ಯ ಹೃದಯಾಘಾತ, ಲಕ್ವಾ ಮೊದಲ ಸ್ಥಾನದಲ್ಲಿದ್ದರೆ, ಮುಂದಿನ ದಿನಗಳಲ್ಲಿ ಮಾನಸಿಕ ಖಿನ್ನತೆ ಮೊದಲ ಸ್ಥಾನ ಪಡೆಯಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ನೇತ್ರತಜ್ಞ ಡಾ| ಎಂ.ಎಂ. ಜೋಶಿ, ಇಂದಿನ ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಹಾಗೂ ಹಿರಿಯರಿಗೆ ಮಾತಿಗೆ ಬೆಲೆ ಕೊಡವುದು ಕಡಿಮೆಯಾಗಿದೆ.

ನಮ್ಮ ಸಂಸ್ಕಾರ ಮರೆಯುತ್ತಿರುವುದರಿಂದಲೇ ವೃದ್ಧಾಶ್ರಮಗಳು ಸ್ಥಾಪನೆಯಾಗುತ್ತಿವೆ. ಇದನ್ನು ಬಿಟ್ಟು ಹಿರಿಯರನ್ನು ಆಧರದಿಂದ ಉಪಚರಿಸಬೇಕು. ಗೌರವಿಸಬೇಕು. ಅವರ ಅನುಭವ ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ| ಎಸ್‌.ಎಸ್‌. ಹಿರೇಮಠ, ಡಾ| ಆರ್‌.ಎನ್‌. ಜೋಶಿ ಅವರಿಗೆ ಜೀವಮಾನದ ಶ್ರೇಷ್ಠ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರೆಡ್‌ಕ್ರಾಸ್‌ ಸಂಸ್ಥೆಯ ಉಪಾಧ್ಯಕ್ಷ ಡಾ| ಜಿ.ಆರ್‌. ತಮಗೊಂಡಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ನಿರ್ದೇಶಕ ಡಾ| ಎಂ.ವಿ. ಜಾಲಿ ಉಪನ್ಯಾಸ ನೀಡಿದರು. ಡಾ| ವಿ.ಬಿ. ನಿಟಾಲಿ ಸ್ವಾಗತಿಸಿದರು. ಸುರೇಶ ಹೊರಕೇರಿ ನಿರೂಪಿಸಿದರು. ಡಾ| ಪಿ.ಎನ್‌. ಬಿರಾದಾರ ವಂದಿಸಿದರು.  

ಟಾಪ್ ನ್ಯೂಸ್

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.