

Team Udayavani, Apr 15, 2017, 3:23 PM IST
ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ 126ನೇ ಜಯಂತಿ ಅಂಗವಾಗಿ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಎಸ್‌ಸಿ ಮೋರ್ಚಾ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ| ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಚಾಲನೆ ನೀಡಿದರು.
ಇಲ್ಲಿನ ದುರ್ಗದ ಬಯಲಿನಿಂದ ಆರಂಭಗೊಂಡ ಮೆರವಣಿಗೆ ಪ್ರಧಾನ ಅಂಚೆ ಕಚೇರಿ ಎದುರಿನ ಡಾ| ಅಂಬೇಡ್ಕರ್ ವೃತ್ತ ವರೆಗೆ ನಡೆಯಿತು. ಜಗದೀಶ ಶೆಟ್ಟರ ಸೇರಿದಂತೆ ಬಿಜೆಪಿ ಧುರೀಣರು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟರ, ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್ ಹೋರಾಟ ನಡೆಸಿದರು.
ಪ್ರಧಾನಿ ಮೋದಿ ಅಂಬೇಡ್ಕರ್ ಅವರ ಪಂಚಕ್ಷೇತ್ರಗಳ ಅಭಿವೃದ್ಧಿಗೆ ಹಾಗೂ ಅವರ ತತ್ವಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿದರು. ಮಹಾಪೌರ ಡಿ.ಕೆ. ಚವ್ಹಾಣ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಲಕ್ಷ್ಮಣ ಬೀಳಗಿ, ಲಕ್ಷ್ಮೀ ಉಪ್ಪಾರ,
ಸ್ಮಿತಾ ಜಾಧವ, ಶಿವು ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ, ಶಂಕರಪ್ಪ ಬಿಜವಾಡ, ವೆಂಕಟೇಶ ಮೇಸ್ತ್ರಿ, ತಿಪ್ಪಣ್ಣ ಮಜ್ಜಗಿ, ಜಯತೀರ್ಥ ಕಟ್ಟಿ, ರಂಗನಾಯಕ ತಪೇಲಾ, ವೆಂಕಟೇಶ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಬಸವರಾಜ ಅಮ್ಮಿನಭಾವಿ, ಹನುಮಂತ ಚಲವಾದಿ, ದತ್ತಮೂರ್ತಿ ಕುಲಕರ್ಣಿ, ಶಶಿ ಬಿಜವಾಡ, ಲಕ್ಷ್ಮಣ ಕಲಾಲ ಮೊದಲಾದವರಿದ್ದರು.
Ad
BJP ಆಡಳಿತವಿರುವ ರಾಜ್ಯಗಳಲ್ಲಿ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ: ಸಂತೋಷ ಲಾಡ್ ಸವಾಲು
Hubballi: ವಿಶ್ವದಲ್ಲೇ ಭಾರತ 4ನೇ ಅತಿ ಬಲಾಢ್ಯ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ: ಜೋಶಿ
ಸಿಎಂ ಬದಲಾವಣೆ ವಿಚಾರದಲ್ಲಿ ನಾವು-ನೀವು ಮಾತನಾಡುವುದು ಅಪ್ರಸ್ತುತ: ಪ್ರಿಯಾಂಕ್ ಖರ್ಗೆ
Hubli: ಅರಳಿಕಟ್ಟಿ ಓಣಿ ಹೊಡೆದಾಟ ಪ್ರಕರಣದಲ್ಲಿ 20 ಆರೋಪಿಗಳ ಬಂಧನ
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
You seem to have an Ad Blocker on.
To continue reading, please turn it off or whitelist Udayavani.